ಮೇ ಸಾಹಿತ್ಯ ಮೇಳ | ಭಾರತದಲ್ಲಿ ಮನುವಾದದ ವಿರುದ್ಧ ಶರಣರ ಪರಂಪರೆಯಿದೆ: ಪ್ರಕಾಶ್ ಅಂಬೇಡ್ಕರ್

Date:

ಭಾರತದ ಸಂಸ್ಕೃತಿಯಲ್ಲಿ ಎರಡು ಬಗೆಯ ಪರಂಪರೆಗಳಿವೆ. ಒಂದು, ಯಾಜಮಾನ್ಯ ಆಳ್ವಿಕೆಯ ದಬ್ಬಾಳಿಕೆಯ ಪರಂಪರೆ, ಮತ್ತೊಂದು, ಶರಣರ ಪರಂಪರೆ. ನಾವು ಅಪ್ಪಿಕೊಳ್ಳುವುದು ಶರಣ ಪರಂಪರೆಯನ್ನು, ಇದು ದೇಶದುದ್ದಕ್ಕೂ ಹಬ್ಬಿದೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಬಿಜಾಪುರದಲ್ಲಿ ನಡೆಯುತ್ತಿರುವ ‘ಮೇ ಸಾಹಿತ್ಯ ಮೇಳ’ದಲ್ಲಿ ಅವರು ಮಾತನಾಡಿದರು. “ಯಾಜಮಾನ್ಯ ಪರಂಪರೆಯು ಹಿಟ್ಲರ್ ಶಾಹಿಯಾದದ್ದು, ಇದರಲ್ಲಿ ನಿಮಗೆ ಚಿಂತಿಸುವ ಅವಕಾಶವಿಲ್ಲ. ಇದನ್ನು ವಿವರಿಸುವಾಗ ಮನುಸ್ಮೃತಿಯನ್ನು ಉದಾಹರಿಸಲಾಗುತ್ತದೆ. ಅಂದರೆ ಇಲ್ಲಿ ಯಾಜಮಾನ್ಯ ಮಾತ್ರವಲ್ಲ, ಅಸಹಿಷ್ಣುತೆಯೂ ಇದೆ ಎಂದರ್ಥ” ಎಂದರು.

“ಮತ್ತೊಂದೆಡೆ ಸಂತರ ಪರಂಪರೆಯಿದೆ. ಇಲ್ಲಿ ಶಾಂತಿಯಿದೆ, ಪರಸ್ಪರರನ್ನು ಒಪ್ಪಿಕೊಳ್ಳುವುದಿದೆ, ಸಹಬಾಳ್ವೆಯಿದೆ. ಜಾತಿ ಪದ್ಧತಿಯ ವಿರುದ್ಧ ಹೋರಾಟವಿದೆ. ಉದಾಹರಣೆಗೆ – ಸಂತರ ಸಂಸ್ಕೃತಿಯಲ್ಲಿ ಪುನರ್ವಿವಾಹವಿದೆ. ಆದರೆ, ವೈದಿಕಶಾಹಿಯಲ್ಲಿ ಮಹಿಳೆಯರಿಗೆ ಮರುವಿವಾಹದ ಅವಕಾಶವಿಲ್ಲ” ಎಂದು ವಿವರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಯಾರು ಸರ್ಕಾರಿ ಶಾಲೆಗಳಲ್ಲಿ ಕಲಿತರೋ, ಮೀಸಲಾತಿ ಅಡಿಯಲ್ಲಿ ಶಿಕ್ಷಣ ಪಡೆದರೋ ಅವರು ಈಗ ಅವರೆಡರ ವಿರುದ್ಧವೂ ಮಾತನಾಡುತ್ತಿದ್ದಾರೆ. ಇದೇ ಶಾಲೆಗಳಿಲ್ಲದಿದ್ದಾರೆ ಅವರು ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಸಾಮಾಜಿಕ, ಆರ್ಥಿಕ ಸುಭದ್ರತೆ ದೊರೆತ ನಂತರ, ಅವು ಬೇರೆ ವಿಷಯಗಳಂತೆ ಕಾಣುತ್ತಿವೆ. ಅವರೆಲ್ಲರೂ ಶಿಕ್ಷಣದ ಖಾಸಗೀಕರಣದ ಸಮರ್ಥಕರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮೊದಲೂ ಕೂಡಾ ಶಿಕ್ಷಣ ಖಾಸಗೀಕರಣದಲ್ಲೇ ಇತ್ತು. ಅದರಿಂದಲೇ ಅದನ್ನು ಧರ್ಮದ ಅಡಿಯಾಳಾಗಿ ಮಾಡಲಾಗಿತ್ತು. ಈ ಸಮುದಾಯ ಓದಬಹುದು, ಇವರು ಓದಬಾರದು ಎಂಬ ಧಾರ್ಮಿಕ ಕಟ್ಟುಪಾಡುಗಳಿದ್ದವು. ಬ್ರಿಟಿಷ್ ಸರ್ಕಾರ ಅದನ್ನು ಬದಲಿಸಿತು. ಈಗ ಶಿಕ್ಷಣದಲ್ಲಿ ಹೊಸ ಪದ್ದತಿಯನ್ನು ತರಲು ಯತ್ನಿಸಲಾಗುತ್ತಿದೆ. ‘ನೀವು ಎಷ್ಟು ಬೇಕಾದರೂ ಓದಿ ನಾವು ಬೇಡ ಎನ್ನುವುದಿಲ್ಲ. ಆದರೆ, ಅದರ ಖರ್ಚು ನೀವೇ ಭರಿಸಬೇಕು’ ಎಂದು ಹೇಳಲಾಗುತ್ತಿದೆ. ಯೋಚಿಸಿ ನೋಡಿ, ಒಂದುವೇಳೆ ಎಲ್ಲ ಸರ್ಕಾರಿ ಶಾಲೆಗಳು ಮುಚ್ಚಿಹೋದರೆ, ನಾವು ವೆಚ್ಚ ಭರಿಸಿ ನಮ್ಮ ಮಕ್ಕಳನ್ನು ಓದಿಸಲು ಸಾಧ್ಯವೇ?” ಎಂದರು.

ಈ ಸುದ್ದಿ ಓದಿದ್ದೀರಾ?: ಮೇ ಸಾಹಿತ್ಯ ಮೇಳ | ದಲಿತ ಚಳವಳಿ ನಾಯಕ ಎನ್ ವೆಂಕಟೇಶ್ ಸೇರಿ ಹಲವರಿಗೆ ಪ್ರಶಸ್ತಿ

“ಶಿಕ್ಷಣದ ಜೊತೆಗೆ ಬಾಬಾಸಾಹೇಬರು ಇನ್ನೆರಡು ವಿಚಾರ ಹೇಳಿದರು, ಸಂಘಟನೆ ಮತ್ತು ಹೋರಾಟ. ಎಲ್ಲಿಯತನಕ ಸಂಘಟನೆ ಇಲ್ಲ, ಅಲ್ಲಿಯತನಕ ನಮ್ಮ ದನಿಯಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬದಲಾವಣೆ ಬಂದಿದೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದಿದೆ. ಆದರೆ, ಕೇಂದ್ರದಲ್ಲಿ ಮನುವಾದಿಗಳಿದ್ದಾರೆ. ಅವರಿಗೆ ಪೂರ್ತಿ ಬಹುಮತ ಇದೆ. ಕೇಂದ್ರ ಸರ್ಕಾರವು ಅನೇಕ ರಾಜಕೀಯ ನಾಯಕರನ್ನು ಇಡಿ, ಸಿಬಿಐ ಇತ್ಯಾದಿಗಳ ಮೂಲಕ ನಿಯಂತ್ರಿಸಲು ನೋಡುತ್ತದೆ” ಎಂದು ಹೇಳಿದರು.

“ರಸ್ತೆಯಲ್ಲಿ ಕೂಗಾಡುವುದರಿಂದ ಪ್ರಯೋಜನವಿಲ್ಲ. ಜನರು ಎಚ್ಚರಗೊಂಡಿದ್ದಾರೆ. ಅವರಿಗೆ ವಿಷಯ ಗೊತ್ತಿದೆ. ಅದನ್ನು ವ್ಯಕ್ತಪಡಿಸುವ ಸಾಧನ ಅವರ ಬಳಿ ಇಲ್ಲ. ಕಾರ್ಯಾಚರಣೆಯ ಸಾಧನವನ್ನು ತಯಾರಿಸುವುದು ಇಂದಿನ ಮುಖ್ಯ ಕೆಲಸ. ಅದನ್ನು ಸಿದ್ಧಪಡಿಸುವ ಯೋಜನೆ ನಮ್ಮ ಬಳಿಯಿರಬೇಕು” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್‌ | ಬ್ಲಾಕ್‌ಮೇಲ್‌ಗಾಗಿ ವಿಡಿಯೋ ಮಾಡಿಕೊಂಡಿದ್ರಾ?; ನ್ಯಾಯಾಂಗ ತನಿಖೆಗೆ ಆಗ್ರಹ

ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕು....

ಶಿವಮೊಗ್ಗ | ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕಾರಣಿಗಳ ಬಳಿ ಅಧಿಕಾರವಿದ್ದು, ಪರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿವೆ. ಆದರೂ,...

ಫ್ರಿ ಬಸ್ | ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ; ಬಿಜೆಪಿ ಪ್ರಚಾರಕಿ, ನಟಿ ಶೃತಿ ವಿವಾದಾತ್ಮಕ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ...

ಚಾಮರಾಜನಗರ | ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಿ: ಮಾನವ ಬಂಧುತ್ವ ವೇದಿಕೆ

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು...