ಮೈಸೂರು | ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶುಗಳ ಸರಣಿ ಸಾವು: ವ್ಯವಸ್ಥೆಯ ವೈಫಲ್ಯವೇ?

Date:

ಮೈಸೂರು ನಗರದ ಕೆ ಆರ್ ಆಸ್ಪತ್ರೆ ಆವರಣದಲ್ಲಿರುವ ಚೆಲುವಾಂಬ ಮಕ್ಕಳ ಸರ್ಕಾರಿ ಆಸ್ಪತ್ರೆ, ದಕ್ಷಿಣ ಕರ್ನಾಟಕದ ಪ್ರಮುಖ ನವಜಾತ ಶಿಶು ಆರೈಕೆ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ, ಕಳೆದ ಎಂಟು ವರ್ಷಗಳಲ್ಲಿ ಇಲ್ಲಿ ದಾಖಲಾಗಿರುವ ಶಿಶು ಸಾವುಗಳ ಅಂಕಿ–ಅಂಶಗಳು ಆತಂಕ ಹುಟ್ಟಿಸುವಂತಿವೆ.

- Advertisement -

2018ರ ಜನವರಿಯಿಂದ 2026ರ ಮಾರ್ಚ್ ಅಂತ್ಯದವರೆಗೆ, ಅಂದರೆ ಎಂಟು ವರ್ಷ ಮೂರು ತಿಂಗಳ ಅವಧಿಯಲ್ಲಿ ಒಟ್ಟು 4,566 ಶಿಶುಗಳು ಸಾವಿಗೀಡಾಗಿರುವುದು ದಾಖಲಾಗಿದೆ. ವಿಶೇಷವಾಗಿ 2018ರಿಂದ 2022ರವರೆಗೆ ಮರಣ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದು, ಈ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 600ಕ್ಕೂ ಅಧಿಕ ಶಿಶುಗಳು ಸಾವನ್ನಪ್ಪಿರುವುದು ಗಮನಾರ್ಹ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಇದಾದ ನಂತರ 2023ರಿಂದ 2025ರವರೆಗೆ ಸ್ವಲ್ಪ ಮಟ್ಟಿನ ಇಳಿಮುಖ ಕಂಡುಬಂದಿದ್ದು, ವಾರ್ಷಿಕ ಸರಾಸರಿ ಮರಣ ಪ್ರಕರಣಗಳು 417ಕ್ಕೆ ಇಳಿದಿವೆ. ಆದಾಗ್ಯೂ, ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಅಂಕಿ–ಅಂಶಗಳಿಂದ ಸ್ಪಷ್ಟವಾಗುತ್ತದೆ. 2025ರಲ್ಲಿ ಶಿಶು ಮರಣ ಪ್ರಮಾಣ ಶೇ.11.8ರಷ್ಟಿದ್ದರೆ, ಹಿಂದಿನ ವರ್ಷಗಳಲ್ಲಿ ಅದು ಕನಿಷ್ಠ ಶೇ 13ರಿಂದ ಗರಿಷ್ಠ ಶೇ 21ರವರೆಗೆ ದಾಖಲಾಗಿತ್ತು.

ಇನ್ನೂ ಕಳವಳಕಾರಿ ಸಂಗತಿಯೆಂದರೆ, 2026ರ ಮೊದಲ ಮೂರು ತಿಂಗಳಲ್ಲೇ 110 ಶಿಶುಗಳು ಸಾವಿಗೀಡಾಗಿರುವುದು ಕಂಡುಬಂದಿದೆ. ಜನವರಿಯಿಂದ ಮಾರ್ಚ್ ತನಕ ಒಟ್ಟು 1,026 ದಾಖಲಾತಿಗಳಲ್ಲಿ ಶೇ 10.7ರಷ್ಟು ಮರಣ ಪ್ರಕರಣಗಳು ವರದಿಯಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಮತ್ತೊಮ್ಮೆ ಬಿಂಬಿಸುತ್ತದೆ.

