ಕೆಜಿಎಫ್ | ನಕಲಿ ಬಿತ್ತನೆ ಬೀಜ: ರೈತರಿಗೆ ಲಕ್ಷಾಂತರ ರೂ ನಷ್ಟ..!

Date:

ನಕಲಿ ಟೆಮೋಟೋ ಬಿತ್ತನೆ ಬೀಜವನ್ನು ವಿತರಣೆ ಮಾಡಿ ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟ ಉಂಟು ಮಾಡಿರುವ ಸೆಮಿನೀಸ್ ಕಂಪನಿಯ ವಿರುದ್ದ ಕಾನೂನು ಕ್ರಮ ಕೈಗೊಂಡು ನಷ್ಟವಾಗಿರುವ ನಂದಾಲ ಗಡ್ಡ ರೈತ ಚಂಗಾಲರೆಡ್ಡಿ ರವರಿಗೆ 50 ಲಕ್ಷ ಪರಿಹಾರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧಿಕಾರಿಗಳನ್ನು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

- Advertisement -

ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಗಡಿಭಾಗದ ನಂದಾಲಗಡ್ಡ ರೈತ ಚಂಗಾಲರೆಡ್ಡಿ ತೋಟಕ್ಕೆ ಬೇಟಿ ನೀಡಿ ಬೆಳೆ ಪರಿಶೀಲನೆ ಮಾಡಿ ಮಾತನಾಡಿದ ಅವರು,

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ...

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ ಅದಾನಿ ಪಾಲು! ಆಸ್ತಿಯ ಮೌಲ್ಯವನ್ನು ‘ಶೂನ್ಯ’ ಎಂದು ಬಿಂಬಿಸಿದ್ದು ಹೇಗೆ? ಕೊರ್ಬಾ ವೆಸ್ಟ್‌ನಲ್ಲಿ ತನ್ನದೇ ಕಂಪನಿಗೆ ತಾನೇ ಮತ ಹಾಕಿಕೊಂಡ...

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ರೈತರನ್ನು ಶೋಷಣೆ ಮಾಡುವ ನಕಲಿ ಬಿತ್ತನೆ ಬೀಜ ಹಾಗೂ ಅನಧಿಕೃತ ನರ್ಸರಿಗಳಿಗೆ ಕಡಿವಾಣ ಹಾಕಲು ಪ್ರಬಲ ಕಾನೂನು ಜಾರಿ ಮಾಡುವ ಮುಖಾಂತರ ಲಕ್ಷಾಂತರ ರೂಪಾಯಿ ಭೂಮಿ ತಾಯಿ ಮೇಲೆ ಬಂಡವಾಳ ಹಾಕಿ ಬೆವರು ಸುರಿಸಿ ಕಷ್ಟಾಪಡುವ ರೈತರನ ಬೆವರಿನ ಹನಿಯನ್ನು ಕಿತ್ತುಕೊಳ್ಳುತ್ತಿರುವ ಕಂಪನಿಗಳ ಹಟ್ಟಹಾಸಕ್ಕೆ ಕಡಿವಾಣ ಹಾಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಟೆಮೊಟೋಗೆ ಉತ್ತಮ ಬೆಲೆ ಇದ್ದು, ಬೆಳೆಯೂ ಸಹ ಸಮೃದ್ದವಾಗಿ ಬಂದಿದ್ದು, ಆದರೆ ಸಮನೀಸ್ ಕಂಪನಿಯ ಅಥಿಕ್ ತಳಿಯ ಟೊಮೊಟೋ ಸಸಿಗಳು ಗಿಡತುಂಬ ಕಾಯಿ ಬಿಟ್ಟಿದ್ದು, ಶೇಕಡ 75% ರಷ್ಟು ಮುಡ್ಡಿ ಡ್ಯಾಗ್ ಕಪ್ಪು ರೋಗ ಬಂದಿದ್ದು, ಸಂಪೂರ್ಣವಾಗಿ ಕೈಗೆ ಬಂದ ಪಸಲು ಬಾಯಿಗೆ ಬಾರದೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಪರಿಸ್ಥಿತಿ ಇದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ತೋಟಗಾರಿಕೆ ಅಧಿಕಾರಿಗಳು ರೈತರ ಪಾಲಿಗೆ ಇದ್ದು, ಇಲ್ಲದಂತೆ ವರ್ತನೆ ಮಾಡುತ್ತಿದ್ದಾರೆಂದು ಆರೋಪ ಮಾಡಿದರು.

ಬೆಳೆ ನಷ್ಟದಿಂದ ತತ್ತರಿಸಿರುವ ಯುವ ರೈತ ಭಾಸ್ಕರ್‌ರೆಡ್ಡಿ ಮಾತನಾಡಿ 25 ವರ್ಷದಿಂದ ಟೊಮೊಟೋ ಕೃಷಿಯನ್ನು ಮಾಡುತ್ತಿದ್ದೇವೆ.

