ಕೋಲಾರ | ಪ್ರೀತಿವಿಶ್ವಾಸದಿಂದ ಮನಸ್ಸು ಗೆಲ್ಲುವ ದಾರಿಯನ್ನು ಹುಡುಕಬೇಕು : ವಕ್ಕಲೇರಿ ರಾಜಪ್ಪ

Date:

ಎಲ್ಲವನ್ನು ಹೋರಾಟದಿಂದಲೇ ಸಾಧಿಸಲು ಆಗುವುದಿಲ್ಲ. ಕಾನೂನುನಿಂದ ಸಾಧ್ಯವಾಗದ ಕೆಲವು ಕೆಲಸಗಳನ್ನು ಪ್ರೀತಿವಿಶ್ವಾಸದಿಂದ ಮಾಡಲು ಸಾಧ್ಯವಿದೆ. ಅರಿವು ಭಾರತ ಎಲ್ಲರ ವಿಶ್ವಾಸವನ್ನು ಗಳಿಸಿಯೇ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದೆ ಎಂದು ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಹೇಳಿದ್ದಾರೆ.

ಸುಗಟೂರು ಸಮೀಪದ ಹೊಸಮಟ್ನಹಳ್ಳಿ ಗ್ರಾಮದ ರೈತ ಮುಖಂಡ ಕೆ.ನಾರಾಯಣಗೌಡ ಅವರ ಮನೆಯಲ್ಲಿ ಸಮಾನತೆಗಾಗಿ ಸಹಭೋಜನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಾತಿಯನ್ನು ಸಡಿಲಗೊಳಿಸಲು ಮತ್ತು ಅಸ್ಪೃಶ‌್ಯತೆಯ ಗಾಢತೆಯನ್ನು ತಿಳಿಗೊಳಿಸಲು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯಬೇಕು ಎಂದರು. 

ಬೆಳಪನಹಳ್ಳಿಯ ಅಚಲಮಠದ ನಿಜಾನಂದ ಸುಬ್ಬಾರೆಡ್ಡಿ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಬೇಧಗಳು ಮನುಷ್ಯ ಕುಲದಲ್ಲಷ್ಟೇ ಇವೆ. ಮನುಷ್ಯನು ತಿಳುವಳಿಕೆಯಿಂದ ತಿದ್ದುಕೊಳ್ಳಬೇಕು ಎಂದರು. 

ಹಳೆಯ ಚಳುವಳಿಗಳು ಜನಜಾಗೃತಿಯನ್ನು ಮೂಡಿಸಿವೆ. ಆದರೆ ಎಲ್ಲ ಜಾತಿಯವರನ್ನು ಒಂದುಗೂಡಿಸಲು ವಿಫಲವಾಗಿವೆ. ಪ್ರೀತಿಯಿಂದ ಎಲ್ಲರನ್ನೂ ಒಟ್ಟುಗೂಡಿಸಿ ಬದಲಾವಣೆಗೆ ಪ್ರಯತ್ನಿಸುವ ಕೆಲಸಗಳನ್ನು ಈಗ ಮಾಡಬೇಕು ಎಂದು ಭೀಮಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ತಿಳಿಸಿದರು. 

ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ ಕಾಲ ಬದಲಾದಂತೆ ಚಳುವಳಿಗಳೂ ಬದಲಾಗಬೇಕು. ಶಾಂತಿ, ಸೌಹಾರ್ದತೆ, ಅಹಿಂಸೆಯ ತತ್ವಗಳಿಂದ ಜನರಿಗೆ ಹತ್ತಿರವಾಗಲು ಸಾಧ್ಯವಿದೆ. ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮವು ಶಾಂತಿ ಸೌಹಾರ್ದತೆಯ ಚಳುವಳಿಯಾಗಿದೆ ಎಂದರು. 

ಪ್ರತಿ ಕಾರ್ಯಕ್ರಮದಲ್ಲೂ ಒಂದು ನೆನಪಿನ ಗಿಡವನ್ನು ನಡೆತ್ತಿದ್ದೇವೆ. ಈ  ಮೂಲಕ ಸಾಮಾಜಿಕ ಸ್ವಾಸ್ಥ್ಯದ ಜೊತೆಗೆ ಪರಿಸರ ಆರೋಗ್ಯವನ್ನೂ ಕಾಯಬಹುದು ಎಂದು ಗ್ರಾಮವಿಕಾಸ ಸಂಸ್ಥೆಯ ಗಿರಿಜಾ ಅವರು ಅಭಿಪ್ರಾಯಪಟ್ಟರು. 

