‘ಸಪ್ತಪದಿ ಇಲ್ಲದಿದ್ದರೆ ಅದು ಹಿಂದು ವಿವಾಹವೇ ಅಲ್ಲ’, ನೋಂದಣಿಗೆ ಕಿಮ್ಮತ್ತಿಲ್ಲ: ಗುಜರಾತ್ ಹೈಕೋರ್ಟ್‌

Date:

ಹಿಂದು ಸಂಪ್ರದಾಯದ ಪ್ರಕಾರ ಸಪ್ತಪದಿ ಸೇರಿದಂತೆ ಅಗತ್ಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದಿದ್ದರೆ, ಕೇವಲ ‘ಮದುವೆ ನೋಂದಣಿ ಪತ್ರ’ ಇಟ್ಟುಕೊಂಡು ಅದನ್ನು ಕಾನೂನುಬದ್ಧ ಹಿಂದು ವಿವಾಹ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್‌ನ ಈ ತೀರ್ಪು ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ.

- Advertisement -

ನ್ಯಾಯಮೂರ್ತಿ ಇಲೇಶ್ ಜೆ. ವೋರಾ ಮತ್ತು ಜಸ್ಟಿಸ್ ಆರ್.ಟಿ. ವಚ್ಛಾನಿ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. “ಮದುವೆ ನೋಂದಣಿ ಎಂಬುದು ಈಗಾಗಲೇ ಶಾಸ್ತ್ರೋಕ್ತವಾಗಿ ನಡೆದಿರುವ ವಿವಾಹಕ್ಕೆ ಒಂದು ಪುರಾವೆಯಷ್ಟೇ. ಅದು ಸ್ವತಃ ಹೊಸದಾಗಿ ಯಾವುದೇ ವಿವಾಹವನ್ನು ಸೃಷ್ಟಿಸಲು ಅಥವಾ ಸಿಂಧುಗೊಳಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಪ್ರಕರಣದ ಹಿನ್ನೆಲೆ

ಯುನೈಟೆಡ್ ಕಿಂಗ್‌ಡಮ್ (UK) ಮೂಲದ ವ್ಯಕ್ತಿಯೊಬ್ಬರು ತಮ್ಮದಾಗದ ಮದುವೆಯನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. “ಯುವತಿಯೊಬ್ಬರು ಮದುವೆ ನೋಂದಣಿ ಪತ್ರವನ್ನು ಹಿಡಿದುಕೊಂಡು ತನ್ನ ಪೋಷಕರ ಬಳಿ ಬಂದು, ತಾನು ಅವರ ಕಾನೂನುಬದ್ಧ ಸೊಸೆ ಎಂದು ಹಕ್ಕು ಸಾಧಿಸಿದ್ದಾರೆ. ಆದರೆ, ನಾನು ಆಕೆಯನ್ನು ಯಾವುದೇ ಹಿಂದು ಸಂಪ್ರದಾಯದಂತೆ ಮದುವೆಯಾಗಿಲ್ಲ, ಒಟ್ಟಿಗೆ ಸಂಸಾರವನ್ನೂ ಮಾಡಿಲ್ಲ. ನಾನು ಯುವತಿಯ ತಂದೆಯ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದರಿಂದ, ಉದ್ಯೋಗದಿಂದ ತೆಗೆದುಹಾಕುವ ಬೆದರಿಕೆ ಅಥವಾ ಪ್ರಮೋಷನ್ ಆಮಿಷವೊಡ್ಡಿ ಒತ್ತಡದ ಮೂಲಕ ಮದುವೆ ದಾಖಲೆಗಳಿಗೆ ತಮ್ಮ ಸಹಿ ಪಡೆಯಲಾಗಿದೆ” ಎಂದು ವಾದಿಸಿದ್ದರು.

ಈ ಹಿಂದೆ, ಇದೇ ಪ್ರಕರಣದ ವಿಚಾರಣೆ ನಡೆಸಿದ್ದ ‘ಕೌಟುಂಬಿಕ ನ್ಯಾಯಾಲಯ’ವು ವಿವಾಹ ನೋಂದಣಿ ಪತ್ರವನ್ನು ಪರಿಗಣಿಸಿ, ಪ್ರಕರಣವನ್ನು ಪರಿಪೂರ್ಣವಾಗಿ ವಿಚಾರಣೆ ನಡೆಸಬೇಕು ಎಂದು ಹೇಳಿ, ಏಕಾಏಕಿ ಮದುವೆಯನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಆ ವ್ಯಕ್ತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ ವಿಚಾರಣೆ ಮತ್ತು ತೀರ್ಪು

ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌, “ಹಿಂದು ವಿವಾಹ ಕಾಯ್ದೆ-1955ರ ಸೆಕ್ಷನ್ 7ರ ಪ್ರಕಾರ, ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಆಚರಣೆಗಳೊಂದಿಗೆ ನಡೆದ ಮದುವೆ ಮಾತ್ರ ಕಾನೂನುಬದ್ಧವಾಗಿ ಸಿಂಧುವಾಗುತ್ತದೆ. ‘ವಿವಾಹ ನೆರವೇರಿಸುವುದು’ ಎಂದರೆ ಶಾಸ್ತ್ರೋಕ್ತವಾಗಿ ಅಗತ್ಯವಿರುವ ಎಲ್ಲ ಪದ್ಧತಿಗಳನ್ನು ಪಾಲಿಸುವುದು ಎಂದರ್ಥ. ಅದು ಇಲ್ಲದಿದ್ದರೆ ಕಾನೂನಿನ ದೃಷ್ಟಿಯಲ್ಲಿ ಮದುವೆಗೆ ಮಾನ್ಯತೆಯೇ ಇರುವುದಿಲ್ಲ” ಎಂದು ಹೇಳಿದೆ.