ಯಾವ ವರ್ಷವು ಈ ರೀತಿ ಕಳಪೆ ಟೆಮೋಟೋ ಬೆಳೆದಿಲ್ಲ ಉತ್ತಮವಾದ ಸಸಿಗಳನ್ನು ನೀಡುತ್ತಿದ್ದ ಕಂಪನಿಗಳು ಇಂದು ತೋಟಗಾರಿಕಾ ಅಧಿಕಾರಿಗಳ ಹಿಡತ ಇಲ್ಲದೆ, ತಮಗೆ ಇಷ್ಟ ಬಂದ ಹೊಸ ತಳಿಗಳನ್ನು ಕೆಲವು ನರ್ಸರಿಗಳ ಜೊತೆ ಶಾಮೀಲಾಗಿ ರೈತರನ್ನು ವಂಚನೆ ಮಾಡುತ್ತಿದ್ದಾರೆ.

ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಗಡಿಭಾಗದ ಕಡೆ ತಲೆ ಸಹ ಹಾಕುವುದಿಲ್ಲ ಎಂದು ಆರೋಪ ಮಾಡುವ ಜೊತೆಗೆ ಈ ವರ್ಷ 4 ಎಕರೆಗೆ 10 ಲಕ್ಷ ಬಂಡವಾಳ ಹಾಕಿ ಮುಳಬಾಗಿಲಿನ ಗೋಪಿ ರವರ ನರ್ಸರಿಯಲ್ಲಿ ಸಮೀಸ್ ಕಂಪನಿಯ ಅಥಿಕ್ ಟೆಮೋಟೋ ತಳಿಯನ್ನು ತಂದು ನಾಟಿ ಮಾಡಿ ಬೆಳೆ ಸಮೃದ್ದವಾಗಿ ಬಂದ್ದರೂ ಕಪ್ಪು ಡ್ಯಾಗ್‌ನಿಂದ ಸಂಪೂರ್ಣವಾಗಿ ಬೆಳೆನಷ್ಟವಾಗಿ ಹಾಕಿದ ಬಂಡವಾಳವು ಕೈಗೆ ಸಿಗುತ್ತಿಲ್ಲ. ಉತ್ತಮ ಬೆಳೆಯಾಗಿದ್ದರೆ ಕನಿಷ್ಠ 50ಲಕ್ಷ ಲಾಭ ಬರುತ್ತಿತ್ತು ಎಂದು ಕಣ್ಣೀರು ಹಾಕಿದರು.

ಬೆಳೆ ನಷ್ಟವಾಗಿದೆ ಎಂದು ಕ್ಯಾಸಂಬಳ್ಳಿ ಹೋಬಳಿಯ ತೋಟಗಾರಿಕೆ ಅಧಿಕಾರಿಗಳಿಗೆ ಕರೆ ಮಾಡಿದರೆ ಮೊದಲು ಹಿರಿಯ ಅಧಿಕಾರಿಗಳಿಗೆ ದೂರು ಕೊಡಿ ನಂತರ ಬಂದು ಪರಿಶೀಲನೆ ಮಾಡಿ ಆ ನಂತರ ವಿಜ್ಞಾನಿಗಳಿಗೆ ಪತ್ರ ಬರೆದು ಅವರು ಬಂದು ಮಣ್ಣು ಪರೀಕ್ಷೆ ಮಾಡಿ ವರದಿ ಬಂದ ನಂತರ ಮುಂದೆ ನೋಡೋಣ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ.

ರೈತರು ಕರೆ ಮಾಡಿದಾಗ ರೈತರಿಗೆ ಸ್ಪಂಧಿಸಬೇಕಾದ ಅಧಿಕಾರಿಗಳೇ ಈ ರೀತಿ ಬೇಜವಾಬ್ದಾರಿ ಉತ್ತರ ನೀಡಿದರೆ, ಇನ್ನು ನ್ಯಾಯಕ್ಕಾಗಿ ಯಾರ ಬಳಿ ಕೇಳಬೇಕು ರೈತರಿಗೆ ಸ್ಪಂಧಿಸದೇ ಇದ್ದರೆ. ಇನ್ನು ತೋಟಗಾರಿಕೆ ಇಲಾಖೆ ಏಕೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

ಕಂಪನಿಯ ಸಿಬ್ಬಂದಿಗೆ ಕರೆ ಮಾಡಿ ತೋಟ ಹಾಳಾಗಿದೆ ಎಂದು ಹೇಳಿದರೆ ಬಂದು ನೀವು ಸರಿಯಾಗಿ ಗೊಬ್ಬರಗಳನ್ನು ನೀಡಿಲ್ಲ ನಿರ್ಲಕ್ಷ್ಯ ಮಾಡಿದ್ದೀರ ನಿಮ್ಮ ಕರ್ಮ ನಾವೇನು ಮಾಡಲು ಸಾಧ್ಯವಿಲ್ಲ ಎಂದು ರೈತರ ಮೇಲೆ ದೌರ್ಜನ್ಯ ಮಾಡುವ ಜೊತೆಗೆ ನಿಮ್ಮ ಕೈಯಲ್ಲಿ ಏನಾಗುತ್ತೋ ಮಾಡಿಕೊಳ್ಳಿ ನಾವು ಬಹುರಾಷ್ಟ್ರೀಯ ಕಂಪನಿ ನಮಗೆ ಕಾನೂನು ಸಲಹೆಗಾರರು ಇದ್ದಾರೆ ಎಂದು ರೈತರನ್ನು ಹೆದರಿಸುವ ಮಟ್ಟಕ್ಕೆ ಕಂಪನಿಗಳು ನಡೆದುಕೊಳ್ಳುತ್ತಿವೆ.

