ಮೈಸೂರು | ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಅನ್ಯಾಯ ಪ್ರಶ್ನಿಸುತ್ತಿದೆ ಕರ್ನಾಟಕ

Date:

ಕರ್ನಾಟಕ ರಾಜ್ಯದಿಂದ ಸರಿಸುಮಾರು 4 ಲಕ್ಷ ಕೋಟಿ ರೂ. ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಪಡೆಯುತ್ತಿದೆ. ಆದರೆ, ನಮ್ಮ ಮೇಲೆಯೇ ಮಲತಾಯಿ ಧೋರಣೆ ಅನುಸರಣೆ ಮಾಡುತ್ತಿದೆ. ನಮಗೆ ನ್ಯಾಯಯುತವಾಗಿ ಸಲ್ಲಬೇಕಿದ್ದ ತೆರಿಗೆಯ ಪಾಲು ದಕ್ಕದಾಗಿದೆ. ನಮ್ಮ ಪಾಲು 1.87 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಹಿರಿಯ ಪತ್ರಕರ್ತ ಟಿ ಗುರುರಾಜ್ ಹೇಳಿದ್ದಾರೆ.

- Advertisement -

ಮೈಸೂರಿನ ಚಿಕ್ಕ ಗಡಿಯಾರದ ಬಳಿ ‘ಕರ್ನಾಟಕ ಜನರಂಗ’ ವೇದಿಕೆ 48 ಗಂಟೆಗಳ ಆಹೋರಾತ್ರಿ ಧರಣಿ ನಡೆಸಿದೆ. ಧರಣಿಯ ಸಮಾರೋಪದಲ್ಲಿ ಅವರು ಮಾತನಾಡಿದರು. “ಕೇಂದ್ರ ಸರ್ಕಾರವು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಿದ್ದು, ಕರ್ನಾಟಕವನ್ನು ಕಡೆಗಣಿಸಿದೆ. ಕೇಂದ್ರದ ಈ ಧೋರಣೆ ಖಂಡಿಸಿ ಮೈಸೂರಿನಿಂದ ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಲವು ಮಜಲುಗಳಲ್ಲಿ ಹೋರಾಟ ಗಟ್ಟಿಗೊಳ್ಳಲಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ನಾವು ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಆದರೆ, ಇದುವರೆಗೆ ಒಬ್ಬರು ಸಹ ತುಟಿಕ್ ಪಿಟಿಕ್ ಅನ್ನಲಿಲ್ಲ. ಕನ್ನಡ ನೆಲ ಜಲ, ನಾಡು ನುಡಿ, ವಿಚಾರದಲ್ಲಿ ಸದಾ ತಾರತಮ್ಯ ಎಸಗುತ್ತಿದ್ದರೂ, ಸಂಸದರು ಮೌನವಾಗಿದ್ದಾರೆ. ಅವರು ಮತ್ತೆ ಮತ ಕೇಳಲು ಬರ್ತಾರೆ, ರಾಜ್ಯದ ಕತೆ ಕೇಳಲು ಬರಲ್ಲ. ಜನರ ಕಷ್ಟ ಕೇಳಲು ಬರಲ್ಲ. ನಮಗೆ ಅನ್ಯಾಯ ಆದರೂ ಬರಲ್ಲ. ಇವರೆಲ್ಲ ಇದ್ದರೂ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿ ಬಸವಲಿಂಗಯ್ಯ ಮಾತನಾಡಿ, “ಕರ್ನಾಟಕದ ಪಾಲಿಗೆ ಅನ್ಯಾಯವಾದರು ಧ್ವನಿ ಎತ್ತದೆ ಮುಗುಮ್ಮಾಗಿರುವವರ ಸಂಸದರನ್ನು ನೋಡಿ ನಗ ಬೇಕು. ನಾಗರಿಕ ಶಕ್ತಿಯನ್ನು ಕೀಳು ಮಟ್ಟದ ರಾಜಕಾರಣಿಗಳಿಗೆ ತೋರಿಸಬೇಕು. ಭಾರತದ ಶ್ರೀಮಂತರು ದಿನೇ ದಿನೇ ಅತಿ ಶ್ರೀಮಂತರಾಗುತ್ತಿದ್ದಾರೆ. ಬಡವರು ಕಡು ಬಡವರಾಗಿ ಬಸವಳಿಯುತ್ತಿದ್ದಾರೆ. ಅದಾನಿ ಅಂಬಾನಿ ಪರವಾಗಿ ಮೋದಿ ಸರ್ಕಾರ ನಿಂತಿದೆ. ಅವರಿಬ್ಬರ ಶ್ರೀಮಂತಿಕೆ ಕಳೆದ 10 ವರ್ಷಗಳಲ್ಲಿ ಉಚ್ರಯಮಾನ ಸ್ಥಿತಿ ಕಂಡಿದೆ. ಬಡವರು ಕಷ್ಟ ಪಟ್ಟು ದುಡಿದು ಕಟ್ಟಿದ ತೆರಿಗೆ ಹಣವನ್ನು ಕೂಡ ರಾಜ್ಯಕ್ಕೆ ಕೊಡದೆ ವಂಚಿಸಿದೆ” ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್ ಮಾತನಾಡಿ, “ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದು ಧೈರ್ಯವಾಗಿ ತನ್ನ ಹಕ್ಕನ್ನ ಕೇಳಬೇಕೆಂದು. ಆದರೆ, ಇವತ್ತಿನ ಸರ್ವಾಧಿಕಾರಿ ಧೋರಣೆಯ ಆಡಳಿತ ವ್ಯವಸ್ಥೆಯಲ್ಲಿ ನಾಗರಿಕರು ಪ್ರಶ್ನೆ ಮಾಡುವುದೇ ತಪ್ಪು ಅನ್ನುವಂತಾಗಿದೆ. ಸಿದ್ದರಾಮಯ್ಯ ಬಡಬಗ್ಗರಿಗೆ ಉಚಿತವಾಗಿ ಅಕ್ಕಿ ನೀಡಿದರೆ, ಆದೆ ಮೋದಿಯವರು 29 ರೂಪಾಯಿಗೆ ಮಾರ್ತಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ತೆರಿಗೆ ಹಣವನ್ನು ನೀಡದೆ ಇರುವುದು ಸರ್ವಾಧಿಕಾರದ ಅತಿರೇಕ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ ವಿಜಯ್ ಕುಮಾರ್, ಇತಿಹಾಸ ತಜ್ಞ ನಂಜರಾಜೆ ಅರಸ್, ಜನಮನ ಗೋಪಾಲ್, ಉಗ್ರನರಸಿಂಹೆ ಗೌಡ, ಜಗದೀಶ್ ಸೂರ್ಯ, ಅಸಾದುಲ್ಲ,
ಸವಿತಾ ಮಲ್ಲೇಶ್ ಸೇರಿದಂತೆ ಹಲವು ಗಣ್ಯರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...