ಕೋಲಾರ |ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಅಧಿಕಾರಿಗಳಿಗೆ ಸೂಚನೆ :ಶಾಸಕ ಕೊತ್ತೂರು ಮಂಜುನಾಥ್

Date:

ಕೋಲಾರ: ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚುತ್ತಿರುವ ಬಗ್ಗೆ ಮಹಿಳೆಯರಿಂದ ದೂರುಗಳು ಬರುತ್ತಿವೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಯಂತ್ರಣ ಹಾಕಬೇಕು. ಇಲ್ಲದಿದ್ದರೆ ತಮ್ಮ ಮೇಲೆ ನಾನು ಕ್ರಮ ವಹಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಎಚ್ಚರಿಕೆ ನೀಡಿದರು.

- Advertisement -

ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೋಲಾರ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಬಂದಾಗ ದಾಳಿ ಮಾಡಲು ಹೋಗುತ್ತೀರಿ. ಅಷ್ಟರಲ್ಲಿ ತಮ್ಮ ಕಚೇರಿಯಲ್ಲಿರುವವರೇ ಮದ್ಯ ಮಾರಾಟಗಾರರಿಗೆ ಸುಳಿವು ನೀಡುತ್ತಾರೆ. ದಾಳಿ ಮಾಡಲು ಆ ಸ್ಥಳಕ್ಕೆ ಹೋದಾಗ ಏನೂ ಇರುವುದಿಲ್ಲ. ಇದರಲ್ಲಿ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿರುವ ಮಾಹಿತಿಗಳು ಬರುತ್ತಿವೆ. ಹೀಗೆ ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ. ದಾಳಿ ನಡೆಸಿ ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಅಬಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಹೊಸದಾಗಿ ಬಂದಿರುವ ನೀವು ಏಕೆ ಇನ್ನೂ ಪರಿಚಯ ಮಾಡಿಕೊಂಡಿಲ್ಲ? ತಾಲ್ಲೂಕಿನಲ್ಲಿ ಎಷ್ಟು ಸಿಎಲ್‌–7 ಇವೆ? ಎಷ್ಟು ಮಂದಿ ಅರ್ಜಿ ಹಾಕಿದ್ದಾರೆ? ಅನುಮತಿ ನೀಡಲು ಏನೆಲ್ಲಾ ಮಾನದಂಡ ನಿಗದಿಪಡಿಸಿದ್ದೀರಿ? ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವ ಸಂಬಂಧ ಎಷ್ಟು ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದರು.

ಆಗ ಅಧಿಕಾರಿಯು ತಾಲ್ಲೂಕಿನಲ್ಲಿ 31 ಸಿಎಲ್‌-7 ಇವೆ. ಈ ವರ್ಷದಲ್ಲಿ‌ ಮೂರು ಆಗಿವೆ. ಬೇರೆ ಯಾವುದೇ ಅರ್ಜಿಗಳು ಬಾಕಿ ಇಲ್ಲ. 174 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದೇವೆ ಎಂದು ಉತ್ತರಿಸಿದರು.

ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕುರಿತು ಮಾತನಾಡಿದ ಶಾಸಕರು, ಕೋಲಾರ ವಿಧಾನಸಭೆ ಕ್ಷೇತ್ರವೊಂದಕ್ಕೇ ₹100 ಕ್ಕೂ ಅಧಿಕ ಕೋಟಿ ಅನುದಾನ ಲಭಿಸಿದೆ. ₹ 10 ಕೋಟಿ ‌ವೆಚ್ಚದಲ್ಲಿ ಕೋಡಿ ಕಣ್ಣೂರು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಕಾಮಗಾರಿಗೂ ₹ 100 ಕೋಟಿಗೂ ಅಧಿಕ ಅನುದಾನ ಸಿಕ್ಕಿದೆ. ತಾಲ್ಲೂಕಿನ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ, ಕೆಲವರು ಅನುದಾನ ಎಲ್ಲಿ ಎಂದು‌ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆ ಪ್ರಗತಿ, ಬಿತ್ತನೆ ಬೀಜ, ಔಷಧ, ರಸಗೊಬ್ಬರದ ದಾಸ್ತಾನು ಬಗ್ಗೆ ಮಾಹಿತಿ ಕೇಳಿದರು.

