ಮಂಗಳೂರು | ಜಿಲ್ಲಾ ಕಾರಾಗೃಹದ ಸುಮಾರು 45 ಮಂದಿ ವಿಚಾರಣಾಧೀನ ಖೈದಿಗಳು ಅಸ್ವಸ್ಥ

Date:

ಮಂಗಳೂರು ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಸುಮಾರು 45 ಮಂದಿ ವಿಚಾರಣಾಧೀನ ಖೈದಿಗಳು ಅಸ್ವಸ್ಥಗೊಂಡ ಘಟನೆ ಬುಧವಾರ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

- Advertisement -

ಬುಧವಾರ ಮಧ್ಯಾಹ್ನ ಊಟದ ಬಳಿಕ ಖೈದಿಗಳು ಹೊಟ್ಟೆನೋವು, ವಾಂತಿ ಭೇದಿಯಿಂದ ಬಳಲಿದ್ದಾರೆ. ತಕ್ಷಣ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖೈದಿಗಳಿಗೆ ಅವಲಕ್ಕಿ, ಅನ್ನ ಸಾಂಬಾರು ನೀಡಲಾಗಿದ್ದು, ಕಲುಷಿತ ಆಹಾರದಿಂದ ಅಸ್ವಸ್ಥಗೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಹಂತಕ ಗೋಡ್ಸೆಯ ಹೇಳಿಕೆಯೇ ಇತಿಹಾಸವಲ್ಲ; ಸ್ವಾತಂತ್ರ್ಯ ಹೋರಾಟಗಾರರ ಚಾರಿತ್ರ್ಯಹರಣಕ್ಕೆ...

ಅಡ್ಡಂಡ ಕಾರ್ಯಪ್ಪನವರ ‘ಗಾಂಧಿ ಹತ್ಯೆಯ ಸತ್ಯ’ ಪುಸ್ತಕ ಮತ್ತು ನಾಟಕವನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಬಲವಾದ ಐತಿಹಾಸಿಕ ಕಾರಣಗಳಿವೆ. ಮನಶಾಸ್ತ್ರದ ದೃಷ್ಟಿಯಿಂದಲೂ ಹಂತಕನ ಸಮರ್ಥನೆಗೆ ಎಚ್ಚರಿಕೆ ಅಗತ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅಡ್ಡಂಡ...

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಬಡಜನರ ಹೊಟ್ಟೆಯ...

ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು ಎಚ್ಚರಿಸುವಂತೆ, ಕಳೆದ ಒಂದು ದಶಕದ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯ ಇತಿಹಾಸವನ್ನು ನೋಡಿದರೆ, ಹೊಸ ತಂತ್ರಜ್ಞಾನಗಳು ಬಂದಾಗಲೆಲ್ಲ ಅತ್ಯಂತ ದುರ್ಬಲ ವರ್ಗದವರನ್ನು ವ್ಯವಸ್ಥೆಯಿಂದ ಹೊರಗಿಡುತ್ತಲೇ ಬರಲಾಗಿದೆ. ಆಧಾರ್ ಜೋಡಣೆ...

ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೃಷ್ಣೆಯ ತಟದಲ್ಲಿ ಅಕ್ರಮ ಮರಳು ಸಾಗಾಟ; ಕ್ರಮಕ್ಕೆ ಒತ್ತಾಯ

“ಪ್ರಾಥಮಿಕ ಮಾಹಿತಿಯ ಪ್ರಕಾರ ಅಸ್ವಸ್ಥಗೊಂಡಿರುವವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರ ಆರೋಗ್ಯ ಸ್ಥಿರವಾಗಿದೆ. ಕಾರಾಗೃಹಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನೀರು, ಆಹಾರದ ಮಾದರಿಯ ಪರೀಕ್ಷೆ ನಡೆಸಿದ್ದಾರೆ. ಕಾರಾಗೃಹದಲ್ಲಿ ಸುಮಾರು 350 ಮಂದಿ ವಿಚಾರಣಾಧೀನ ಖೈದಿಗಳಿದ್ದಾರೆ. ಸಂಜೆಯವರೆಗೆ ಸುಮಾರು 45 ಮಂದಿ ಅಸ್ವಸ್ಥಗೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು” ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾರಪೇಟೆ | ಹುತ್ತೂರು ಹೋಬಳಿಗೆ 1,000 ನಿವೇಶನ: ಆರು ತಿಂಗಳಲ್ಲಿ ಹಕ್ಕುಪತ್ರ ವಿತರಣೆ – ಶಾಸಕ ಎಸ್.ಎನ್. ನಾರಾಯಣಸ್ವಾಮಿ

ಹುತ್ತೂರು ಹೋಬಳಿಯ ಪ್ರತಿ ಗ್ರಾಮ ಪಂಚಾಯಿತಿಗೆ ಸುಮಾರು 250ರಂತೆ ನಿವೇಶನಗಳಂತೆ ಒಟ್ಟು...

ಬಾಗಲಕೋಟೆ | ಅರ್ಜಿ ವಿಲೇವಾರಿಯಲ್ಲಿ ವಿಳಂಬ ಸಲ್ಲದು: ಸಚಿವ ಕಾಶಪ್ಪನವರ ಖಡಕ್ ಸೂಚನೆ

ಸಾರ್ವಜನಿಕರ ಅರ್ಜಿಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಿ, ಅರ್ಹರಿಗೆ ನಿಗದಿತ ಅವಧಿಯೊಳಗೆ ನ್ಯಾಯ...

ಶಿರಸಿ | ಬೆಲೆ ಏರಿಕೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಹಾಲಿನ ಬೆಲೆ, ಬಸ್ ಪ್ರಯಾಣ ದರ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ...