ಕಲಬುರಗಿ | ಎಳ್ಳು, ತೊಗರಿ ಸಂಪೂರ್ಣ ನೆಲಸಮ ಮಾಡಿದ ಕಿಡಿಗೇಡಿಗಳು

Date:

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಅಮೀನಾ ಬಿ ಎಂಬುವವರ ಜಮೀನಿನಲ್ಲಿ 1 ಎಕರೆ 37 ಗುಂಟೆಯಲ್ಲಿ ಎಳ್ಳು, ತೊಗರಿ ಬೆಳೆಯಲು ಬೀಜ, ಗೊಬ್ಬರ, ಕಳೆ ತೆಗಿಸಲು ಸೇರಿದಂತೆ ಇತರೆ ಕಾರ್ಯಗಳಿಗೆ ₹2 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಜಮೀನಿನಲ್ಲಿ ಬೆಳೆದು ನಿಂತ ಬೆಳೆಯನ್ನು ಕಿಡಿಗೇಡಿಗಳು ಸಂಪೂರ್ಣ ನಾಶ ಮಾಡಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಮೀನಾ ಬಿ ತಂದೆಗೆ ಒಬ್ಬಳೆ ಮಗಳು ಇದ್ದು, ಅವರ ತಂದೆ 1 ಎಕರೆ 37 ಗುಂಟೆ ಜಮೀನು ನೀಡಿದ್ದರು. ಜಮೀನು ಅಮೀನಾ ಬಿ ಅವರ ಹೆಸರಿನಲ್ಲಿದ್ದರೂ ಅವರ ದೊಡ್ಡಪ್ಪನ ಸೊಸೆ, ಮಕ್ಕಳು ರಸೂಲ್ ಬಿ, ಗಂಡ ಬಾಬುಮಿಯ್ಯ ಜಮೀನು ವಿಚಾರದಲ್ಲಿ ಮೊದಲಿನಿಂದಲು ತಕರಾರು ಇತ್ತು. ಹಳೆಯ ದ್ವೇಷ ಇಟ್ಟುಕೊಂಡು ಅಮೀನಾ ಬಿ ಅವರ ಪತಿ ಖಾಜಾ ಹುಸೇನ್ ತೀರಿಕೊಂಡ ಬಳಿಕ ಮತ್ತೆ ಅದೇ ಹಗೆ ಸಾಧಿಸಲು ದೊಡ್ಡಪ್ಪನ ಸೊಸೆ ಮಕ್ಕಳು ಸೇರಿಕೊಂಡು 1 ಎಕರೆ 37 ಗುಂಟೆಯಲ್ಲಿ ಬೆಳೆದು ನಿಂತಿದ್ದ ಬೆಳೆಯನ್ನು ಸಂಪೂರ್ಣ ನಾಶ ಪಡಿಸಿದ್ದಾರೆ. ಇದರಿಂದ ಅಮೀನಾ ಬಿ ಅವರು ಊಟ ನೀರು ಇಲ್ಲದೆ ಹಾಸಿಗೆ ಹಿಡಿದ್ದಾರೆ.

ಅಮೀನಾ. ಬಿ. ಇವರಿಗೆ ಮೂರು ಮಂದಿ ಹೆಣ್ಣು ಮಕ್ಕಳು 3 ಮಂದಿ ಗಂಡು ಮಕ್ಕಳು. ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಯಲ್ಲಿದ್ದಾರೆ. ಇಬ್ಬರು ಗಂಡು ಮಕ್ಕಳು ಯಡ್ರಾಮಿ ತಾಲೂಕು ಮಳಿಯಲ್ಲಿ ವಾಸವಾಗಿದ್ದಾರೆ. ಇನ್ನೊಬ ಮಗನ ಜೊತೆಗೆ ಅಮೀನಾ. ಬಿ ನೆಲೋಗಿ ಅವರ ತವರಿನಲ್ಲಿ ವಾಸವಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಮೀನಾ ಬಿ ಕುಟುಂಬಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮಗೆ ಬೆಂಬಲವಾಗಿ ಹಿಂದೆ ಮುಂದೆ ಯಾರೂ ಇಲ್ಲವೆಂದು ತಿಳಿದು ನಮ್ಮ ಮೇಲೆ ದ್ವೇಷ ಸಾಧಿಸುತ್ತಾರೆ. ಇದೀಗ ಇಂಥ ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ. ಈ ವಿಚಾರವಾಗಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ” ಎಂದು ಅವಲತ್ತುಕೊಂಡರು.

ಈ ಸುದ್ದಿ ಓದಿದ್ದೀರಾ? ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಪಿಎಸ್‌ಐ ಅಶೋಕ್ ಪಾಟೀಲ್ ಮಾತನಾಡಿ, “ಸಂತ್ರಸ್ತರು ದೂರು ನೀಡಿದ್ದಾರೆ. ಇನ್ನೂ ದೂರು ದಾಖಲಿಸಿಕೊಂಡಿಲ್ಲ. ದಾಖಲಿಸಿಕೊಳ್ಳುವಂತೆ ತಿಳಿಸಿದ್ದೇನೆ” ಎಂದು ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ರಸ್ತೆ ಗುಂಡಿ ಮುಚ್ಚುವಂತೆ ರೈತ ಸಂಘ ಆಗ್ರಹ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ದೇವಸ್ಥಾನದಿಂದ ಸಾತನೂರ ಗ್ರಾಮಕ್ಕೆ ಹೋಗುವ...

ಕಲಬುರಗಿ | ಕ್ರೀಡಾಪಟುಗಳು ದುಶ್ಚಟದಿಂದ ದೂರವಿರಿ: ಮಹೇಶ್ ಹೆಗಡೆ

ಪ್ರತಿಯೊಬ್ಬ ಯುವಜನರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ನಮ್ಮ ತಾಲೂಕಿನ ಕ್ರೀಡಾಪಟುಗಳು...

ಕಲಬುರಗಿ | ಬಿತ್ತನೆ ಬೀಜ, ರಸಗೊಬ್ಬರಗಳ ದರ ಇಳಿಸುವಂತೆ ಕೆಪಿಆರ್‌ಎಸ್‌ ಆಗ್ರಹ

ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಇಳಿಸಲು ಹಾಗೂ ನಕಲಿ ಕಳಪೆ ಮಾರಾಟ...