ಕೂಡಲೇ ತೋಟಗಾರಿಕಾ ಹಿರಿಯ ಅಧಿಕಾರಿಗಳು ನಕಲಿ ಟೆಮೊಟೋ ಸಸಿಗಳಿಂದ ನಷ್ಟವಾಗಿರುವ ನನಗೆ ನ್ಯಾಯ ದೊರಕಿಸಿ ಕಂಪನಿಯ ವಿರುದ್ದ ಕಾನೂನು ಕ್ರಮಕೈಗೊಂಡು ಪರವಾನಿಗೆಯನ್ನು ರದ್ದು ಮಾಡಿ ಮುಂದೆ ಈ ರೀತಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಹಾಗೂ ಕಂಪನಿಯಿಂದ 50 ಲಕ್ಷ ಪರಿಹಾರ ಕಲ್ಪಿಸಬೇಕು.

ಇಲ್ಲವಾದರೆ ನಷ್ಟ ಬೆಳೆ ಸಮೇತ ನ್ಯಾಯಕ್ಕಾಗಿ ಸ್ಥಳೀಯ ಶಾಸಕರಾದ ರೂಪಶಶಿಧರ್ ರವರ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ತೀರ್ಮಾನ ಕೈಗೊಳ್ಳುವ ಜೊತೆಗೆ ಅಲ್ಲಿಯೂ ನ್ಯಾಯ ಸಿಗದೇ ಇದ್ದರೆ ಕಂಪನಿ ವಿರುದ್ಧ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು.

ಇದನ್ನು ಓದಿದ್ದೀರಾ..? ಕೋಲಾರ | ಮೂರು ವರ್ಷಗಳಲ್ಲಿ ಕೋಲಾರ ಕ್ಷೇತ್ರಕ್ಕೆ ಒಟ್ಟು ₹ 3,834 ಕೋಟಿ‌ ಅನುದಾನ: ಶಾಸಕ ಕೊತ್ತೂರು ಮಂಜುನಾಥ್ – ಈ ದಿನ.ಕಾಮ್

ತೋಟ ವೀಕ್ಷಣಾ ಸಮಯದಲ್ಲಿ ಕಾರಿ ವಿಶ್ವನಾಥ, ಬೇತಮಂಗಲ ನಾರಾಯಣಸ್ವಾಮಿ, ಕ್ಯಾಸಂಬಳ್ಳಿ ಪ್ರತಾಪ್, ಪುತ್ತೇರಿ ರಾಜು, ಗಿರೀಶ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ನೊಂದ ರೈತರು ಹಾಜರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಕೇಂದ್ರದ ವಿರುದ್ಧ ಸಿಪಿಐಎಂ ಮುಖಂಡರಿಂದ ಮೇಣದ ಬತ್ತಿ ಹಿಡಿದು ಪ್ರತಿಭಟನೆ

ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಹೋರಾಟಗಳನ್ನು...

ಚಿಂತಾಮಣಿ | ಪೊಲೀಸರ ಮಾನವೀಯತೆ:112 ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು

ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಸಮೀಪ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಸ್ವಯಂ ಅಪಘಾತ...

ಕುಮಟಾ | ಹೊಳೆಗದ್ದೆ ಟೋಲ್ ಬಳಿ ಅಲ್ಫಾ ವೈನ್ ಶಾಪ್‌ನಲ್ಲಿ ಕಳ್ಳತನ; 2.39 ಲಕ್ಷ ರೂ. ನಗದು ದರೋಡೆ

ಕುಮಟಾ: ತಾಲೂಕಿನ ಹೊಳೆಗದ್ದೆ ಟೋಲ್ ಬಳಿಯ ಅಲ್ಫಾ ವೈನ್ ಶಾಪ್‌ನ ಶೆಟರ್...

ಉಡುಪಿ | ಮೂಲ ನಿವಾಸಿಗಳ ಮತದಾನದ ಹಕ್ಕು ಕಿತ್ತುಕೊಳ್ಳುವ ಸಂಚು: ಜ್ಞಾನಪ್ರಕಾಶ ಸ್ವಾಮೀಜಿ ಆರೋಪ

ಮೂಲನಿವಾಸಿಗಳ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಿಕೊಂಡು ಜಾಗೃತರಾದಾಗ ಮಾತ್ರ...