ಕನಕಪುರ ತಾಲೂಕಿನ ಮುಗ್ಗೂರು ಅರಣ್ಯ ವ್ಯಾಪ್ತಿಯ ಅರೆಕೊಪ್ಪ ಗ್ರಾಮದ ಬಳಿ, ರೈಲ್ವೆ ಬ್ಯಾರಿಕೇಡ್‌ನ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿಕೊಂಡಿದ್ದ 22 ವರ್ಷದ ಕಾಡಾನೆಯನ್ನು ಸುಮಾರು 4 ಗಂಟೆಗಳ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುಗಡೆ ಮಾಡಿದ್ದಾರೆ.
ಅರೆಕೊಪ್ಪ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆಹಾರ ಮತ್ತು ನೀರಿನ ಅರಸಿಕೆಯಲ್ಲಿ ಕಾಡು ದಾಟಲು ಯತ್ನಿಸುತ್ತಿದ್ದ ಆನೆ ರೈಲ್ವೆ ತಡೆಗೋಡೆಯ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿಕೊಂಡಿತ್ತು.
ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಿಂದ ಹೊರಗೆ ಬಂದಿದ್ದ ಆನೆ ತಡೆಗೋಡೆ ದಾಟಲು ಪ್ರಯತ್ನಿಸುತ್ತಿದ್ದಾಗ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿಕೊಂಡಿತ್ತು.
ಕಾಡಾನೆಯ ಚೀರಾಟ ಕೇಳಿಸಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆನೆಗೆ ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದಾರೆ.
This video cannot be played in your browser. Open the video directly
ಬ್ಯಾರಿಕೇಡ್‌ನ ಕಬ್ಬಿಣದ ತಂತಿಗಳನ್ನು ಗ್ಯಾಸ್ ಕಟ್ಟರ್ ಸಹಾಯದಿಂದ ಕತ್ತರಿಸಿ, ಜೆಸಿಬಿ ಯಂತ್ರದ ನೆರವಿನಿಂದ ಆನೆಯನ್ನು ಕಬ್ಬಿಣದ ಸರಳುಗಳಿಂದ ಹೊರತೆಗೆದು ಅರಣ್ಯಕ್ಕೆ ಬಿಡಲಾಗಿದೆ.






