ಚಾಮರಾಜನಗರ | ಅಂಬೇಡ್ಕರ್ ಭಾವಚಿತ್ರ ವಿರೂಪ, ಬುದ್ಧ ಪ್ರತಿಮೆ ಭಗ್ನಗೊಳಿಸಿರುವ ಕಿಡಿಗೇಡಿಗಳು

Date:

ಚಾಮರಾಜನಗರ ಗ್ರಾಮಾಂತರ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಕಿಡಿಗೇಡಿಗಳು ನಿನ್ನೆ ಮಧ್ಯರಾತ್ರಿ ಬೌದ್ಧ ವಿಹಾರದ ಬಾಗಿಲ ಬೀಗ ಮುರಿದು ಬುದ್ಧ ಪ್ರತಿಮೆ ಭಗ್ನಗೊಳಿಸಿ, ಡಾ. ಬಿ.ಆರ್.ಅಂಬೇಡ್ಕರ ಭಾವಚಿತ್ರ ವಿರೂಪಗೊಳಿಸಿರುವ ಘಟನೆ
ವರದಿಯಾಗಿದೆ.

- Advertisement -

ಇತ್ತೀಚಿಗೆ ಮೈಸೂರಿನಾದ್ಯಂತ ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ್ದ ವಿಚಾರ ಮಾಸುವ ಮುನ್ನವೇ, ಚಾಮರಾಜನಗರದಲ್ಲಿ ಇಂತಹ ಘಟನೆ ಘಟಿಸಿರುವುದು ಗ್ರಾಮಸ್ಥರಿಗೆ ಬೇಸರ ತರಿಸಿದೆ. ಕಿಡಿಗೇಡಿಗಳು ಅಂಬೇಡ್ಕರ್ ಅವರನ್ನೇ ಗುರಿಯಾಗಿಸಿ ಮಲ ಎರಚುವುದು, ಫ್ಲೆಕ್ಸ್ ಹರಿಯುವುದು, ವಿರೂಪಗೊಳಿಸುವುದು ಹೆಚ್ಚಾಗಿದ್ದು, ಇಂತಹ ಕಿಡಿಗೇಡಿಗಳ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಆಗದಿರುವುದು ಶೋಚನಿಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ: ಕೋಮುವಾದದ ರೂವಾರಿಯ ವೈಭವೀಕರಣ –...

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಒಡ್ಡಿರುವ ಅಪಾಯದ ಮುನ್ಸೂಚನೆಯಾಗಿವೆ. ಕೋಮು ಸೌಹಾರ್ದತೆಗೆ ಕೊಳ್ಳಿ ಇಟ್ಟ, ಹಿಂಸಾಚಾರಗಳನ್ನು ಪ್ರೇರೇಪಿಸಿದ ಮತ್ತು ದೇಶದ ಬಹುತ್ವವನ್ನು ಸದಾ...

ಸಾಕಷ್ಟು ಬಾರಿ ಇಂತಹ ಘಟನೆ ನಡೆದಿದ್ದರೂ, ನಡೆಯುತ್ತಿದ್ದರು ಪೊಲೀಸರು ಕ್ರಮವಹಿಸದೆ ಇರುವುದರಿಂದ ಕಿಡಿಗೇಡಿಗಳಿಗೆ ಭಯವೇ ಇಲ್ಲದಂತಾಗಿದೆ. ಜ್ಯೋತಿಗೌಡನಪುರದಲ್ಲಿ ಬುದ್ಧ ಪ್ರತಿಮೆ ಹಾನಿಗೊಳಿಸಿ ನೀಚತನ ಮೆರೆದಿದ್ದಾರೆ. ಬೌದ್ಧ ವಿಹಾರದಲ್ಲಿದ್ದ ಅಂಬೇಡ್ಕರ್ ಭಾವಚಿತ್ರ, ಹೊರಗಿದ್ದ ಅಂಬೇಡ್ಕರ್ ಫ್ಲೆಕ್ಸ್ ಹರಿದು ವಿರೂಪಗೊಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.

ನಂಜನಗೂಡು ಶಾಸಕರಾದ ದರ್ಶನ್ ದೃವನಾರಾಯಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಸಮಾಜದ ಶಾಂತಿ, ಸೌಹಾರ್ದತೆ ಹಾಗೂ ಸಂವಿಧಾನದ ಮೌಲ್ಯಗಳ ಮೇಲೆ ನೇರ ದಾಳಿಯಾಗಿದೆ. ಪೊಲೀಸ್ ಇಲಾಖೆ ಕೃತ್ಯವೆಸಗಿದವರನ್ನು ಬಂಧಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರಿನಲ್ಲಿ ಅ.25 ರಂದು ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು-ನಮ್ಮ ಪಾತ್ರ’ ವಿಚಾರಗೋಷ್ಠಿ

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮಸ್ಥರು ಅಂಬೇಡ್ಕರ್, ಬುದ್ಧ ಪ್ರತಿಮೆ, ಭಾವಚಿತ್ರ ಹಾನಿ ಮಾಡಿದವರ ಬಂಧಿಸಬೇಕು. ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾವರ | ಬಾಡಿಗೆ ಹಣ ಕೇಳಿದ್ದಕ್ಕೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಕರಣ ದಾಖಲು

ಬಾಕಿ ಉಳಿದಿದ್ದ ಬಾಡಿಗೆ ಹಣ ನೀಡುವಂತೆ ಕೇಳಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ...

ಗದಗ | ಇಂದಿನ ಪೀಳಿಗೆಗೆ ಭಗತ್ ಸಿಂಗ್‌ ಕುರಿತು ನೈಜ ಅಧ್ಯಯನ ಅವಶ್ಯ: ಬಾಲು ರಾಠೋಡ್

ಪ್ರಸ್ತುತ ಯುವಜನತೆ ಎದುರಿಸುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ, ಮೂಲಭೂತವಾದ ಸೇರಿದಂತೆ ಇತರ ಗಂಭೀರ...

SIR: ಕೊಡಗಿನಲ್ಲಿ ಸೆ.29ರಂದು ಪಬ್ಲಿಕ್ ಹಿಯರಿಂಗ್; ಜಸ್ಟಿಸ್ ಗೋಪಾಲ ಗೌಡ-ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ರಾಜ್ಯದಾದ್ಯಂತ ನಡೆಯುತ್ತಿರುವ...

ಶಿರಸಿ | 2013ರ ಮಹದಾಯಿ ಪ್ರಕರಣ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇರ್ ಬಂಧನ

ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರನ್ನು...