ಆಸ್ಪತ್ರೆಯ ಎನ್ಐಸಿಯು(ನವಜಾತ ತೀವ್ರ ನಿಗಾ ಘಟಕ) ಮತ್ತು ಎಸ್‌ಎನ್‌ಸಿಯು(ವಿಶೇಷ ನವಜಾತ ಶಿಶು ಆರೈಕೆ ಘಟಕ)ಗಳಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯ ಆಧಾರದಲ್ಲಿ ಈ ಅಂಕಿ–ಅಂಶಗಳನ್ನು ಸಂಗ್ರಹಿಸಲಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯಷ್ಟೇ ಅಲ್ಲದೆ, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ.

ಈ ಆಸ್ಪತ್ರೆ ಮುಖ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಶ್ರಯವಾಗಿದೆ. ಜಿಲ್ಲೆಗಳ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಗಂಭೀರ(ಕ್ರಿಟಿಕಲ್) ಪ್ರಕರಣಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಪರಿಣಾಮವಾಗಿ, ಇಲ್ಲಿ ದಾಖಲಾಗುವ ಶಿಶುಗಳ ಬಹುಪಾಲು ಗಂಭೀರ ಸ್ಥಿತಿಯಲ್ಲಿರುವುದರಿಂದ ಮರಣ ಪ್ರಮಾಣ ಹೆಚ್ಚಾಗುತ್ತಿರುವ ಸಾಧ್ಯತೆಯೂ ಇದೆ. ಇತ್ತೀಚಿನ ದಿನಗಳಲ್ಲಿ ಇರುವೆ ಕಚ್ಚಿದ ಪರಿಣಾಮ ನವಜಾತ ಶಿಶು ಸಾವಿಗೀಡಾದ ಆರೋಪವೂ ಕೇಳಿಬಂದಿದ್ದು, ಆಸ್ಪತ್ರೆಯ ಮೂಲಸೌಕರ್ಯಗಳು, ಸ್ವಚ್ಛತೆ ಹಾಗೂ ನಿರ್ವಹಣೆಯ ಕುರಿತು ಪ್ರಶ್ನೆಗಳು ಎದ್ದಿವೆ.

ಪ್ರಸೂತಿ, ಸ್ತ್ರೀರೋಗ ಹಾಗೂ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದ ನಗರದ ಚೆಲುವಾಂಬ ಸರ್ಕಾರಿ ಆಸ್ಪತ್ರೆ ಇದೀಗ ಗಂಭೀರ ಆರೋಪಗಳ ನೆರಳಿನಲ್ಲಿ ಸಿಲುಕಿದೆ. ಎನ್‌ಐಸಿಯುನಲ್ಲಿ ನವಜಾತ ಶಿಶುವಿಗೆ ಇರುವೆ ಕಚ್ಚಿದ ಪರಿಣಾಮ ಸಾವನ್ನಪ್ಪಿದ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕಳೆದ 15 ತಿಂಗಳಲ್ಲಿ 421 ನವಜಾತ ಶಿಶುಗಳು ಹಾಗೂ 12 ತಾಯಂದಿರು ಮೃತಪಟ್ಟಿರುವ ಸಂಗತಿ ಬಹಿರಂಗವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಬೆಳವಣಿಗೆಗಳ ನಡುವೆಯೇ ನವಜಾತ ಶಿಶುಗಳ ಮರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನಿರಂತರವಾಗಿ ಒತ್ತಾಯಿಸುತ್ತಿದೆ. ಇದೇ ವೇಳೆ ಮಾಜಿ ಶಾಸಕ ಎಲ್ ನಾಗೇಂದ್ರ ಬಹಿರಂಗಪಡಿಸಿದ ಆರ್‌ಟಿಐ ದಾಖಲೆಗಳು ಪೋಷಕರಲ್ಲಿ ಭಯ ಹಾಗೂ ಅಸಮಾಧಾನವನ್ನು ಹೆಚ್ಚಿಸಿವೆ.

