ಕೋಲಾರ | ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೂ ಬೆರೆಯುತ್ತಿದ್ದ ಕೆ.ವೈ ರಾಮಸ್ವಾಮಿಗೆ ಭಾವಪೂರ್ಣ ಶ್ರದ್ಧಾಂಜಲಿ

Date:

ಸದಾ ಹಸನ್ಮುಖಿಯಾಗಿ ಎಲ್ಲಾ ಸಮುದಾಯಗಳ ಜೊತೆಗೆ ಬೆರೆಯುತ್ತಿದ್ದ ಕುರುಬ ಸಮಾಜದ ಹಿರಿಯ ಚೇತನ, ಮುಗ್ಧ ಮನಸ್ಸಿನ ಕೆ.ವೈ ರಾಮಸ್ವಾಮಿ ಅವರ 80 ವರ್ಷಗಳ ಸಾರ್ಥಕ ಜೀವನದೊಂದಿಗೆ ಇಹಲೋಕದ ಪಯಣ ಮುಗಿಸಿದ್ದು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಕಾಂಗ್ರೆಸ್ ಮುಖಂಡ ಅನ್ವರ್ ಪಾಷ ತಿಳಿಸಿದ್ದಾರೆ.

- Advertisement -

ಕೋಲಾರ ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಗಿರಿಜಮ್ಮನವರ ಪತಿಯಾಗಿ ಕುರುಬ ಸಮಾಜದ ಯುವ ಮುಖಂಡ ಕೆ.ಆರ್.ರವೀಂದ್ರ ರವರ ತಂದೆಯಾದ ಕೆ.ವೈ.ರಾಮಸ್ವಾಮಿ ರವರು ಶ್ವಾಸಕೋಶದ ಸಮಸ್ಯೆಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅಸುನೀಗಿರುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಕೋಲಾರ ತಾಲ್ಲೂಕು ವೇಮಗಲ್ ಹೋಬಳಿಯ ಕರೇನಹಳ್ಳಿ ಗ್ರಾಮದಲ್ಲಿ ಜನಿಸಿ, ವಿದ್ಯಾವಂತರಾಗಿ ಬೆಮೆಲ್ ಉದ್ಯೋಗಿಯಾಗಿ, ಬೆಮೆಲ್ ಕಾರ್ಮಿಕ ಸಂಘಟನೆಯಲ್ಲೂ ಸಹ ಸಕ್ರಿಯರಾಗಿದ್ದ ರಾಮಸ್ವಾಮಿಯವರು ವಿದ್ಯಾರ್ಥಿ ದೆಸೆಯಿಂದಲೇ ಜಿಲ್ಲೆಯ ರಾಜಕೀಯ ಮುತ್ಸದ್ಧಿ ದಿವಂಗತ ಸಿ. ಬೈರೇಗೌಡರ ಒಡನಾಡಿಯಾಗಿ, ಸಹಕಾರಿ ಧುರೀಣ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸಹಪಾಠಿಯಾಗಿ ಬಹಳಷ್ಟು ರಾಜಕೀಯ ಮುಖಂಡರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು.

ಇದನ್ನು ಓದಿದ್ದೀರಾ..? ಬಾಗೇಪಲ್ಲಿ | ಎಸ್. ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ ರಾಜ್ಯಕ್ಕೆ 4ನೇ ಟಾಪರ್ ಆದ ಬಾಗೇಪಲ್ಲಿ ಯಶಸ್ವಿನಿ

ಸದಾಕಾಲ ಹಸನ್ಮುಖಿಯಾಗಿ, ಎಲ್ಲರೊಂದಿಗೂ ಸರಳವಾಗಿ ಬೆರೆಯುತ್ತಿದ್ದ, ಮುಗ್ಧ ಮನಸ್ಸಿನ ಕೆ.ವೈ.ರಾಮಸ್ವಾಮಿ ರವರ ಸಾವಿನ ಸುದ್ದಿ ಹಲವಾರು ಮನಸ್ಸುಗಳಿಗೆ ನೋವು ತಂದಿದೆ. ಆದರೆ ಸಾವನ್ನು ನಿಯಂತ್ರಿಸುವ ಶಕ್ತಿ ಯಾರಿಗೂ ಇಲ್ಲ. ಅದು ವಿಧಿಯಾಟ. ಈ ಸಂದರ್ಭದಲ್ಲಿ ಹಿರಿಯ ಚೇತನ ಕೆ.ವೈ.ರಾಮಸ್ವಾಮಿ ಯವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಬಂಧು-ಬಳಗಕ್ಕೆ, ಅವರ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸೋಣ ಎಂದು ಅನ್ವರ್ ಪಾಷ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಸಗಿ ಬಸ್‌ಗಳ ಮುಖಾಮುಖಿ ಢಿಕ್ಕಿ : ಮೂವರ ಸ್ಥಿತಿ ಗಂಭೀರ, 28 ಮಂದಿಗೆ ಗಾಯ

ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ...

ಉಡುಪಿ | ಹಿರಿಯ ಸಾಧಕರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ

ಮಂಗಳೂರು ಅಮ್ಮೆಂಬಳ ಶಂಕರ ನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ...

ಉಡುಪಿ | ‘ನಡಿಗೆ’ ಅಭಿಯಾನದಲ್ಲಿ 20 ಸಾವಿರ ಜೋಡಿ ಪಾದರಕ್ಷೆ ಸಂಗ್ರಹ

ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳನ್ನು ಹೊಸ ಪಾದರಕ್ಷೆಗಳಾಗಿ...

ಉಡುಪಿ | ಸಾಮಾಜಿಕ, ಶೈಕ್ಷಣಿಕ ಸೇವೆಗಳಿಗೆ ಸಹಕಾರಿ ಸಂಸ್ಥೆಗಳು ಆದ್ಯತೆ ನೀಡಲಿ: ದುಗ್ಗಣ್ಣ ಸಾವಂತ್

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ...