ಮಾನ್ವಿ | ರಮಾಬಾಯಿ ಅಂಬೇಡ್ಕರ್ ನಾಟಕ ಜೀವನಾಧಾರಿತ; ಆಯೋಜನೆಗೆ ಹೆಮ್ಮೆ: ಎ. ಶರಣಕುಮಾರ

Date:

ಡಾ.ಬಿ.ಆರ್. ಅಂಬೇಡ್ಕರ್ ಅವರ ಧರ್ಮಪತ್ನಿ ರಮಾಬಾಯಿ ಅವರ ಜೀವನಾಧಾರಿತ ನಾಟಕವನ್ನು ಆಯೋಜಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ ಮತ್ತು ಪ್ರಸ್ತುತವಾಗಿ ಇಂತಹ ನಾಟಕಗಳು ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು ಎಂದು ಬೆಳಗು ಸಂಸ್ಥೆಯ ಸಂಸ್ಥಾಪಕ ಎ.ಶರಣಕುಮಾರ ಹೇಳಿದರು

- Advertisement -

ಮಾನ್ವಿ ತಾಲ್ಲೂಕು ಮುದ್ದಮಗುಡ್ಡಿ ಗ್ರಾಮದಲ್ಲಿ ಬೆಳಗು ಸಂಸ್ಥೆ ವತಿಯಿಂದ ಪ್ರೊ. ಹೆಚ್.ಟಿ. ಪೋತೆಯವರು ವಿರಚಿತಗೊಂಡ ‘ರಮಾಬಾಯಿ’ ಕಾದಂಬರಿ ಆಧಾರಿತ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಡಾ. ಅಂಬೇಡ್ಕರ್ ಅವರ ಜೀವನ ಆದರ್ಶಗಳು ಮತ್ತು ಹೋರಾಟದ ಮನೋಭಾವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿವೆ. ಇಂತಹ ನಾಟಕಗಳು ವಿದ್ಯಾರ್ಥಿಗಳಲ್ಲಿ ಚಿಂತನೆ, ಸಾಮಾಜಿಕ ಜಾಗೃತಿ ಹಾಗೂ ಪ್ರತಿಭಟನಾತ್ಮಕ ಮನೋಭಾವವನ್ನು ಬೆಳೆಸಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೋರ್ವ ಸಾಮಾಜಿಕ ಕಾರ್ಯರ್ತರು ಮತ್ತು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಮಿರ್ಜಾ ಮೊಹಮ್ಮದ್ ಬೇಗ್ ಅವರು ಮಾತನಾಡಿ ‘ರಮಾಬಾಯಿ’ ಅವರು ಅಂಬೇಡ್ಕರ್ ಅವರ ಬದುಕಿನ ಹೋರಾಟದ ಯಶಸ್ವಿಗೆ ಬೆನ್ನೆಲುಬಾಗಿ ನಿಂತ ಮಹಸಾಧ್ವಿ ಶಿರೋಮಣಿ ಎಂದರು.

ನಂತರ ಕರ್ನಾಟಕ ಮಾದಿಗರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಪ್ರಭುರಾಜ್ ಕೊಡ್ಲಿ ಅವರು ಮಾತನಾಡಿ, ಈ ದೇಶಕ್ಕೆ ಸಂವಿಧಾನ ಬರೆಯುವಲ್ಲಿ ಅಂಬೇಡ್ಕರ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿದರು.

ರಮಾಬಾಯಿ ಕಾದಂಬರಿ ಆಧಾರಿತ ನಾಟಕವನ್ನು ‘ಸಂಗಮ ಕಲಾತಂಡ’ ಬಾಗಲಕೋಟೆ ಇವರಿಂದ ಮನೋಜ್ಞವಾಗಿ ಮೂಡಿಬಂದಿತು.. ಅಂಬೇಡ್ಕರ್ ಅವರ ವಿದ್ಯಾಭ್ಯಾಸ, ಕಷ್ಟಗಳ ಮಧ್ಯ ಸಾಗಿದ ಕುಟುಂಬದ ಹಿನ್ನೆಲೆ, ರಮಬಾಯಿ ಪಟ್ಟಿರುವ ಪಾಡು,ಶಾಹು ಮಹಾರಾಜರ ವಿದ್ಯಾಭ್ಯಾಸಕ್ಕೆ ನೀಡಿದ ಪ್ರೋತ್ಸಾಹ, ಮಹಡ್ ಕೆರೆಯ ಸತ್ಯಾಗ್ರಹ, ಅಂಬೇಡ್ಕರ್ ಅವರ ತಮ್ಮ ಮಕ್ಕಳನ್ನು ಕಳೆದುಕೊಂಡ ದಾರುಣ ಘಟನೆ, ಛಲ ಬಿಡದೆ ಶೋಷಿತ ಧಮನಿತರ ಬದುಕಿಗೆ ಬೆಳಕಾಗುವ ನಿಟ್ಟಿನಲ್ಲಿ ಅಂಬೇಡ್ಕರ ಅವರ ಅವಿರತ ಶ್ರಮವು ನಾಟಕದ ಪ್ರಮುಖ ಭಾಗವಾಗಿ ವಿದ್ಯಾರ್ಥಿಗಳ ಗಮನಸೆಳೆದಿತು.

ಸಂಗಮ ಕಲಾ ತಂಡದ ಕಲಾವಿದರಿಗೆ ಬೆಳಗು ಸಂಸ್ಥೆ ಮುದ್ದಮಗುಡ್ಡಿ ಸಂಸ್ಥೆ ವತಿಯಿಂದ ಪ್ರೋತ್ಸಾಹ ಧನವನ್ನು ನೀಡಿ ಅಭಿನಂದಿಸಿದರು ಮತ್ತು ಲೊಯೋಲ ಕಾಲೇಜಿನ ವತಿಯಿಂದ ಪ್ರಾಚಾರ್ಯರಾದ ಫಾ. ವಿನೋದ್ ಪೌಲ್ ಅವರು ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾರ್ವತ್ರಿಕ ಮುಷ್ಕರ; 4 ಕಾರ್ಮಿಕ ಕೋಡ್‌ಗಳ ವಿರೋಧಿಸಿ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ವರ್ಗ, ದಲಿತ ಪ್ಯಾಂಥರ್ಸ ಜಿಲ್ಲಾಧ್ಯಕ್ಷರು ಲಕ್ಷ್ಮಣ ಜಾನೇಕಲ್, ಕರ್ನಾಟಕ ಜನಶಕ್ತಿ ಮಾರೆಪ್ಪ ಹರವಿ ರಾಘವೇಂದ್ರ ಚೌಡ್ಕಿ ಹಾಗೂ ಉಪಪ್ರಾಂಶುಪಾಲರಾದ ಖಾಸಿಂ ಸಾಬ್ ಅವರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...

ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ

ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ...

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....