1880ರಲ್ಲಿ ಮೈಸೂರು ಅರಸರ ಕಾಲದಲ್ಲಿ ಸ್ಥಾಪಿತವಾದ ಈ ಆಸ್ಪತ್ರೆ ತಾಯಿ-ಮಗು ಆರೋಗ್ಯ ಸೇವೆಯಲ್ಲಿ ಮಹತ್ವದ ಪಾತ್ರವಹಿಸಿಕೊಂಡು ಸುತ್ತಮುತ್ತಲಿನ ಜಿಲ್ಲೆಗಳಿಗೂ ಆಧಾರವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಮೂಲಸೌಕರ್ಯಗಳ ಅಭಾವ, ಹೊರ ಜಿಲ್ಲೆಗಳಿಂದ ಬರುತ್ತಿರುವ ರೋಗಿಗಳ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಆಸ್ಪತ್ರೆಯ ಕಾರ್ಯಕ್ಷಮತೆಯನ್ನು ಕುಂದಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

2025ರ ಜನವರಿಯಿಂದ ಈವರೆಗೆ ಆಸ್ಪತ್ರೆಯ ಎಸ್‌ಎನ್‌ಸಿಯುಗೆ ದಾಖಲಾದ 3,721 ಶಿಶುಗಳಲ್ಲಿ 441 ಶಿಶುಗಳು ಸಾವನ್ನಪ್ಪಿರುವುದು ಆತಂಕಕಾರಿ ಅಂಕಿ-ಅಂಶವಾಗಿದೆ. ರಾಜ್ಯ ಮಟ್ಟದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದ್ದರೂ, ನಿರ್ದಿಷ್ಟವಾಗಿ ಈ ಆಸ್ಪತ್ರೆಯಲ್ಲಿ ಇಷ್ಟು ಪ್ರಮಾಣದಲ್ಲಿ ಸಾವುಗಳು ಸಂಭವಿಸುತ್ತಿರುವುದು ಪ್ರಶ್ನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಶಿಶು ಮರಣವನ್ನು ತಡೆಯಲು ಸೂಕ್ತ ವೈದ್ಯಕೀಯ ಸೌಲಭ್ಯ, ಸಿಬ್ಬಂದಿ ನೇಮಕಾತಿ, ಸ್ವಚ್ಛತೆ ಮತ್ತು ಮೇಲ್ವಿಚಾರಣೆ ಬಲಪಡಿಸುವುದು ಅನಿವಾರ್ಯವಾಗಿದೆ.

ಪೋಷಕರ ನಂಬಿಕೆಗೆ ಧಕ್ಕೆ ತರುವಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಇಲ್ಲವಾದರೆ ಸಾರ್ವಜನಿಕರ ಆಕ್ರೋಶ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಚೆಲುವಾಂಬ ಆಸ್ಪತ್ರೆ: 2018ರಿಂದ 2026ರ ವರಿಗಿನ ದಾಖಲಾತಿ, ಶಿಶು ಮರಣ ವಿವರ:

  • 2018-ಒಟ್ಟು ದಾಖಲಾತಿ-4099, ಮರಣ-603
  • 2019-ಒಟ್ಟು ದಾಖಲಾತಿ-4392, ಮರಣ-606
  • 2020-ಒಟ್ಟು ದಾಖಲಾತಿ-3,297, ಮರಣ-656
  • 2021-ಒಟ್ಟು ದಾಖಲಾತಿ-3,046, ಮರಣ-654
  • 2022-ಒಟ್ಟು ದಾಖಲಾತಿ-3,604, ಮರಣ-603
  • 2023-ಒಟ್ಟು ದಾಖಲಾತಿ-3487, ಮರಣ-477
  • 2024-ಒಟ್ಟು ದಾಖಲಾತಿ-3,101, ಮರಣ-416
  • 2025-ಒಟ್ಟು ದಾಖಲಾತಿ-3,721, ಮರಣ-441
  • 2026(ಜನವರಿ-ಮಾರ್ಚ್) -ಒಟ್ಟು ದಾಖಲಾತಿ-1026, ಮರಣ-110