ಕೃಷಿಯಲ್ಲಿ ನಿಮಗಿಂತ ನನಗೆ ಹತ್ತರಷ್ಟು ಅನುಭವ ಇದೆ. ವಿವಿಧ ದೇಶಗಳಲ್ಲಿ ನೋಡಿದ್ದೇನೆ.‌ ಇಸ್ರೇಲ್‌ನಲ್ಲಿ ನೀರಿನ ನಿರ್ವಹಣೆ‌ ಚೆನ್ನಾಗಿದೆ. ಬರ್ಮಾದಲ್ಲಿ ಅತ್ಯುತ್ತಮ ಕೃಷಿ ಮಾಡುತ್ತಾರೆ. ಇಂಡೋನೇಷ್ಯಾದಲ್ಲೂ ಚೆನ್ನಾಗಿದೆ. ರೈತರು ಅಲ್ಲಿ ಶ್ರೀಮಂತರಾಗಿದ್ದಾರೆ, ಉದ್ಯಮಿಗಳೇ ಬಡವರು. ನಮ್ಮಲ್ಲಿ ಏಕೆ ಈ ಸಮಸ್ಯೆ? ರೈತರು ಏಕೆ ಪದೇಪದೇ ತೊಂದರೆಗೆ ಒಳಗಾಗುತ್ತಾರೆ. ಆ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಬೇಕು. ಅಲ್ಲಿಯ ಪದ್ಧತಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು. ನನ್ನ ಹಣದಲ್ಲಿಯೇ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ರಾಸಾಯನಿಕ ಔಷಧ ಬಳಸಲ್ಲ. ರೈತರನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಿನ್ನಲು ಅನ್ನವೂ ಸಿಗಲ್ಲ ಎಂದು ಎಚ್ಚರಿಸಿದರು.

ಕೆಡಿಪಿ ಸದಸ್ಯರು ಮಾತನಾಡಿ, ಟೊಮೆಟೊಗೆ ವೈರಾಣು ಸಮಸ್ಯೆಯಿಂದ ಬೆಳೆ ಕುಂಠಿತಗೊಳ್ಳುತ್ತಿದೆ ಎಂದು ದೂರಿದರು.

ಆಗ ತೋಟಗಾರಿಕೆ ತಾಲ್ಲೂಕು ಅಧಿಕಾರಿ ಮಾತನಾಡಿ, ಪದೇಪದೇ ಒಂದೇ‌ ಮಣ್ಣಿನಲ್ಲಿ ಬೆಳೆದು ಟೊಮೆಟೊ ಬೆಳೆಯಲ್ಲಿ ‌ಸಮಸ್ಯೆ‌ ಆಗಿದೆ. ಮಣ್ಣಿ‌ನ ಆರೋಗ್ಯ ಸರಿಪಡಿಸಿಕೊಳ್ಳಬೇಕು. ಹವಾಮಾನ ವೈಪರೀತ್ಯವೂ ಕಾರಣ ಎಂದು ಸಮಜಾಯಿಷಿ ನೀಡಿದರು.

ಆಗ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್ ಕುಮಾರ್‌ ಮಾತನಾಡಿ, ರಾಜಕಾರಣಿಗಳು ಕೆ.ಸಿ.ವ್ಯಾಲಿ ನೀರು ಕಾರಣ ಎಂದು ಹೇಳುತ್ತಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಆಹಾರ ಇಲಾಖೆ ಕುರಿತು ಮಾಹಿತಿ ಪಡೆದ ಕೊತ್ತೂರು ಮಂಜುನಾಥ್‌, ತಾಲ್ಲೂಕಿನಲ್ಲಿ ಸುಮಾರು 3,500 ಬಿಪಿಎಲ್‌ ಚೀಟಿಗಳು ಎಪಿಎಲ್‌ಗೆ ಬದಲಾವಣೆ ಆಗಿರುವುದನ್ನು ಕೇಳಿ ಅಶ್ಚರ್ಯಚಕಿತರಾದರು. ಕೆಲವೊಂದು ಕಾರಣಗಳಿಂದ ಸಮಸ್ಯೆ ಆಗಿದ್ದು, ಅರ್ಹರು ಮತ್ತೆ ಬಿಪಿಎಲ್‌ ಪಡೆಯಲು ಅವಕಾಶ ಮಾಡಿಕೊಡಿ ಎಂದು ನಿರ್ದೇಶನ ನೀಡಿದರು.

