ಕೋಲಾರ | ಬೆಸ್ಕಾಂ ಖಾಸಗೀಕರಣಕ್ಕೆ ವಿರೋಧ: ಅನಿವಾರ್ಯವಾದರೆ ಹೋರಾಟಕ್ಕೆ ತೀರ್ಮಾನ

Date:

ನಗರದ ಕೆ.ಇ.ಬಿ.ಸಮುದಾಯ ಭವನದಲ್ಲಿ ನಡೆದ ವಿವಿಧ  ಸಂಘಟನೆಗಳ ಸಭೆಯಲ್ಲಿ  ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು  ಹಾಗೂ
ಖಾಸಗಿಕರಣದ ವಿರುದ್ಧ ಹೋರಾಟ ಮಾಡಲು ಸರ್ವಾನುಮತದಿಂದ  ತೀರ್ಮಾನ ಅಂಗೀಕರಿಸಲಾಯಿತು.

- Advertisement -

ಸಭೆಯಲ್ಲಿ  ಮಾತನಾಡಿದ ಹಲವು ಸಂಘಟನೆಗಳ ಮುಖಂಡರುಗಳು ಖಾಸಗಿಕರಣದಿಂದ ಸಾಮಾನ್ಯ ಸಾರ್ವಜನಿಕರಿಗೆ  ಹಾಗೂ ರೈತರಿಗೆ ತೊಂದರೆ ಆಗಲಿದ್ದು, ,ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ವಿದ್ಯುತ್ ಸೇವೆಗಳ ರಕ್ಷಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯ ಬಗ್ಗೆ ನಮ್ಮ ತೀವ್ರ ವಿರೋಧವನ್ನು ಈ ಮೂಲಕ ದಾಖಲಿಸುತ್ತೇವೆ ಎಂದರು.

ಕೋಲಾರ ವಲಯದ ಏಪ್ರಿಲ್-2026ರ ಡಿಸಿಬಿ ಅಂಕಿ-ಅಂಶಗಳ ಪ್ರಕಾರ ಒಟ್ಟು 14,34,030 ಗ್ರಾಹಕರು ಇದ್ದು, ಮಾಸಿಕ ಒಟ್ಟು ಆದಾಯ ಬೇಡಿಕೆ ₹438.89 ಕೋಟಿ ಆಗಿದೆ. LT-1 (ಗೃಹ ಜ್ಯೋತಿ/ಕುಟೀರ ಜ್ಯೋತಿ), LT-4 (ಕೃಷಿ ಪಂಪ್‌ಸೆಟ್), LT-6-WS-(ನೀರು ಸರಬರಾಜು), LT-6 SL-(ಬೀದಿ- ದೀಪಗಳು) ಸೇರಿದಂತೆ ಸರ್ಕಾರದ ಅನುದಾನಿತ ವರ್ಗಗಳಿಗೆ ಸೇರಿದ 12,33,339 ಗ್ರಾಹಕರಿಂದ ₹344.94 ಕೋಟಿ ಮೌಲ್ಯದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ವರ್ಗಗಳಿಂದ ಬರುವ ಅನುದಾನ ಮೊತ್ತ ನೇರವಾಗಿ ಬೆಸ್ಕಾಂ ಖಾತೆಗೆ ಜಮೆಯಾಗುವುದಿಲ್ಲ.ಉಳಿದ ಕೇವಲ 2,00,507 ಗ್ರಾಹಕರು ಮಾತ್ರ ಬೆಸ್ಕಾಂಗೆ ಆದಾಯ ತರುವ ವರ್ಗಗಳಾಗಿದ್ದು, ಇವರಿಂದ ಮಾಸಿಕ ಸುಮಾರು *91.55 ಕೋಟಿ ಆದಾಯ ದೊರೆಯುತ್ತದೆ ಎಂದು ವಿವರಿಸಿದರು.

ಇಂತಹ ಸಂದರ್ಭದಲ್ಲಿ ಟಾಟಾ ಪವರ್ ಕಂಪನಿಯು ಲಾಭದಾಯಕ ಗ್ರಾಹಕರನ್ನು ಮಾತ್ರ ಆಯ್ಕೆ ಮಾಡಿಕೊಂಡು ಸೇವೆ ನೀಡಲು ಅವಕಾಶ ದೊರೆತರೆ, ಬೆಸ್ಕಾಂ ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಡುವ ಅಪಾಯವಿದೆ ಎಂದರು.