ಈ ದಿನ.ಕಾಮ್ ಜತೆಗೆ ಮಾತನಾಡಿದ ಎಐಎಂಎಸ್ಎಸ್ ಸಂಘಟನೆಯ ಜಿಲ್ಲಾಧ್ಯಕ್ಷೆ ನಳಿನಾ, “ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳೇ ತೀರಾ ಕೊರತೆಯಾಗಿದ್ದು, ಕನಿಷ್ಠ ಬಾಣಂತಿಯರಿಗೆ ಬಿಸಿನೀರಿನ ವ್ಯವಸ್ಥೆಯೂ ಲಭ್ಯವಿಲ್ಲ. ಕುಡಿಯುವ ನೀರು ಮತ್ತು ಸ್ವಚ್ಛತಾ ವ್ಯವಸ್ಥೆಗಳು ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ಒಂದೇ ಹಾಸಿಗೆಯಲ್ಲಿ ಇಬ್ಬರು ನವಜಾತ ಶಿಶುಗಳನ್ನು ಇರಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ” ಎಂದು ಆರೋಪಿಸಿದರು.

“ಐಸಿಯು ವಾರ್ಡ್‌ ಸಹ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗುತ್ತಿಲ್ಲ. ತಾಯಂದಿರನ್ನು ತಮ್ಮ ಮಕ್ಕಳಿರುವ ವಾರ್ಡ್‌ಗೆ ಬಿಡದೇ ಇರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದ್ದು, ಮಗು ಆಸ್ಪತ್ರೆಯಲ್ಲಿ ಇದ್ದರೂ ತಾಯಂದಿರನ್ನು ಮನೆಗೆ ಕಳುಹಿಸಲಾಗುತ್ತಿದೆ. ಇದರಿಂದ ಮಗುವಿಗೆ ತಾಯಿ ಹಾಲುಣಿಸುವುದು ಮತ್ತು ಸರಿಯಾದ ಆರೈಕೆ ಮಾಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ” ಎಂದರು.

ಇನ್ನೂ ಪೋಷಕರಿಂದ ವಿವಿಧ ಕಾರಣಗಳಿಗೆ ಲಂಚ ಬೇಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಆಸ್ಪತ್ರೆಯಲ್ಲಿನ ಉಪಕರಣಗಳ ಕೊರತೆ ಮತ್ತು ಸಿಬ್ಬಂದಿ ಅಭಾವವೇ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದ್ದು, ಆಸ್ಪತ್ರೆಯ ನಿರ್ವಹಣೆಯಲ್ಲಿಯೂ ಲೋಪಗಳಿವೆ. ಈ ಎಲ್ಲ ವಿಷಯಗಳ ಕುರಿತು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಅವರಿಗೆ ದೂರು ಸಲ್ಲಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

“ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂತಹ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಿ, ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಎಐಎಂಎಸ್ಎಸ್ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಜಿ ಎಸ್ ಸೀಮಾ ಮಾತನಾಡಿ, “ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಕಳೆದ ಒಂದುವರೆ ವರ್ಷದಲ್ಲಿ 421 ನವಜಾತ ಶಿಶುಗಳು ಹಾಗೂ 12 ಬಾಣಂತಿಯರು ಮೃತಪಟ್ಟಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ” ಎಂದು ತಿಳಿಸಿದ್ದಾರೆ.

“ಇತ್ತೀಚೆಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದ ಶಿಶುವೊಂದು ಮೃತಪಟ್ಟಿದ್ದು, ಪೋಷಕರು ಇರುವೆ ಕಚ್ಚಿದ ಕಾರಣದಿಂದ ಮರಣ ಸಂಭವಿಸಿದೆ ಎಂದು ಆರೋಪಿಸಿರುವುದು ಗಂಭೀರ ವಿಷಯವಾಗಿದೆ. ಈ ಪ್ರಕರಣದ ಬಗ್ಗೆ ತಕ್ಷಣವೇ ಸಮಗ್ರ ತನಿಖೆ ನಡೆಸಿ, ನಿಜಾಂಶಗಳನ್ನು ಬಹಿರಂಗಪಡಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿದ್ದು, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು. ಜತೆಗೆ, ಆಸ್ಪತ್ರೆ ಆವರಣ ಹಾಗೂ ಒಳಾಂಗಣದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸಲು ಅಗತ್ಯ ಸಂಖ್ಯೆಯಲ್ಲಿ ವೈದ್ಯರು, ಶುಶ್ರೂಷಕಿಯರು ಹಾಗೂ ಡಿ-ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮೃತಪಟ್ಟ ನವಜಾತ ಶಿಶುವಿನ ತಂದೆ ಗಾರೆ ಕೆಲಸಗಾರರಾಗಿದ್ದು, ಮಗುವಿಗೆ ಚಿಕಿತ್ಸೆ ಕೊಡಿಸಲು 8–10 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬವು ಇದೀಗ ಮಗುವನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿ. ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು” ಎಂದು ಅವರು ಆಗ್ರಹಿಸಿದರು.