ಎಲ್‌ಪಿಜಿ ಸಿಲಿಂಡರ್ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯು, ತಾಲ್ಲೂಕಿನಲ್ಲಿ ಶೇ 80ರಷ್ಟು ಗೃಹ ಬಳಕೆ ಸಿಲಿಂಡರ್‌ ಹಾಗೂ ಶೇ 40ರಷ್ಟು ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಪೂರೈಕೆ ಆಗುತ್ತಿವೆ. ಆದರೆ, ಗೃಹ ಬಳಕೆ ಸಿಲಿಂಡರ್‌ ಬುಕ್‌ ಮಾಡುತ್ತಿರುವ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.

ಆಗ ಶಾಸಕರು, ಸಿಲಿಂಡರ್‌ ವಿಚಾರವಾಗಿ ಯಾವುದೇ ಕಾರಣಕ್ಕೂ ಜನರು ಗಾಬರಿ ಆಗಬಾರದು. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕೆಲವರು ತಮ್ಮ ಮನೆ‌ ಮುಂದೆ‌ ಸೌದೆ ರಾಶಿ‌ ಹಾಕಿಕೊಂಡಿರುವುದನ್ನು ಕಾಣಬಹುದು ಎಂದರು.

ಸಮಾಜ ಕಲ್ಯಾಣ ಇಲಾಖೆ ದೊಡ್ಡಹಸಾಳ ಹಾಸ್ಟೆಲ್‌ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಚಿಕ್ಕಹಸಾಳ ಹಾಸ್ಟೆಲ್‌ಗೆ ಕೊಳಬೆ ಬಾವಿ ಹಾಕಿಸಿ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದರು.

ಎಂ.ಎಲ್.ಅನಿಲ್‌ ಕುಮಾರ್‌ ಮಾತನಾಡಿ, ನಗರದ ಫುಡ್‌ ಕೋರ್ಟ್‌ನಲ್ಲಿ ‌ಪ್ಲಾಸ್ಟಿಕ್ ಹಾವಳಿ ಹೆಚ್ಚಿದೆ. ಈ ಸಂಬಂಧ ದಾಳಿಸಿ ನಡೆಸಿ ದಂಡ ವಿಧಿಸಿ ಎಂದು ಹೇಳಿದರು.

ಆಗ ನಗರಸಭೆ ಆಯುಕ್ತ ನವೀನ್‌ ಚಂದ್ರ ಮಾತನಾಡಿ, ನನಗೂ ಈ ಅನುಭವ ಆಗಿದೆ. ಈ ಬಗ್ಗೆ ಕ್ರಮ ವಹಿಸುತ್ತಿದ್ದೇವೆ. ನಿರ್ಬಂಧಿತ ಪ್ಲಾಸ್ಟಿಕ್‌ ಮಾರಾಟ ಮಾಡುವ ಸಗಟು ಮಾರಾಟಗಾರರನ್ನು ಪತ್ತೆ ಹಚ್ಚಿದ್ದು, ಕ್ರಮ ವಹಿಸಲಾಗುವುದು ಎಂದರು.

ಗುತ್ತಿಗೆ ರದ್ದುಪಡಿಸಿ: ತಾಲ್ಲೂಕಿನಲ್ಲಿ ಎಲ್ಲಾ ರಸ್ತೆಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಬೇಗನೇ ಕಾಮಗಾರಿ ಮುಗಿಸಬೇಕು. ಕೆಲ ಗುತ್ತಿಗೆದಾರರು ಇನ್ನೂ ಕಾಮಗಾರಿಯನ್ನೇ ಶುರು ಮಾಡಿಲ್ಲ. ಅಂಥ ಗುತ್ತಿಗೆದಾರರ ಟೆಂಡರ್ ರದ್ದು‌ ಮಾಡಿ.‌ ನರಸಾಪುರ‌ ರಸ್ತೆಗೆ ‌ಬರೀ‌ ಡಾಂಬಾರ್ ಹಾಕಿ ‌ಬಿಟ್ಟರೆ‌ ಸಾಲದು; ಚರಂಡಿ‌ಯನ್ನೂ ನಿರ್ಮಿಸಬೇಕು. ಮಾಲೂರು ರಸ್ತೆಯಲ್ಲಿ ‌ಎಪಿಎಂಸಿ ಮುಂದೆ ₹ 10ಕೋಟೆಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸುತ್ತಿದ್ದು, ಒಂದು ಬದಿಯಲ್ಲಿ ‌ ಮಾತ್ರ ‌ಕೆಲಸ‌ ಆಗಿದೆ ಎಂದು ಹೇಳಿದರು.