ಈ ಲೇಖನ ಓದಿದ್ದೀರಾ?: ‘ನಾವು ಕಟ್ಟಾ ಬಿಜೆಪಿಗರೇ, ಆದರೆ…’; NEET ಪ್ರತಿಭಟನೆ ಬಳಿಕ ಯುಪಿಯಲ್ಲಿ ಬದಲಾವಣೆಯ ಬಿರುಗಾಳಿ

“ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಬರುವ ‘ನೋಂದಣಿ’ ಕೇವಲ ವಿವಾಹ ನಡೆದಿರುವುದಕ್ಕೆ ಸಾಕ್ಷಿಯಾಗಬಲ್ಲದೇ ಹೊರತು, ಸೆಕ್ಷನ್ 7ರ ಅಡಿಯ ಮೂಲ ಅಗತ್ಯತೆಗಳೇ ಇಲ್ಲದಿದ್ದಾಗ ಮದುವೆಯನ್ನು ಸಿಂಧುಗೊಳಿಸುವುದಿಲ್ಲ. ಯುವತಿಯೇ ತಮಗೆ ಯಾವುದೇ ಶಾಸ್ತ್ರೋಕ್ತ ಮದುವೆಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವಾಗ, ಕೇವಲ ಸರ್ಟಿಫಿಕೇಟ್ ಇದೆ ಎಂಬ ಕಾರಣಕ್ಕೆ ಸುದೀರ್ಘ ವಿಚಾರಣೆ ನಡೆಸುವುದು ವ್ಯರ್ಥ” ಎಂದು ನ್ಯಾಯಪೀಠ ಹೇಳಿದೆ

“ಯಾವಾಗ ಹಿಂದು ವಿವಾಹದ ಮೂಲ ಆಧಾರ ಸ್ತಂಭವಾದ ಧಾರ್ಮಿಕ ಆಚರಣೆಗಳು ನಡೆದೇ ಇಲ್ಲವೋ, ಅಂತಹ ಸಂದರ್ಭದಲ್ಲಿ ಹಿಂದು ಧರ್ಮವು ವಿವಾಹಕ್ಕೆ ನೀಡುವ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಕಾನೂನಾತ್ಮಕ ಪವಿತ್ರ ಸ್ಥಾನಮಾನ ಅಥವಾ ಸಂಸ್ಕಾರ ಅಸ್ತಿತ್ವಕ್ಕೆ ಬರುವುದೇ ಇಲ್ಲ”
—ಗುಜರಾತ್ ಹೈಕೋರ್ಟ್

ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪೊಂದನ್ನು ಉಲ್ಲೇಖಿಸಿದ ಹೈಕೋರ್ಟ್‌, “ಕೇವಲ ನೋಂದಣಿಯಾದ ತಕ್ಷಣವೇ ಅಲ್ಲಿ ಮದುವೆ ನಡೆದಿದೆ ಎಂದು ಭಾವಿಸಲು ಸಾಧ್ಯವಿಲ್ಲ. ಕೌಟುಂಬಿಕ ನ್ಯಾಯಾಲಯವು ಮೂಲ ಸತ್ಯವನ್ನು ಪರಿಶೀಲಿಸದೆ ಸುದೀರ್ಘ ತನಿಖೆಗೆ ಆದೇಶಿಸಿರುವುದು ಸಮ್ಮತವಲ್ಲ” ಎಂದು ಹೇಳಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಈ ಮದುವೆಯನ್ನು ‘ಶೂನ್ಯ ಮತ್ತು ಅಸಿಂಧು’ಎಂದು ಘೋಷಿಸಿದೆ. ಅಲ್ಲದೆ, ಅರ್ಜಿದಾರನು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಆ ನಕಲಿ ಮದುವೆ ನೋಂದಣಿ ಮತ್ತು ಪ್ರಮಾಣಪತ್ರವನ್ನು ರದ್ದುಗೊಳಿಸಲು ಅನುಮತಿ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಉತ್ತರ ಪ್ರದೇಶ: ಪ್ರಜಾಪ್ರಭುತ್ವ ಹೋರಾಟಗಾರರಿಗೆ ಅಖಿಲೇಶ್ ಮಾಸಿಕ ₹51,000 ಪಿಂಚಣಿ ಭರವಸೆ

ಉತ್ತರ ಪ್ರದೇಶದಲ್ಲಿ 2027ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಸರ್ಕಾರ ರಚಿಸಿದರೆ, 1975ರ...

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...