ಖಾಸಗೀಕರಣ ಪರಿಣಾಮವಾಗಿ  ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆಗೆ ಧಕ್ಕೆಯಾಗಬಹುದು,ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸೇವೆಗಳ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಬೆಸ್ಕಾಂಗೆ ಭಾರ ಹೆಚ್ಚಾಗುತ್ತದೆ, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಉಂಟಾಗಬಹುದು, ವಿದ್ಯುತ್ ಕ್ಷೇತ್ರದಲ್ಲಿ ಅಸಮಾನ ಸ್ಪರ್ಧೆ ಉಂಟಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ, ಬೆಸ್ಕಾಂನ ಆರ್ಥಿಕ ಸಾಮರ್ಥ್ಯ ಕುಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರು ನೇರವಾಗಿ ತೊಂದರೆಗೆ ಒಳಗಾಗುತ್ತಾರೆ, ಆದ್ದರಿಂದ, ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 14 ಮತ್ತು 15 ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ, ರೈತರ ಹಿತಾಸಕ್ತಿ ಹಾಗೂ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ಪರವಾನಗಿ ನೀಡುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಬೆಸ್ಕಾಂ  ಖಾಸಗೀಕರಣ ವಿರೋಧಿಸಿ ಅನಿವಾರ್ಯ ಆದರೆ ಹೋರಾಟ ಮಾಡುವ ಹಾಗೂ ಇದೇ ತಿಂಗಳ 21 ರ ಒಳಗೆ ಎಲ್ಲಾ  ಸಂಸ್ಥೆಗಳು,ಸಂಘಟನೆ ಗಳು ತಮ್ಮ ಆಕ್ಷೇಪಣೆ ಸಲ್ಲಿಸಲು  ತೀರ್ಮಾನವನ್ನು ಸಭೆ  ಸರ್ವಾನುಮತದಿಂದ ಅಂಗೀಕರಿಸಿತು ಹಾಗೂ ಸಾಂಕೇತಿಕವಾಗಿ ನಗರದ ಡೂಂ ಲೈಟ್‌ ವೃತ್ತದಲ್ಲಿ ಮಾ‌ನವ ಸರಪಳಿ ಮಾಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಇದನ್ನು ಓದಿದ್ದೀರಾ..? ಕೋಲಾರ | ದಲಿತ ಚಳುವಳಿಯ ಹೆಜ್ಜೆ ಗುರುತುಗಳೇ ಯುವಕರಿಗೆ ಸ್ಪೂರ್ತಿಯಾಗಬೇಕು: ಎಂಎಲ್ಸಿ ಅನಿಲ್ ಕುಮಾರ್

ಸಭೆಯಲ್ಲಿ ಬೆಸ್ಕಾಂ ನ ಸಂಘಟನೆಯ ಪದಾಧಿಕಾರಿಗಳು, ರೈತ ಸಂಘದ ಮುಖಂಡರುಗಳು, ಕನ್ನಡ ಪರ ಸಂಘಗಳ ಮುಖಂಡರುಗಳು,ಸಿ.ಪಿ.ಎಂ,ಜೆ.ಡಿ.ಎಸ್ ಪಕ್ಷಗಳ ಮುಖಂಡರುಗಳು,ಹಲವು ಜನರ ಸಂಘಟನೆಗಳ ಪದಾಧಿಕಾರಿಗಳು
ಸಾರ್ವಜನಿಕರು ಭಾಗವಹಿಸಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಗಣಪತಿ ವಿಸರ್ಜನೆ ವೇಳೆ ಮಸೀದಿ ಕಿಟಕಿ ಗಾಜು ಒಡೆದು, ಗೊಜ್ಜು ತೂರಾಟ ಆರೋಪ: ದೂರು–ಪ್ರತಿದೂರು ದಾಖಲು

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯ ಕಿಟಕಿ ಗಾಜನ್ನು ಕಲ್ಲಿನಿಂದ...

ಕಸ್ತೂರಿ ರಂಗನ್ ವರದಿ: ಸಿಎಂಗೆ ಮನವಿ ಸಲ್ಲಿಸಲು ಪಕ್ಷ, ಸಂಘಟನೆಗಳಿಗೆ ಅವಕಾಶವಿದೆ; ಟಿ.ಡಿ ರಾಜೇಗೌಡ 

ಕಸ್ತೂರಿರಂಗನ್ ವರದಿ ಕುರಿತು ತಮ್ಮ ಅಭಿಪ್ರಾಯ, ಆಕ್ಷೇಪಣೆ ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ...

ಅಪೌಷ್ಟಿಕತೆಯ ನೆರಳಲ್ಲಿ ಕಲ್ಯಾಣ ಕರ್ನಾಟಕ; ರಾಯಚೂರಿನ ಶೇ. 49.5 ಮಕ್ಕಳಲ್ಲಿ ಪೋಷಕಾಂಶದ ಕೊರತೆ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS 2023–24) ಕಲ್ಯಾಣ ಕರ್ನಾಟಕ...

ಧಾರವಾಡ | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಸಚ್ಚಿದಾನಂದ

ಭೂ ದಾಖಲೆಗಳ ತಿದ್ದುಪಡಿ ಮತ್ತು 'ಖರಾಬು' ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ...