ಕೊಪ್ಪಳ | ಒಂದು ಧರ್ಮದ ಆಚರಣೆಗಳನ್ನು ಇನ್ನೊಂದು ಧರ್ಮೀಯರು ಗೌರವಿಸುವುದೇ ಸೌಹಾರ್ದತೆ: ಎಸ್ ಎ ಗಫಾರ್

Date:

ಒಂದು ಧರ್ಮದ ಆಚರಣೆಗಳನ್ನು ಇತರೆ ಧರ್ಮದವರು ಗೌರವಿಸುವುದೇ ಸೌಹಾರ್ದತೆ ಎಂದು ಭ್ರಾತೃತ್ವ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಹೇಳಿದರು.

- Advertisement -

ಕೊಪ್ಪಳ ಭಾಗ್ಯನಗರ ಬಳಿಯ ನವನಗರದ ಇರುವಾತನು ಚರ್ಚಿನಲ್ಲಿ ಭ್ರಾತೃತ್ವ ಸಮಿತಿ ಹಾಗೂ ಇರುವಾತನು ಚರ್ಚ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಕ್ರಿಶ್ಚಿಯನ್ ಸಮುದಾಯದವರು ಯೇಸುಕ್ರಿಸ್ತನು ಶಿಲುಬೆಗೇರಿದ ದಿನವನ್ನು ಶುಭ ಶುಕ್ರವಾರವೆಂದು ಸ್ಮರಿಸುತ್ತಾರೆ. ಒಂದು ಧರ್ಮದ ಆಚರಣೆಗಳನ್ನು ಇನ್ನೊಂದು ಧರ್ಮದವರನ್ನು ಗೌರವಿಸುವಂತೆ ನಮ್ಮ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ, ಇನ್ನೊಂದು ಧರ್ಮವನ್ನು ಕೀಳಾಗಿ ಕಾಣುವುದು, ಟೀಕಿಸುವುದು ಆಗಬಾರದು. ಎಲ್ಲ ಧರ್ಮದವರೂ ಒಂದಾಗಿರಬೇಕಾದರೆ ಒಂದು ಧರ್ಮದವರು ಇನ್ನೊಂದು ಧರ್ಮ ಆಚರಿಸುವಂತೆ ಹೇಳುತ್ತಿಲ್ಲ. ಸಂವಿಧಾನದ ಆಶಯದಂತೆ ಅನ್ಯ ಧರ್ಮಗಳನ್ನೂ ಗೌರವಿಸುತ್ತ ಎಲ್ಲರೂ ಕೂಡಿಕೊಂಡು ಬಾಳಬೇಕು” ಎಂದರು.

ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮಾತನಾಡಿ, “ಕ್ರಿಶ್ಚಿಯನ್ ಧರ್ಮದವರು ಶಾಂತಿ ಪ್ರಿಯರು. ಅವರಿಗೆ ಗುಡ್ ಫ್ರೈಡೆ ಅಂದರೆ ಕಪ್ಪು ಶುಕ್ರವಾರವೆಂದು ಹೇಳಬಹುದು. ಜಗತ್ತಿಗೆ ಒಳ್ಳೆಯದನ್ನು ಸಾರಿರುವ ಯೇಸು ಕ್ರಿಸ್ತನನ್ನು ಇಂದು ನಾವೆಲ್ಲ ನೆನಪಿಸುತ್ತಿದ್ದೇವೆ” ಎಂದು ಹೇಳಿದರು.

ಭ್ರಾತೃತ್ವ ಸಮಿತಿ

ಎಸ್‌ಸಿ/ಎಸ್‌ಟಿ, ಅಲೆಮಾರಿ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ ಮಾತನಾಡಿ, “ಮಾನವನಿಗೆ ಎರಡು ಕಣ್ಣುಗಳು ಹೇಗೆ ಮುಖ್ಯವೋ ಹಾಗೆ ನಮ್ಮ ದೇಶದಲ್ಲಿ ಧರ್ಮ ಹಾಗೂ ಸಂವಿಧಾನವೂ ಎರಡೂ ಕಣ್ಣುಗಳಿದ್ದಂತೆ. ಯಾವುದೇ ಒಂದು ಕಣ್ಣಿಗೆ ನೋವಾದರೂ ಕೂಡ ಅಷ್ಟೇ ಸಮಸ್ಯೆಯಾಗುತ್ತದೆ. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಪಾರ್ಸಿ ಹಾಗೂ ಸಿಖ್‌ ಸಮುದಾಯದವರು ಸೇರಿದಂತೆ ಅನೇಕ ಧರ್ಮೀಯರಿದ್ದಾರೆ. ಸಂವಿಧಾನಕ್ಕೆ ಗೌರವ ಕೊಡುವುದಾದರೆ ಪರ ಧರ್ಮಗಳನ್ನೂ ಗೌರವಿಸುವ ಮೂಲಕ ಐಕ್ಯತೆಯಿಂದ ಬದುಕಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹವಾಮಾನ ವೈಪರೀತ್ಯ | ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಂಗಾಲಾದ ರೈತರು

ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ, ಯೇಸು ಸ್ವಾಮಿ ಈ ಭೂಮಿಗೆ ಮನುಷ್ಯ ಕುಮಾರನಾಗಿ ಜನಿಸಿ ಬಂದು ಮೂವತ್ತ ಮೂರೂವರೆ ವರ್ಷಗಳಲ್ಲಿ 30 ವರ್ಷ ಕುಟುಂಬದ ಜವಾಬ್ದಾರಿ ನಿಭಾಯಿಸಿದರು. ತಂದೆ ತಾಯಿಯೊಂದಿಗೆ ವಿಧೇಯರಾಗಿ ನಡೆದುಕೊಂಡರು, ಮೂರುವರೆ ವರ್ಷಗಳವರೆಗೆ ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಸಮುದ್ರದ ತೀರಗಳಲ್ಲಿ ಪ್ರಯಾಣ ಮಾಡಿ ದೇವರ ಸುವಾರ್ತೆಗಳನ್ನು ಸಾರಿದರು. ಈ ಭೂಮಿ ಮೇಲಿನ ಎಲ್ಲ ಮನುಷ್ಯರ ಪಾಪ ಪರಿಹಾರಕ್ಕಾಗಿ ಯಜ್ಞ ಬಲಿಯಾಗಬೇಕೆಂಬುದು ದೇವರ ಸಂಕಲ್ಪವಾಗಿತ್ತು. ಹಾಗಾಗಿ ಯೇಸು ಸ್ವಾಮಿ, ʼಈ ಭೂಮಿ ಮೇಲಿರುವ ಎಲ್ಲ ಮನುಷ್ಯರ ಪಾಪವನ್ನು ಮನ್ನಿಸುʼ ಎಂದು ಪ್ರಾರ್ಥಿಸುತ್ತ ಶಿಲುಬೆಗೆ ಏರಿದರು” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಭ್ರಾತೃತ್ವ ಸಮಿತಿಯ ಕಾರ್ಯಕರ್ತ ಸುಂಕಪ್ಪ ಮೀಸಿ, ರಘು ಮಾಧಕಟ್ಟಿ, ಮೈಲಪ್ಪ ಮಾದಿನೂರ ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...