- ಪಾರಂಪರಿಕ ಮತಗಟ್ಟೆಗಳು ಮತದಾರರನ್ನು ಪ್ರೇರೇಪಿಸುವಂತಿವೆ
- ಡೊಳ್ಳುಕುಣಿತ ಸಾಂಸ್ಕೃತಿಕ ತಂಡ ಹೋಲುವ ಮತಗಟ್ಟೆ
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನಕ್ಕಾಗಿ ಪ್ರತ್ಯೇಕ ಬೂತ್‌ಗಳನ್ನು ರಚಿಸುವುದರ ಜೊತೆಗೆ ವಿಷಯಾಧಾರಿತ ಪಾರಂಪರಿಕ ಮತಗಟ್ಟಗಳನ್ನು ಸಿದ್ಧಪಡಿಸಿದ್ದು, ಮತದಾರರ ಗಮನ ಸೆಳೆಯುವಲ್ಲಿ ಅಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ.
ಚಾಮರಾಜ ವಿಧಾನಸಭಾ ಕ್ಷೇತ್ರದ ಪಶ್ಚಿಮ ಮೈಸೂರಿನ ಬೂತನ್ನು ಪಾರಂಪರಿಕ ಬೂತ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮತದಾನ ಕೇಂದ್ರವನ್ನು ಪಾರಂಪರಿಕ ಕಟ್ಟಡದಂತೆ ಚಿತ್ರಿಸಲಾಗುತ್ತಿದೆ. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಮತದಾನ ಮಾಡುವಂತೆ ಉತ್ತೇಜಿಸುವುದುದಕ್ಕಾಗಿ ಸರ್ಕಾರಿ ಶಾಲೆಗಳಿಗೆ ಪಾರಂಪರಿಕ ನೋಟವನ್ನು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
“ಮತದಾನದ ಶೇಕಡಾವಾರು ಪ್ರಮಾಣವು ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಹಲವಾರು ಮತಗಟ್ಟೆಗಳಿವೆ. ಈ ಬಾರಿ ಅಂತಹ ಮತಗಟ್ಟೆಗಳನ್ನು ಹೆಚ್ಚಿಸಲು ಅಧಿಕಾರಿಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ” ಎಂದು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
“ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ ಅವರು ಮತದಾರರನ್ನು ಪ್ರೇರೇಪಿಸಲು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕ್ಕಮಹಾದೇವಿಯ ಸಂಘರ್ಷದ ಬದುಕು ಸಮಾಜಕ್ಕೆ ಮಾದರಿ: ಶಾಸಕ ಈಶ್ವರ ಖಂಡ್ರೆ
ಮೈಸೂರು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಎಸ್.ರಂಜಿತ್ ಕುಮಾರ್ ಮಾತನಾಡಿ, “ಈ ಬಾರಿಯ ಚುನಾವಣೆಯಲ್ಲಿ ವಿಷಯಾಧಾರಿತ ಬೂತ್‌ಗಳು ಗಮನ ಸೆಳೆಯಲಿದ್ದು, ವಿ.ವಿ.ಮೊಹಲ್ಲಾದಲ್ಲಿರುವ ಶಾಲೆಯನ್ನು ಪಾರಂಪರಿಕ ಬೂತ್ ಆಗಿ ಸಿದ್ಧಗೊಳಿಸಲಾಗುತ್ತಿದೆ. ಉತ್ತರ ಮೈಸೂರಿನಲ್ಲಿ ಡೊಳ್ಳುಕುಣಿತ ಎಂಬ ಸಾಂಸ್ಕೃತಿಕ ತಂಡವನ್ನು ಹೋಲುವ ಮತ್ತೊಂದು ಶಾಲೆ ತಲೆ ಎತ್ತಲಿದೆ” ಎಂದು ತಿಳಿಸಿದರು.
“ಮತದಾರರಿಗೆ ಶೌಚಾಲಯ, ಕುಡಿಯುವ ನೀರು ಮತ್ತು ನೆರಳನ್ನು ಒದಗಿಸಲಾಗುವುದು. ಮತದಾರರನ್ನು ಮತದಾನ ಕೇಂದ್ರಗಳಲ್ಲಿ ಹೆಚ್ಚು ಸಮಯ ಕಾಯುವಂತೆ ಮಾಡದಿರುವುದು ನಮ್ಮ ಉದ್ದೇಶವಾಗಿದೆ” ಎಂದು ಅಧಿಕಾರಿ ಖಚಿತಪಡಿಸಿದ್ದಾರೆ.