ಇದನ್ನು ಓದಿದ್ದೀರಾ..?ಕೋಲಾರ ಲಕ್ಷ್ಮೀಸಾಗರ ಕೆರೆ ಕೋಡಿ ಸೇತುವೆ ಕುಸಿತ ಶಾಸಕ ಕೊತ್ತೂರು ಮಂಜುನಾಥ್ ದಿಢೀರ್ ಭೇಟಿ 


ರೋಟರಿ ಲೇಕ್ ಸೈಡ್ ಅಧ್ಯಕ್ಷರಾದ ಸೀಸಂದ್ರ ಚೌಡಪ್ಪ, ಹೂವಹಳ್ಳಿ ನಾಗರಾಜ್, ನಳಿನಿಗೌಡ, ವಕೀಲರಾದ ಮಂಜು ಕನ್ನಿಕಾ, ರವಿ ದಮ್ಮಮಿತ್ರ, ಪ್ರಜ್ವಲ್ ಕೆ ವಿ ಸಿ, ಬಾಬು ಅಂಕತಟ್ಟಿ, ಪಾಲಾಕ್ಷಗೌಡ, ವೆಂಕಟೇಶಗೌಡ, ಪ್ರವೀಣ್, ಚಂದ್ರಪ್ಪ, ಕೃಷ್ಣಪ್ಪ, ಸುಗಟೂರು ಚೌಡಮ್ಮ, ಅಂಕತಟ್ಟಿ ಬಾಬು, ವಕೀಲ ಚೌಡೇಗೌಡ, ಮರಗಲ್ ಶ್ರೀನಿವಾಸ್, ಕೆ ಇ ಬಿ ಚಂದ್ರು, ಮಂಜುಳ ಶ್ರೀನಿವಾಸ್, ಕೋಟೆ ಶ್ರೀನಿವಾಸ್, ತೆರ್ನಳ್ಳಿ ಆಂಜನಪ್ಪ, ನಾಗರಾಜ್, ಹಾರಿಕ, ಲಕ್ಷ್ಮಮ್ಮ, ಸುಗುಣ, ಶಿವು, ಬಂಗವಾದಿ ನಾಗರಾಜಗೌಡ, ವರದೇನಹಳ್ಳಿ ವೆಂಕಟೇಶ್, ಮಂಗಸಂದ್ರ ತಮ್ಮಣ್ಣ, ಈಕಂಬಳ್ಳಿ ಮಂಜುನಾಥ್ ಸಹಭೋಜನದಲ್ಲಿ ಭಾಗವಹಿಸಿದ್ದರು. 

ವಾರಿಧಿ ಮಂಜುನಾಥ್ ರೆಡ್ಡಿ ಅಸ್ಪೃಶ್ಯತೆ ನಿರ್ಮೂಲನೆಯ ಪ್ರತಿಜ್ಞೆ ಭೋಧಿಸಿದರು. ಮಂಜುಳಾ ಕೊಂಡರಾಜನಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು, ಗೋಪಿನಾಥ್ ಕರವಿ ಸ್ವಾಗತಿಸಿದರು, ಓಂ ಪ್ರಕಾಶ್ ವಂದಿಸಿದರು.
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಹಿರಿಯ ಸಾಹಿತಿ ವೀರಹನುಮಾನ, ಹಗಲುವೇಷ ಕಲಾವಿದ ಈರಣ್ಣಗೆ ರಾಜ್ಯೋತ್ಸವ ಪ್ರಶಸ್ತಿ

2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಹಿರಿಯ ಸಾಹಿತಿ...

ಕಲಬುರಗಿಯ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ರಾಜ್ಯ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಯಾದಗಿರಿ | ಮಕ್ಕಳ ಸುರಕ್ಷತೆ ಸಮಾಜದ ಹೊಣೆ: ಪೋಕ್ಸೋ, ಬಾಲ್ಯವಿವಾಹ ತಡೆಗೆ ಕಾನೂನು ಅರಿವು ಅಭಿಯಾನ

ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಸುರಕ್ಷಿತ...

ಕಲಬುರಗಿ | ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ದುಸ್ತರ: ದುರಸ್ತಿಗೆ ದಲಿತ ಸೇನೆ ಆಗ್ರಹ

ಮಳಖೇಡದಿಂದ ಚಿತ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ...