ಕೋಲಾರ | ಗಡಿ‌ಜಿಲ್ಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾಗದಂತೆ‌ ನೋಡಿಕೊಳ್ಳಿ: ರಾಜ್ಯಾಧ್ಯಕ್ಷ ಜಿ.ಎನ್ ಶ್ರೀನಿವಾಸಗೌಡ

Date:

ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡಕ್ಕೆ‌‌ ಧಕ್ಕೆಯಾಗುತ್ತಿದೆ. ತೆಲುಗು ಹಾಗೂ ತಮಿಳು ಪ್ರಭಾವ ಇದೆ.‌ ಈ ನಿಟ್ಟಿನಲ್ಲಿ ಈ ಭಾಗದ ಪದಾಧಿಕಾರಿಗಳು ಗಮನ ಹರಿಸಿ ಕನ್ನಡ ‌ಉಳಿಸಲು ಹೋರಾಟ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೈನ್ಯದ ರಾಜ್ಯಾಧ್ಯಕ್ಷ ಜಿ.ಎನ್.ಶ್ರೀನಿವಾಸಗೌಡ ತಿಳಿಸಿದರು.

- Advertisement -

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸಂಘಟನೆಯ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸೇರ್ಪಡೆ,‌ ನೇಮಕಾತಿ‌ ಪತ್ರ‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕನ್ನಡಕ್ಕೆ ಎಲ್ಲರ ಶ್ರಮ, ಬಲಿದಾನ, ಹೋರಾಟದ ಅಗತ್ಯವಿದೆ. ನಿರಂತರವಾಗಿ,‌ ಪ್ರಾಮಾಣಿಕವಾಗಿ ಹೋರಾಟ ನಡೆಸಬೇಕು. ‌ಗುಲಾಮ‌ ಮನಸ್ಥಿತಿ ಇಲ್ಲದವ ಮಾತ್ರ ‌ನಿಜವಾದ ಹೋರಾಟಗಾರನಾಗಲು ಸಾಧ್ಯ.‌ ಸತ್ಯ ಮಾತನಾಡಲು ಧೈರ್ಯಬೇಕು. ಭ್ರಷ್ಟಾಚಾರ, ಲಂಚ ಮುಕ್ತ ಕರ್ನಾಟಕ,‌ ಸ್ವಚ್ಛ ಕರ್ನಾಟಕ ಕಟ್ಟಬೇಕು. ಇದು ನಮ್ಮ ಧ್ಯೇಯ ಎಂದರು.

ನಮಗೆ ಸಂವಿಧಾನದಲ್ಲಿ ಹಕ್ಕು, ಅಧಿಕಾರ ಇದೆ. ದೇಶದ ಪ್ರತಿಯೊಬ್ಬರು‌ ತೆರಿಗೆ ಪಾವತಿಸುತ್ತಿದ್ದಾರೆ‌.‌ ಆದರೆ,‌ ನಾವು ಕಟ್ಟಿದ ತೆರಿಗೆ‌ ಹಣ ಏಕೆ ಸರಿಯಾಗಿ ವಾಪಸ್ ಬರುತ್ತಿಲ್ಲ? ನಾವೇ ಆಯ್ಕೆ ಮಾಡಿದ ಪ್ರತಿನಿಧಿಗಳು ಏಕೆ ಮತದಾರರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ‌ಪ್ರಶ್ನಿಸಿದರು.

ಸಮಾಜದಲ್ಕಿ ನೂರಾರು ಸಮಸ್ಯೆಗಳು ಇವೆ. ಆದರೆ ನ್ಯಾಯ ಕೊಡಿಸುವ ಸಾಮರ್ಥ್ಯ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಶಕ್ತಿ, ಸಾಮರ್ಥ್ಯ ಗುರುತಿಸುವ ನಾಯಕ ಸಮಾಜಕ್ಕೆ ಬೇಕು ಎಂದರು.

ರೈತರು ಬೆಳೆಯುವ ಬೆಳೆಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ರೈತರ ಬಡವರಾಗಿಯೇ ಉಳಿಯಬೇಕಿದೆ. ಬಿಡದಿಯಲ್ಲಿ ಟೌನ್ ಶಿಪ್ ನೆಪದಲ್ಲಿ ರೈತರ ಜಾಗ ಕಿತ್ತುಕೊಳ್ಳುತ್ತಾರೆ. ಕಾವೇರಿ,‌ ಮಹದಾಯಿ ವಿಚಾರಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಸಮಸ್ಯೆ ಬಗೆಹರಿಯುತ್ತಿಲ್ಲ. ಇಡೀ ಬೆಂಗಳೂರಿಗೆ ತರಕಾರಿ,‌ ಮಾವು ಪೂರೈಕೆ ಮಾಡುವ ಕೋಲಾರಕ್ಕೆ ಕೊಳಚೆ ನೀರು ಹರಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರೈತ ಘಟಕದ ರಾಜ್ಯ ಅಧ್ಯಕ್ಷ ನರೇಂದ್ರ ರೆಡ್ಡಿ ಮಾತನಾಡಿ, ಅನ್ಯಾಯ ವಿರುದ್ಧ ಸಿಂಹ ಘರ್ಜನೆ ನಡೆಸಬೇಕು. ರಾಜ್ಯದಲ್ಲಿ ಹಲವಾರು ಸಂಘಟನೆಗಳು ಇವೆ. ಕೆಲವರು ಸ್ವಾರ್ಥಕ್ಕೆ ಕಟ್ಟಿಕೊಂಡಿದ್ದಾರೆ. ಆದರೆ ನಮ್ಮ ಹಾದಿ ಭಿನ್ನವಾಗಿದೆ. ಅನ್ಯಾಯ ವಿರುದ್ಧ ಹೋರಾಟ ನಡೆಸುತ್ತಿದ್ದು, ಸಮಸ್ಯೆಗಳಿಗೆ‌ ಸ್ಪಂದಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ ವಿರುದ್ಧ ಹೋರಾಡಲಾಗುತ್ತಿದೆ ಎಂದರು.

ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ಸ್ವಾರ್ಥ ‌ಇಲ್ಲದೆ ಸಂಘಟನೆ‌‌ ಮಾಡಲಾಗುತ್ತಿದೆ. ನಾಡು, ನುಡಿ, ಜಲ, ಸ್ವಚ್ಛ ಭಾರತಕ್ಕಾಗಿ‌ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಸುರೇಶ್ ಬಾಬು ಸ್ವಾಗತಿಸಿ ಮಾತನಾಡಿ, ‌ನ್ಯಾಯದ ಹಾದಿಯಲ್ಲಿ ‌ನಡೆಯಬೇಕೆಂಬುದು ಈ‌‌ ಸಂಘಟನೆಯ ಉದ್ದೇಶ. ತಾಲ್ಲೂಕುಗಳಲ್ಲಿ ಸಂಘಟನೆ ‌ಮಾಡುತ್ತೇವೆ. ಸಮಾಜದಲ್ಲಿ ‌ನಡೆಯುವ ಅನ್ಯಾಯದ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದರು.

ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷ ನಡುವತ್ತಿ ಶ್ರೀನಿವಾಸ್, ಉದ್ಯಮ ಘಟಕದ ಅಧ್ಯಕ್ಷ ಶಿವಕುಮಾರ್‌ ಮಾತನಾಡಿದರು.

ಇದನ್ನು ಓದಿದ್ದೀರಾ..?ಕೋಲಾರ | ಗ್ರಾಮ ಠಾಣೆಗಳ ವಿಸ್ತರಣೆ ಹಾಗೂ ಗ್ರಾಮ ನಕ್ಷೆಗಳ ನವೀಕರಣಕ್ಕೆ ಕ್ರಮ: ಸಚಿವರ ಭರವಸೆ

ರಾಜ್ಯ ಅಧ್ಯಕ್ಷರು ಪದಾಧಿಕಾರಿಗಳಿಗೆ ನೇಮಕಾತಿ ‌ಪತ್ರ ವಿತರಿಸಿದರು. ವಿವಿಧ ಘಟಕಗಳ ಪದಾಧಿಕಾರಿಗಳಾದ ಅರುಣ್‌ ಕುಮಾರ್, ದಿಲೀಪ್ ಶೆಟ್ಟಿ, ಅರುಣ್, ಸುನಿಲ್, ಜಯದೀಪ್,‌ ತೇಜಸ್, ಕೃಷ್ಣಮೂರ್ತಿ,‌ ಸಂತೋಷ್, ಮಂಜುನಾಥ್, ಕೋಲಾರ ತಾಲ್ಲೂಕು ಅಧ್ಯಕ್ಷ ನಾಗೇಶ್, ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷ ಚಲಪತಿ, ಶ್ರೀನಿವಾಸಪುರ ಘಟಕದ ಅಧ್ಯಕ್ಷ ವೆಂಕಟರಮಣ ಕೆಜಿಎಫ್ ಘಟಕದ ಅಧ್ಯಕ್ಷ ಮಂಜುನಾಥ್ ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...