ಮಾಲೂರು ರಸ್ತೆಯ ಎಪಿಎಂಸಿ ಮುಂದೆ ‌ಲಾರಿ ನಿಲ್ಲಿಸದಂತೆ‌ ಕ್ರಮ ವಹಿಸಿ. ಕೊಂಡರಾಜನಹಳ್ಳಿ‌ ಬಳಿಯೂ‌ ನಿಲ್ಲಿಸದಂತೆ‌ ಕ್ರಮ ವಹಿಸಿ‌. ಮೂಲಾಜು ತೋರಿಸಬೇಡಿ ಎಂದು ಪೊಲೀಸರಿಗೆ‌ ನಿರ್ದೇಶನ ನೀಡಿದರು.

ಅಲ್ಪಸಂಖ್ಯಾತರ ನಿಗಮದ ಮೇಲೆ ‌ಬಹಳ ದೂರುಗಳಿವೆ ಇವೆ. ಸಾಲ ಕೊಡುವಲ್ಲಿ ಹೆಚ್ಚುಕಡಿಮೆ ಆಗಿರುವ ಸಂಬಂಧ ನನ್ನಲ್ಲಿ ಮಾಹಿತಿ ಇದೆ. ಈ ಸಂಬಂಧ ಮಾಹಿತಿ ಪಡೆದು ಕ್ರಮವಹಿಸುತ್ತೇನೆ ಎಂದು ಹೇಳಿದರು.

ಸಭೆಗೆ ಗೈರಾಗಿದ್ದ ಆರ್‌ಟಿಒ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ‌ಕಳೆದ ಸಭೆಗೆ ಬೇರೆ ಯಾರನ್ನೋ ‌ಕಳಿಸಿದ್ದರು. ಈ ಬಾರಿಯೂ ಬಂದಿಲ್ಲ. ನೋಟಿಸ್ ನೀಡಿ‌ ಅಮಾನತಿಗೆ ಶಿಫಾರಸು ಮಾಡಿ ಎಂದು ಸೂಚಿಸಿದರು.

ಮುಂದಿನ ಕೆಡಿಪಿ ಸಭೆಯನ್ನು ಜುಲೈ ಎರಡನೇ ವಾರಕ್ಕೆ ‌ನಿಗದಿ ಮಾಡಿ. ಅಧಿಕಾರಿಗಳು ಯಾರೂ ಯಾರೂ ತಪ್ಪಿಸಿಕೊಳ್ಳಬಾರದು, ಯಾವುದೇ ಕೆಲಸ ಇಟ್ಟುಕೊಳ್ಳಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಕೆಡಿಪಿ ಸದಸ್ಯರನ್ನು ಸನ್ಮಾನಿಸಲಾಯಿತು, ಶಾಸಕರ ವೇತನದಲ್ಲಿನ ಹಣದಲ್ಲಿ ಇಬ್ಬರಿಗೆ ಆರೋಗ್ಯ ವೆಚ್ಚಕ್ಕಾಗಿ ತಲಾ 50 ಸಾವಿರ ನೀಡಿದರು

ಸಭೆಯಲ್ಲಿ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ತಹಶೀಲ್ದಾರ್ ಡಾ.ನಯನಾ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್‌, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಮುನಿಯಪ್ಪ, ಕೆಡಿಪಿ ಸದಸ್ಯರಾದ ಯಲವಾರ ರಾಜಕುಮಾರ್, ವರಲಕ್ಷ್ಮೀ, ಜಯರಾಮ್, ಮುರಳಿ, ಮಂಜುನಾಥ್ ಗೌಡ, ಸೈಯದ್ ಪಾಷ,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಅಧಿಕಾರಿಗಳಿಗೆ ಸೂಚನೆ

ಕೋಲಾರ: ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚುತ್ತಿರುವ ಬಗ್ಗೆ ಮಹಿಳೆಯರಿಂದ ದೂರುಗಳು ಬರುತ್ತಿವೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಯಂತ್ರಣ ಹಾಕಬೇಕು. ಇಲ್ಲದಿದ್ದರೆ ತಮ್ಮ ಮೇಲೆ ನಾನು ಕ್ರಮ ವಹಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಎಚ್ಚರಿಕೆ ನೀಡಿದರು.

ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೋಲಾರ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಬಂದಾಗ ದಾಳಿ ಮಾಡಲು ಹೋಗುತ್ತೀರಿ. ಅಷ್ಟರಲ್ಲಿ ತಮ್ಮ ಕಚೇರಿಯಲ್ಲಿರುವವರೇ ಮದ್ಯ ಮಾರಾಟಗಾರರಿಗೆ ಸುಳಿವು ನೀಡುತ್ತಾರೆ. ದಾಳಿ ಮಾಡಲು ಆ ಸ್ಥಳಕ್ಕೆ ಹೋದಾಗ ಏನೂ ಇರುವುದಿಲ್ಲ. ಇದರಲ್ಲಿ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿರುವ ಮಾಹಿತಿಗಳು ಬರುತ್ತಿವೆ. ಹೀಗೆ ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ. ದಾಳಿ ನಡೆಸಿ ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು.

ಅಬಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಹೊಸದಾಗಿ ಬಂದಿರುವ ನೀವು ಏಕೆ ಇನ್ನೂ ಪರಿಚಯ ಮಾಡಿಕೊಂಡಿಲ್ಲ? ತಾಲ್ಲೂಕಿನಲ್ಲಿ ಎಷ್ಟು ಸಿಎಲ್‌–7 ಇವೆ? ಎಷ್ಟು ಮಂದಿ ಅರ್ಜಿ ಹಾಕಿದ್ದಾರೆ? ಅನುಮತಿ ನೀಡಲು ಏನೆಲ್ಲಾ ಮಾನದಂಡ ನಿಗದಿಪಡಿಸಿದ್ದೀರಿ? ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವ ಸಂಬಂಧ ಎಷ್ಟು ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದರು.

ಆಗ ಅಧಿಕಾರಿಯು ತಾಲ್ಲೂಕಿನಲ್ಲಿ 31 ಸಿಎಲ್‌-7 ಇವೆ. ಈ ವರ್ಷದಲ್ಲಿ‌ ಮೂರು ಆಗಿವೆ. ಬೇರೆ ಯಾವುದೇ ಅರ್ಜಿಗಳು ಬಾಕಿ ಇಲ್ಲ. 174 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದೇವೆ ಎಂದು ಉತ್ತರಿಸಿದರು.

ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕುರಿತು ಮಾತನಾಡಿದ ಶಾಸಕರು, ಕೋಲಾರ ವಿಧಾನಸಭೆ ಕ್ಷೇತ್ರವೊಂದಕ್ಕೇ ₹100 ಕ್ಕೂ ಅಧಿಕ ಕೋಟಿ ಅನುದಾನ ಲಭಿಸಿದೆ. ₹ 10 ಕೋಟಿ ‌ವೆಚ್ಚದಲ್ಲಿ ಕೋಡಿ ಕಣ್ಣೂರು ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಕಾಮಗಾರಿಗೂ ₹ 100 ಕೋಟಿಗೂ ಅಧಿಕ ಅನುದಾನ ಸಿಕ್ಕಿದೆ. ತಾಲ್ಲೂಕಿನ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ, ಕೆಲವರು ಅನುದಾನ ಎಲ್ಲಿ ಎಂದು‌ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆ ಪ್ರಗತಿ, ಬಿತ್ತನೆ ಬೀಜ, ಔಷಧ, ರಸಗೊಬ್ಬರದ ದಾಸ್ತಾನು ಬಗ್ಗೆ ಮಾಹಿತಿ ಕೇಳಿದರು.

ಕೃಷಿಯಲ್ಲಿ ನಿಮಗಿಂತ ನನಗೆ ಹತ್ತರಷ್ಟು ಅನುಭವ ಇದೆ. ವಿವಿಧ ದೇಶಗಳಲ್ಲಿ ನೋಡಿದ್ದೇನೆ.‌ ಇಸ್ರೇಲ್‌ನಲ್ಲಿ ನೀರಿನ ನಿರ್ವಹಣೆ‌ ಚೆನ್ನಾಗಿದೆ. ಬರ್ಮಾದಲ್ಲಿ ಅತ್ಯುತ್ತಮ ಕೃಷಿ ಮಾಡುತ್ತಾರೆ. ಇಂಡೋನೇಷ್ಯಾದಲ್ಲೂ ಚೆನ್ನಾಗಿದೆ. ರೈತರು ಅಲ್ಲಿ ಶ್ರೀಮಂತರಾಗಿದ್ದಾರೆ, ಉದ್ಯಮಿಗಳೇ ಬಡವರು. ನಮ್ಮಲ್ಲಿ ಏಕೆ ಈ ಸಮಸ್ಯೆ? ರೈತರು ಏಕೆ ಪದೇಪದೇ ತೊಂದರೆಗೆ ಒಳಗಾಗುತ್ತಾರೆ. ಆ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಬೇಕು. ಅಲ್ಲಿಯ ಪದ್ಧತಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು. ನನ್ನ ಹಣದಲ್ಲಿಯೇ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ರಾಸಾಯನಿಕ ಔಷಧ ಬಳಸಲ್ಲ. ರೈತರನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಿನ್ನಲು ಅನ್ನವೂ ಸಿಗಲ್ಲ ಎಂದು ಎಚ್ಚರಿಸಿದರು.

ಕೆಡಿಪಿ ಸದಸ್ಯರು ಮಾತನಾಡಿ, ಟೊಮೆಟೊಗೆ ವೈರಾಣು ಸಮಸ್ಯೆಯಿಂದ ಬೆಳೆ ಕುಂಠಿತಗೊಳ್ಳುತ್ತಿದೆ ಎಂದು ದೂರಿದರು.

ಆಗ ತೋಟಗಾರಿಕೆ ತಾಲ್ಲೂಕು ಅಧಿಕಾರಿ ಮಾತನಾಡಿ, ಪದೇಪದೇ ಒಂದೇ‌ ಮಣ್ಣಿನಲ್ಲಿ ಬೆಳೆದು ಟೊಮೆಟೊ ಬೆಳೆಯಲ್ಲಿ ‌ಸಮಸ್ಯೆ‌ ಆಗಿದೆ. ಮಣ್ಣಿ‌ನ ಆರೋಗ್ಯ ಸರಿಪಡಿಸಿಕೊಳ್ಳಬೇಕು. ಹವಾಮಾನ ವೈಪರೀತ್ಯವೂ ಕಾರಣ ಎಂದು ಸಮಜಾಯಿಷಿ ನೀಡಿದರು.

ಆಗ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್ ಕುಮಾರ್‌ ಮಾತನಾಡಿ, ರಾಜಕಾರಣಿಗಳು ಕೆ.ಸಿ.ವ್ಯಾಲಿ ನೀರು ಕಾರಣ ಎಂದು ಹೇಳುತ್ತಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಆಹಾರ ಇಲಾಖೆ ಕುರಿತು ಮಾಹಿತಿ ಪಡೆದ ಕೊತ್ತೂರು ಮಂಜುನಾಥ್‌, ತಾಲ್ಲೂಕಿನಲ್ಲಿ ಸುಮಾರು 3,500 ಬಿಪಿಎಲ್‌ ಚೀಟಿಗಳು ಎಪಿಎಲ್‌ಗೆ ಬದಲಾವಣೆ ಆಗಿರುವುದನ್ನು ಕೇಳಿ ಅಶ್ಚರ್ಯಚಕಿತರಾದರು. ಕೆಲವೊಂದು ಕಾರಣಗಳಿಂದ ಸಮಸ್ಯೆ ಆಗಿದ್ದು, ಅರ್ಹರು ಮತ್ತೆ ಬಿಪಿಎಲ್‌ ಪಡೆಯಲು ಅವಕಾಶ ಮಾಡಿಕೊಡಿ ಎಂದು ನಿರ್ದೇಶನ ನೀಡಿದರು.

ಎಲ್‌ಪಿಜಿ ಸಿಲಿಂಡರ್ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯು, ತಾಲ್ಲೂಕಿನಲ್ಲಿ ಶೇ 80ರಷ್ಟು ಗೃಹ ಬಳಕೆ ಸಿಲಿಂಡರ್‌ ಹಾಗೂ ಶೇ 40ರಷ್ಟು ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಪೂರೈಕೆ ಆಗುತ್ತಿವೆ. ಆದರೆ, ಗೃಹ ಬಳಕೆ ಸಿಲಿಂಡರ್‌ ಬುಕ್‌ ಮಾಡುತ್ತಿರುವ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.

ಆಗ ಶಾಸಕರು, ಸಿಲಿಂಡರ್‌ ವಿಚಾರವಾಗಿ ಯಾವುದೇ ಕಾರಣಕ್ಕೂ ಜನರು ಗಾಬರಿ ಆಗಬಾರದು. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕೆಲವರು ತಮ್ಮ ಮನೆ‌ ಮುಂದೆ‌ ಸೌದೆ ರಾಶಿ‌ ಹಾಕಿಕೊಂಡಿರುವುದನ್ನು ಕಾಣಬಹುದು ಎಂದರು.

ಸಮಾಜ ಕಲ್ಯಾಣ ಇಲಾಖೆ ದೊಡ್ಡಹಸಾಳ ಹಾಸ್ಟೆಲ್‌ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಚಿಕ್ಕಹಸಾಳ ಹಾಸ್ಟೆಲ್‌ಗೆ ಕೊಳಬೆ ಬಾವಿ ಹಾಕಿಸಿ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದರು.

ಎಂ.ಎಲ್.ಅನಿಲ್‌ ಕುಮಾರ್‌ ಮಾತನಾಡಿ, ನಗರದ ಫುಡ್‌ ಕೋರ್ಟ್‌ನಲ್ಲಿ ‌ಪ್ಲಾಸ್ಟಿಕ್ ಹಾವಳಿ ಹೆಚ್ಚಿದೆ. ಈ ಸಂಬಂಧ ದಾಳಿಸಿ ನಡೆಸಿ ದಂಡ ವಿಧಿಸಿ ಎಂದು ಹೇಳಿದರು.

ಆಗ ನಗರಸಭೆ ಆಯುಕ್ತ ನವೀನ್‌ ಚಂದ್ರ ಮಾತನಾಡಿ, ನನಗೂ ಈ ಅನುಭವ ಆಗಿದೆ. ಈ ಬಗ್ಗೆ ಕ್ರಮ ವಹಿಸುತ್ತಿದ್ದೇವೆ. ನಿರ್ಬಂಧಿತ ಪ್ಲಾಸ್ಟಿಕ್‌ ಮಾರಾಟ ಮಾಡುವ ಸಗಟು ಮಾರಾಟಗಾರರನ್ನು ಪತ್ತೆ ಹಚ್ಚಿದ್ದು, ಕ್ರಮ ವಹಿಸಲಾಗುವುದು ಎಂದರು.

ಗುತ್ತಿಗೆ ರದ್ದುಪಡಿಸಿ: ತಾಲ್ಲೂಕಿನಲ್ಲಿ ಎಲ್ಲಾ ರಸ್ತೆಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಬೇಗನೇ ಕಾಮಗಾರಿ ಮುಗಿಸಬೇಕು. ಕೆಲ ಗುತ್ತಿಗೆದಾರರು ಇನ್ನೂ ಕಾಮಗಾರಿಯನ್ನೇ ಶುರು ಮಾಡಿಲ್ಲ. ಅಂಥ ಗುತ್ತಿಗೆದಾರರ ಟೆಂಡರ್ ರದ್ದು‌ ಮಾಡಿ.‌ ನರಸಾಪುರ‌ ರಸ್ತೆಗೆ ‌ಬರೀ‌ ಡಾಂಬಾರ್ ಹಾಕಿ ‌ಬಿಟ್ಟರೆ‌ ಸಾಲದು; ಚರಂಡಿ‌ಯನ್ನೂ ನಿರ್ಮಿಸಬೇಕು. ಮಾಲೂರು ರಸ್ತೆಯಲ್ಲಿ ‌ಎಪಿಎಂಸಿ ಮುಂದೆ ₹ 10ಕೋಟೆಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸುತ್ತಿದ್ದು, ಒಂದು ಬದಿಯಲ್ಲಿ ‌ ಮಾತ್ರ ‌ಕೆಲಸ‌ ಆಗಿದೆ ಎಂದು ಹೇಳಿದರು.

ಮಾಲೂರು ರಸ್ತೆಯ ಎಪಿಎಂಸಿ ಮುಂದೆ ‌ಲಾರಿ ನಿಲ್ಲಿಸದಂತೆ‌ ಕ್ರಮ ವಹಿಸಿ. ಕೊಂಡರಾಜನಹಳ್ಳಿ‌ ಬಳಿಯೂ‌ ನಿಲ್ಲಿಸದಂತೆ‌ ಕ್ರಮ ವಹಿಸಿ‌. ಮೂಲಾಜು ತೋರಿಸಬೇಡಿ ಎಂದು ಪೊಲೀಸರಿಗೆ‌ ನಿರ್ದೇಶನ ನೀಡಿದರು.

ಅಲ್ಪಸಂಖ್ಯಾತರ ನಿಗಮದ ಮೇಲೆ ‌ಬಹಳ ದೂರುಗಳಿವೆ ಇವೆ. ಸಾಲ ಕೊಡುವಲ್ಲಿ ಹೆಚ್ಚುಕಡಿಮೆ ಆಗಿರುವ ಸಂಬಂಧ ನನ್ನಲ್ಲಿ ಮಾಹಿತಿ ಇದೆ. ಈ ಸಂಬಂಧ ಮಾಹಿತಿ ಪಡೆದು ಕ್ರಮವಹಿಸುತ್ತೇನೆ ಎಂದು ಹೇಳಿದರು.

ಸಭೆಗೆ ಗೈರಾಗಿದ್ದ ಆರ್‌ಟಿಒ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ‌ಕಳೆದ ಸಭೆಗೆ ಬೇರೆ ಯಾರನ್ನೋ ‌ಕಳಿಸಿದ್ದರು. ಈ ಬಾರಿಯೂ ಬಂದಿಲ್ಲ. ನೋಟಿಸ್ ನೀಡಿ‌ ಅಮಾನತಿಗೆ ಶಿಫಾರಸು ಮಾಡಿ ಎಂದು ಸೂಚಿಸಿದರು.

ಮುಂದಿನ ಕೆಡಿಪಿ ಸಭೆಯನ್ನು ಜುಲೈ ಎರಡನೇ ವಾರಕ್ಕೆ ‌ನಿಗದಿ ಮಾಡಿ. ಅಧಿಕಾರಿಗಳು ಯಾರೂ ಯಾರೂ ತಪ್ಪಿಸಿಕೊಳ್ಳಬಾರದು, ಯಾವುದೇ ಕೆಲಸ ಇಟ್ಟುಕೊಳ್ಳಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ಕೆಡಿಪಿ ಸದಸ್ಯರನ್ನು ಸನ್ಮಾನಿಸಲಾಯಿತು, ಶಾಸಕರ ವೇತನದಲ್ಲಿನ ಹಣದಲ್ಲಿ ಇಬ್ಬರಿಗೆ ಆರೋಗ್ಯ ವೆಚ್ಚಕ್ಕಾಗಿ ತಲಾ 50 ಸಾವಿರ ನೀಡಿದರು.

ಇದನ್ನು ಓದಿದ್ದೀರಾ..? ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು : ಎಂ.ಕೆ.ರಾಘವೇಂದ್ರ

ಸಭೆಯಲ್ಲಿ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್‌ ದಿಲೀಪ್‌, ತಹಶೀಲ್ದಾರ್ ಡಾ.ನಯನಾ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್‌, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಮುನಿಯಪ್ಪ, ಕೆಡಿಪಿ ಸದಸ್ಯರಾದ ಯಲವಾರ ರಾಜಕುಮಾರ್, ವರಲಕ್ಷ್ಮೀ, ಜಯರಾಮ್, ಮುರಳಿ, ಮಂಜುನಾಥ್ ಗೌಡ, ಸೈಯದ್ ಪಾಷ,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...

ರಾಯಚೂರು | ಭೀಕರ ಬರ: ₹11 ಕೋಟಿ ಬಿಡುಗಡೆ: ಸಚಿವ ಅಜಯ್ ಸಿಂಗ್

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ: ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ

ಉತ್ತರ ಕನ್ನಡ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್...

ರಾಯಚೂರು | ಲಿಂಗಸುಗೂರು ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ವರ್ಗಾವಣೆ

ಲಿಂಗಸುಗೂರ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ಅವರನ್ನು ವರ್ಗಾವಣೆ...