ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆಯ ಎರಡನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಸುತ್ತಿನಲ್ಲಿ ಎಣಿಕೆಯಾದ 14,000 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 6,161 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4,697 ಮತಗಳನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಆಲಳ್ಳಿಯಲ್ಲಿ ವೃದ್ಧೆ ಅನುಮಾನಾಸ್ಪದ ಸಾವು; ₹1.70 ಲಕ್ಷ ನಗದು, ಚಿನ್ನಾಭರಣ ನಾಪತ್ತೆ
ಎರಡು ಸುತ್ತುಗಳಲ್ಲಿ ಒಟ್ಟು 28,001 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಸಂಕನೂರ ಅವರು 12,620 ಮತಗಳನ್ನು ಹಾಗೂ ಮೋಹನ್ ಲಿಂಬಿಕಾಯಿ ಅವರು 9,091 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸಂಕನೂರ ಅವರು 3,529 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಒಟ್ಟು 4072 ಮತಗಳು ತಿರಸ್ಕೃತಗೊಂಡಿವೆ





