ಕೊಪ್ಪಳ | ಕಾರ್ಖಾನೆ ವಿಸ್ತರಣೆ ವಿರೋಧಿಸಿ ಮುಂದುವರೆದ ಪ್ರತಿಭಟನೆ; ರಂಗ ಕಲಾವಿದರ ಬೆಂಬಲ

Date:

ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್ ವಿಸ್ತರಣೆ ವಿರೋಧಿಸಿ ಹಾಗೂ ಮುಕುಂದ ಕ್ಷಿಂಡಿಯಾ ಹೊಸ ಕಾರ್ಖಾನೆ ಸ್ಥಾಪನೆಯ ವಿರುದ್ಧದ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೊಪ್ಪಳ ಜಿಲ್ಲೆಯ ರಂಗ ಕಲಾವಿದರ ತಂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿವೆ.

- Advertisement -

ಕೊಪ್ಪಳ ನಗರಸಭೆಯ ಸಂಕೀರ್ಣದಲ್ಲಿ ಬಲ್ಡೋಟಾ ವಿರೋಧಿಸಿ ಪ್ರತಿಭಟನೆ 12ನೇ ದಿನಕ್ಕೆ ಮುಂದುವರೆದಿದ್ದು, ಇಲ್ಲಿಯವರೆಗೂ ವಿವಿಧ ಸಂಘಟನೆಗಳು ಬೆಂಬಲ ಕೊಟ್ಟಿವೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಂಗಭೂಮಿ ಕಲಾವಿದರು ಬೆಂಬಲ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕುಷ್ಟಗಿ ರೈತ ಸಂಘದ ಅಧ್ಯಕ್ಷ ನಜೀರ್‌ಸಾಬ್ ಮೂಲಿಮನಿ ಮಾತನಾಡಿ, “ಈಗಾಗಲೇ ಕೊಪ್ಪಳ ನಗರದ ಆಣತಿ ದೂರದಲ್ಲಿ ಸುಮಾರು 20ಕ್ಕೂ ಹೆಚ್ಚು ಕಾರ್ಖಾನೆಗಳು ತಮ್ಮ ದೂಳು ಹಾಗೂ ಹೊಗೆಯನ್ನು ಸೂಸುವುದರಿಂದ ಗ್ರಾಮೀಣ ಪ್ರದೇಶದ ಜನರು ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗವಿ ಶ್ರೀಗಳ ನೇತ್ರತ್ವದಲ್ಲಿ ಬಲ್ಡೋಟಾ ವಿಸ್ತರಣೆ ವಿರುದ್ಧ ಕೊಪ್ಪಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಜನಪ್ರತಿನಿಧಿಗಳಿಗೆ ಕಾರ್ಖಾನೆಗಳ ತೊಲಗಿಸಲು ಸರಕಾರದಿಂದ ಅಧಿಕೃತ ಪತ್ರ ತರಬೇಕೆಂದು ಎಚ್ಚರಿಸಿದ್ದರು. ಆದರೆ, ಶ್ರೀಗಳು ತಮ್ಮ ಮೌನ ಮುರಿದು ಮತ್ತೆ ಕೊಪ್ಪಳದ ಪರಿಸರಕ್ಕೆ ಮಾರಕವಾಗಿರುವ ಕಾರ್ಖಾನೆಗಳ ವಿರುದ್ಧ ಮುಂದಾಳತ್ವ ವಹಿಸಿಕೊಳ್ಳಬೇಕು” ಎಂದು ವಿನಂತಿಸಿಕೊಂಡರು.

ರಂಗಕಲಾವಿದ ಲಕ್ಷ್ಮಣ ಪೀರಗಾರ ಮಾತನಾಡಿ, “ನಗರದ ವಿವಿಧ ಬಡಾವಣೆಗೆ ಕಾರ್ಖಾನೆಗಳು ಸೂಸುವ ಹೊಗೆ ಆವರಿಸಿದೆ. ಕೊಪ್ಪಳದಲ್ಲಿ ಅಲ್ಪ ಪ್ರಮಾಣದಲ್ಲಿದ್ದ ದವಾಖಾನೆಗಳು ಇಂದು ನಾಯಿ ಕೊಡೆಗಳಂತೆ ಬೃಹತ್ ಪ್ರಮಾಣದಲ್ಲಿ ತಲೆಯೆತ್ತಿವೆ ಇದಕ್ಕೆ ಮೂಲ ಕಾರಣ ಕಾರ್ಖಾನೆಗಳ ಹಾವಳಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಳ ವಿರೋಧಿಗಳು ನಾವಲ್ಲ. ಅಭಿವೃದ್ಧಿ ಮತ್ತು ಉದ್ಯೋಗದ ಹೆಸರಲ್ಲಿ ಕೊಪ್ಪಳ ಜಿಲ್ಲೆಯ ಪರಸರದ ಮೇಲೆ ಅತ್ಯಾಚಾರ ಎಸಗುವ ಬಂಡವಾಳಶಾಹಿಗಳ ವಿರೋಧಿಗಳು ನಾವು. ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವುಳ್ಳವರು ನಾವು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೊಪ್ಪಳ | ಬಲ್ಡೋಟಾ ಕಾರ್ಖಾನೆಯ ಕಾರ್ಮಿಕ ಕೆಲಸದ ವೇಳೆ ಮೇಲಿನಿಂದ ಬಿದ್ದು ಸಾವು

ಈ ವೇಳೆ ಕೆ ಬಿ ಗೋನಾಳ, ಡಿಎಮ್ ಬಡಿಗೇರ, ಶರಣು ಗಡ್ಡಿ, ಮಂಗಳೇಶ ರಾಠೋಡ್, ಕಾಶ್ಯಪ ಛಲವಾದಿ, ಅಲ್ಲಮಪ್ರಭು ಬೆಟ್ಟದೂರು, ಹುಸೇನ್ ಗೌಡ್ರ, ಹೊನ್ನೂರು ಸಾಬ್, ಯಲ್ಲಪ್ಪ, ವಲಿಸಾಬ್, ಕಾಸಿಂ ಸಾಬ್, ಪೀರ್‌ಸಾಬ್, ಮಲ್ಲಪ್ಪ, ರಾಜಾಸಾಬ್, ಹನುಮಂತಪ್ಪ, ಖಾಸೀಮ್ ಸಾಬ್ ಬಳ್ಳಾರಿ, ರಂಗಪ್ಪ, ನಾಗಪ್ಪ, ಈರೇಶ ಮೆಸ್ತ್ರಿ, ಪೀರ್‌ಸಾಬ್ ಬಟರನರಸಾಪುರ, ಪೀರ್ ಸಾಬ್ ಬಳಿಗಾರ, ಮೆಹ್ಬೂಬ್ ಸಾಬ್, ಸುರೇಶ, ಬಸವರಾಜ ರಡ್ಡೆರ, ಸುರೇಶ ಕುರುಬರ ಹಾಗೂ ರೈತರು ರಂಗಭೂಮಿ ಕಲಾವಿದರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...