“ಆರೋಗ್ಯವು ಜನರ ಮೂಲಭೂತ ಹಕ್ಕಾಗಿದ್ದು, ರಾಜ್ಯ ಸರ್ಕಾರವು ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಖಚಿತಪಡಿಸಬೇಕು” ಎಂದು ಹೇಳಿದರು.

ಎಐಎಂಎಸ್ಎಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ ಮಾತನಾಡಿ, “ಏಪ್ರಿಲ್ 23ರಂದು ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವಧಿಗೂ ಮುನ್ನ ಜನಿಸಿದ್ದ ಮಗು ಇರುವೆ ಕಚ್ಚಿ ಮೃತಪಟ್ಟಿರುವುದು ಅತ್ಯಂತ ದುರಂತಕರ ಘಟನೆ. ಈ ಕುರಿತು ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಧೀಕ್ಷಕರು ಮಗುವಿನ ರಕ್ತದಲ್ಲಿ ಸೋಂಕು, ಕಡಿಮೆ ತೂಕ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿದರೂ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿಗೆ ಇರುವೆ ಕಚ್ಚಿರುವುದು ಸ್ಪಷ್ಟ ನಿರ್ಲಕ್ಷ್ಯದ ಪರಿಣಾಮವಾಗಿದೆ. ಈ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವಾಗಿದ್ದು, ಸಂಬಂಧಪಟ್ಟ ಪೋಷಕರಿಗೆ ನ್ಯಾಯ ಹಾಗೂ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದರು.

1000298740

“ಹುಟ್ಟಿದ ಮಕ್ಕಳನ್ನು ಸ್ವಚ್ಛತೆ ಇಲ್ಲದ ಟ್ರೇಗಳಲ್ಲಿ ಬಟ್ಟೆ ಸುತ್ತಿಕೊಂಡು ತೂಕ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಅತ್ಯಂತ ಶೋಚನೀಯ. ಆಸ್ಪತ್ರೆಯಲ್ಲಿ ಕನಿಷ್ಠ ಮಟ್ಟದ ಸ್ವಚ್ಛತೆ ಹಾಗೂ ನಿರ್ವಹಣೆಯ ಕೊರತೆ ಸ್ಪಷ್ಟವಾಗಿದ್ದು, ಇಂತಹ ಪರಿಸ್ಥಿತಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ” ಎಂದರು.

“ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನರು ಹೆರಿಗೆಗಾಗಿ ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಜಿಲ್ಲಾಸ್ಪತ್ರೆಯ ಸ್ಥಿತಿಯೇ ಹೀಗಿದ್ದರೆ ಸಾಮಾನ್ಯ ಜನತೆ ಇನ್ನೆಲ್ಲಿ ಹೋಗಬೇಕು? ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ, ಮೂಲಸೌಕರ್ಯ, ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಈವರೆಗೆ ನಡೆದಿರುವ ಶಿಶು ಸಾವುಗಳಿಗೆ ಸರ್ಕಾರವೇ ನೇರ ಹೊಣೆ” ಎಂದು ಆರೋಪಿಸಿದರು.

