ದೇಶದಲ್ಲಿ ನೀಟ್ ಪ್ರಶ್ನೆ ಪರೀಕ್ಷೆ ಸೋರಿಕೆಯಾದರು ಪ್ರಧಾನಿ ಮೋದಿ ಮಾತ್ರ ಇದರ ಬಗ್ಗೆ ಧ್ವನಿ ಎತ್ತಿಲ್ಲ ಯುವ ಕಾಂಗ್ರೆಸ್ ಯಿಂದ ಸಾಕಷ್ಟು ಪ್ರತಿಭಟನೆ ಮಾಡಿದ್ದೇವೆ, ಬಹಳಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಕೂಡಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಒತ್ತಾಯಿಸಿದರು
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಗುರುವಾರ ಸಂಜೆ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮೋದಿಯವರು ಹೇಳ್ತಾರೆ ಬಂಗಾರ ಖರೀದಿ ಮಾಡಬೇಡಿ ಅಂತಾರೆ ಜನ ಮದುವೆಗೆ ಬಂಗಾರ ಖರೀದಿಸದೆ ಏನು ಮಾಡಬೇಕು, ಈಗ ದೇಶ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದೆ, ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದ್ದಾರೆ, ಆರ್ಥಿಕ ಪರಿಸ್ಥಿತಿಯನ್ನು ಹದೋಗತಿಗೆ ತಂದಿದ್ದಾರೆ. ಎಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮನೆಮನೆಗೆ ಹೋಗಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದರು.
ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಸಹ ಉಸ್ತುವಾರಿ ತಾರಿಕ್ ಭಗವಾನ್ ಮಾತನಾಡಿ ದೇಶದಲ್ಲಿ ಯುವ ಕಾಂಗ್ರೆಸ್ ಬಗ್ಗೆ ರಾಹುಲ್ ಗಾಂಧಿ ಭರವಸೆ ಇಟ್ಟಿದ್ದಾರೆ ಅ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯಾಗಬೇಕು ಮೋದಿ ಆಡಳಿತದಲ್ಲಿ ಯುವಕರಿಗೆ ವಿಧ್ಯಾರ್ಥಿಗಳಿಗೆ ರಕ್ಷಣೆ ಇಲ್ಲ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದೆ ಯುವಕರು ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡಿದರೆ ಅದನ್ನು ಬೇರೆ ಕಡೆ ಗಮನ ಸೆಳೆಯಲು ಮುಂದಿನ ಒಂದು ವರ್ಷ ಯಾರು ಚಿನ್ನ ತೆಗೆದುಕೊಳ್ಳಬೇಡಿ ಪ್ರೆಟ್ರೋಲ್ ಡಿಸೇಲ್ ಹೆಚ್ಚು ಬಳಸಬೇಡಿ ಎಂದು ಹೇಳತ್ತಾರೆ ಎಂದು ಲೇವಡಿ ಮಾಡಿದರು
ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಶ್ರೀಧರ್ ಜಾಧವ್ ಮಾತನಾಡಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಉದ್ದೇಶಗಳನ್ನು ಮನವರಿಕೆ ಮಾಡುವ ಜೊತೆಗೆ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಯುವ ಕಾಂಗ್ರೆಸ್ ನೀಡಿದೆ ಎಲ್ಲರಿಗೂ ಪಕ್ಷದಲ್ಲಿ ಹುದ್ದೆ ಸಿಗುವುದಿಲ್ಲ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಂಘಟನೆಗೆ ಒತ್ತು ಕೊಡಬೇಕು ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ 70 % ಸಚಿವರು ಎನ್.ಎಸ್.ಯು.ಐ ಹಾಗೂ ಯುವ ಕಾಂಗ್ರೆಸ್ ನಿಂದ ಬಂದಿದ್ದಾರೆ ಅವರಿಗೆ ಅವಕಾಶ ನೀಡಿದೆ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ ವೈಮನಸ್ಸು ಬಿಟ್ಟು ಕೆಲಸ ಮಾಡಿ ಕೆಲಸ ಮಾಡದೆ ಹೋದರೆ ಬೇರೆಯವರಿಗೆ ಅವಕಾಶ ಸಿಗುತ್ತದೆ ವಿರೋಧಿಗಳಿಗೆ ಉತ್ತರ ಕೊಡಬೇಕು ಡಿಕೆ ಶಿವಕುಮಾರ್ ಯುವಕರ ಮೇಲೆ ಭರವಸೆ ಇಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಬೇಕು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಒಗ್ಗಟ್ಟಾಗಬೇಕು ಎಂದರು.
ಇದನ್ನು ಓದಿದ್ದೀರಾ..? ಕೋಲಾರ | ಭೀಮ ಕೋರೆಗಾಂವ್ ಚಿತ್ರ ಬಿಡುಗಡೆ ಮಾಡಿದ ಎಂಎಲ್‌ಸಿ ಅನಿಲ್ ಕುಮಾರ್
ವೇದಿಕೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ರಿದ್, ಜಿಲ್ಲಾ ಉಸ್ತುವಾರಿ ಬಾಲ ಪ್ರದೀಪ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಹುಬಲಿ, ಉಪಾಧ್ಯಕ್ಷ ಸಾಧೀಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ಕಾಮ್ರಾನ್, ಹರಿ, ತಾಲೂಕು ಅಧ್ಯಕ್ಷ ಸುಹೈಲ್, ಅರ್ಬಾಜ್ ಪಾಷ, ಲಾರೆನ್ಸ್, ತನ್ವೀರ್ ಮುಂತಾದವರು ಇದ್ದರು