“ಸರಿಯಾದ ವ್ಯವಸ್ಥೆ, ಸಮರ್ಪಕ ಸೌಲಭ್ಯ ಹಾಗೂ ಸಿಬ್ಬಂದಿ ಇದ್ದಿದ್ದರೆ ಇನ್ನಷ್ಟು ಮಕ್ಕಳನ್ನು ಉಳಿಸಬಹುದಾಗಿತ್ತು. ಬದುಕಬೇಕಾದ ಮಕ್ಕಳೂ ಕೂಡಾ ಸಾವಿಗೀಡಾಗುತ್ತಿರುವುದು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ದುರಂತ ಘಟನೆಗಳು ನಡೆಯಬಾರದಾಗಿತ್ತು” ಎಂದು ಕಿಡಿಕಾರಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಉರಿಬಿಸಿಲಿಗೆ ತತ್ತರ: 39° ತಾಪಮಾನ ದಾಖಲು, ಜನಜೀವನ ಅಸ್ತವ್ಯಸ್ತ

ಕಳೆದ ಹಲವು ವರ್ಷಗಳಿಂದ ಶಿಶುಗಳ ಸಾವುಗಳು ಸಂಭವಿಸುತ್ತಿದ್ದರೂ ಸಮರ್ಪಕ ವರದಿ ಹಾಗೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಘಟನೆಗಳನ್ನು ಮರೆಮಾಚಲಾಗಿದೆ ಎಂದು ಆರೋಪಿಸಿದ ಅವರು, ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದ ಸರಣಿ ಸಾವುಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ. ತಾರ್ಕಿಕ ಅಂತ್ಯ ಕಾಣುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ತಂಬಾಕು ದರ ಕುಸಿತ, ಬೆಳೆ ಮಿತಿ ಹೇರಿಕೆ: ಮೈಸೂರು ಜಿಲ್ಲೆಯ ರೈತರು ಸಂಕಷ್ಟದಲ್ಲಿ

ಒಟ್ಟಿನಲ್ಲಿ, ಅಂಕಿ–ಅಂಶಗಳಲ್ಲಿ ಇಳಿಮುಖ ಕಂಡುಬಂದರೂ, ಶಿಶು ಸಾವುಗಳನ್ನು ಶೂನ್ಯಕ್ಕೆ ತರುವುದು ಇನ್ನೂ ಸವಾಲಾಗಿ ಉಳಿದಿದೆ. ಆರೋಗ್ಯ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ, ಸಿಬ್ಬಂದಿ ಬಲವರ್ಧನೆ ಮತ್ತು ತುರ್ತು ಆರೈಕೆ ಸೌಲಭ್ಯಗಳ ಹೆಚ್ಚಳವಾಗುವುದು ಅಗತ್ಯವಾಗಿದೆ ಎನ್ನುವುದಕ್ಕೆ ಶಿಶು ಸಾವು ಪ್ರಮಾಣದ ಈ ಅಂಕಿ–ಅಂಶಗಳು ಸ್ಪಷ್ಟವಾಗಿ ಸೂಚಿಸುತ್ತಿವೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | UAPA, NSA ಕಾಯ್ದೆಗಳು ಸಂವಿಧಾನಿಕ ಹಕ್ಕುಗಳ ದಮನಕ್ಕೆ ಅಸ್ತ್ರವಾಗುತ್ತಿವೆ : ಪ್ರೊ. ಫಣಿರಾಜ್

ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವಾಗಿ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ,...

ಉಡುಪಿ | ಕಟ್‌ಬೇಲ್ತೂರು ರೈಲ್ವೆ ಸೇತುವೆ ಅಪಾಯಕಾರಿ ತಿರುವು ಸರಿಪಡಿಸಲು ಆಗ್ರಹಿಸಿ ಸಿಪಿಎಂ ಪ್ರತಿಭಟನೆ

ಕಟ್‌ಬೇಲ್ತೂರು ಗ್ರಾಮದ ರೈಲ್ವೆ ಸೇತುವೆಯಲ್ಲಿರುವ ಅಪಾಯಕಾರಿ ತಿರುವನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರ...

ಉಡುಪಿ | ಮಲ್ಪೆ–ತೀರ್ಥಹಳ್ಳಿ ಹೆದ್ದಾರಿ ಕಾಮಗಾರಿ ಅಂತಿಮ ಹಂತ; ಬಾಕಿ ಭೂಸ್ವಾಧೀನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾಷ್ಟ್ರೀಯ ಹೆದ್ದಾರಿ 169ಎರ ಮಲ್ಪೆ–ಕರಾವಳಿ ಬೈಪಾಸ್‌ವರೆಗಿನ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು...