ಮೈಸೂರು | ಉರಿಬಿಸಿಲಿಗೆ ತತ್ತರ: 39° ತಾಪಮಾನ ದಾಖಲು, ಜನಜೀವನ ಅಸ್ತವ್ಯಸ್ತ

Date:

ಹವಾಮಾನ ಬದಲಾವಣೆಯ ಪರಿಣಾಮವಾಗಿ ಬಿಸಿಗಾಳಿ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಜನರು ಜಾಗೃತರಾಗಿರುವುದು ಅತ್ಯಂತ ಅಗತ್ಯ. ಸರಳ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಶಾಖಾಘಾತ ಸೇರಿದಂತೆ ಬೇಸಿಗೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

ಮುದ ನೀಡುವ ವಾತಾವರಣಕ್ಕೆ ಹೆಸರಾದ ಮೈಸೂರು ಜಿಲ್ಲೆ ಇದೀಗ ಬಿಸಿಲೂರಾಗಿದೆ. ನೆತ್ತಿಸುಡುವ ಬಿಸಿಲಿನ ಝಳ, ದೇಹವನ್ನೇ ಆಯಾಸಗೊಳಿಸುವ ಉಷ್ಣತೆ ಜನರನ್ನು ಬಸವಳಿಸುತ್ತಿದೆ. ಸಾಮಾನ್ಯವಾಗಿ ತಂಪಾದ ಹವಾಮಾನಕ್ಕಾಗಿ ಪ್ರಸಿದ್ಧವಾಗಿದ್ದ ಮೈಸೂರು, ಈಗ ಉತ್ತರ ಕರ್ನಾಟಕದ ಬಿಸಿಲಿನ ತೀವ್ರತೆಯನ್ನು ನೆನಪಿಸುವಂತಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದು, ಜನಜೀವನ ಸಹಜವಾಗಿರದೆ ಅಸ್ತವ್ಯಸ್ತಗೊಂಡಿದೆ.

- Advertisement -

ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದ್ದು, ಉಷ್ಣಾಂಶ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಜನರಿಗೆ ತಂಪು ನೀಡುವ ಮಳೆ ಕಾಣಿಸದಿರುವುದರಿಂದ ಉಷ್ಣತೆಯ ಕಾಟ ಮತ್ತಷ್ಟು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಗಂಭೀರ ಏರಿಕೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ನಂಜನಗೂಡು ಮತ್ತು ತಿ.ನರಸೀಪುರ ತಾಲೂಕುಗಳಲ್ಲಿ 39 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗಿದ್ದು, ಇವು ಜಿಲ್ಲೆಯಲ್ಲಿ ಅತಿಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶಗಳಾಗಿವೆ. ಜಿಲ್ಲಾ ಕೇಂದ್ರ ಮೈಸೂರು ಸೇರಿದಂತೆ ಎಚ್ ಡಿ ಕೋಟೆ, ಪಿರಿಯಾಪಟ್ಟಣ, ಸಾಲಿಗ್ರಾಮ ಮತ್ತು ಸರಗೂರು ತಾಲೂಕುಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹುಣಸೂರು ತಾಲೂಕಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕೆ ಆರ್ ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ ತಿ.ನರಸೀಪುರದಲ್ಲಿ 25.5 ಡಿಗ್ರಿ ಸೆಲ್ಸಿಯಸ್ ಇದ್ದು, ಉಳಿದ ತಾಲೂಕುಗಳಲ್ಲಿ 23-24 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ತಿಳಿಸಿದೆ.

ಬಿಸಿಲಿನ ತೀವ್ರತೆಯಿಂದ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಜನ ಸಂಚಾರ ಕಡಿಮೆಯಾಗಿದೆ. ಬೆಳಿಗ್ಗೆ 7-8 ಗಂಟೆಯಲ್ಲಿಯೇ ಬಿಸಿಲಿನ ತಾಪ ಸ್ಪಷ್ಟವಾಗಿ ಅನುಭವವಾಗುತ್ತಿದೆ. ಇಷ್ಟುದಿನ ಬೆಳಿಗ್ಗೆ 9ರವರೆಗೆ ವಾಯುವಿಹಾರ ಮಾಡುತ್ತಿದ್ದ ಜನರು ಈಗ ಬೇಗನೆ ಮನೆ ಸೇರಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಬೆಳಿಗ್ಗೆ 10ರ ಹೊತ್ತಿಗೆ ಬಿಸಿಲು ಮೈಸುಡುವಂತಿದ್ದು, ಮಧ್ಯಾಹ್ನದಿಂದ ಸಂಜೆವರೆಗೂ ಉರಿಬಿಸಿಲು ಜನರನ್ನು ಹೈರಾಣಗೊಳಿಸುತ್ತಿದೆ.

ಈ ತೀವ್ರ ಬಿಸಿಲಿನಿಂದ ಜನರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿವೆ. ಕಾಲರಾ, ವಿಷಮಶೀತ ಜ್ವರ, ವೈರಲ್ ಸೋಂಕು, ನಿರ್ಜಲೀಕರಣ, ತಲೆ ಸುತ್ತು, ಮೂಗಿನಿಂದ ರಕ್ತಸ್ರಾವ, ಕಣ್ಣಿನ ತೊಂದರೆಗಳು ಸೇರಿದಂತೆ ಹಲವು ಋತುಮಾನದ ಕಾಯಿಲೆಗಳು ಹೆಚ್ಚುತ್ತಿರುವುದಾಗಿ ವೈದ್ಯರು ಎಚ್ಚರಿಸಿದ್ದಾರೆ. ಜತೆಗೆ ಸನ್‌ಬರ್ನ್, ಸನ್‌ಟ್ಯಾನ್, ಅಲರ್ಜಿ ಮತ್ತು ಚರ್ಮದ ಸಮಸ್ಯೆಗಳು ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಚರ್ಮದ ಕ್ಯಾನ್ಸರ್ ಅಪಾಯವೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳು

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಮಧ್ಯಾಹ್ನ 11ರಿಂದ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ತೆರಳುವಾಗ ಛತ್ರಿ, ಟೋಪಿ ಅಥವಾ ತಲೆಗೆ ತಿಳಿ ಬಣ್ಣದ ಬಟ್ಟೆ ಧರಿಸುವುದು ಸೂಕ್ತ. ಕಣ್ಣಿನ ರಕ್ಷಣೆಗಾಗಿ ಕಪ್ಪು ಕನ್ನಡಕ ಬಳಸಬೇಕು. ನೈಲಾನ್ ಅಥವಾ ಸಿಂಥೆಟಿಕ್ ಬಟ್ಟೆಗಳ ಬದಲಿಗೆ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.

ದೇಹದ ತೇವಾಂಶ ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. ಕಲ್ಲಂಗಡಿ, ಕರಬೂಜ, ನಿಂಬೆ ರಸ, ಕಿತ್ತಳೆ, ಎಳನೀರು ಮುಂತಾದ ನೀರಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಒಳಿತು. ಜತೆಗೆ ಹಣ್ಣು, ತರಕಾರಿ, ಸೊಪ್ಪುಗಳು ಹಾಗೂ ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ತಾಪಮಾನ ಸುಮಾರು 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಷ್ಣತೆ ಹೆಚ್ಚುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಜಿಲ್ಲೆಯಲ್ಲಿ ದಾಖಲಾಗಿರುವ ತಾಪಮಾನ

  • ಟಿ ನರಸೀಪುರ: ಗರಿಷ್ಠ-39.3, ಕನಿಷ್ಠ 25.5
  • ಹೆಚ್ ಡಿ ಕೋಟೆ: ಗರಿಷ್ಠ- 38.8, ಕನಿಷ್ಠ-24.3
  • ಸರಗೂರು: ಗರಿಷ್ಠ-38.8, ಕನಿಷ್ಠ-24.2
  • ಸಾಲಿಗ್ರಾಮ: ಗರಿಷ್ಠ-38.6, ಕನಿಷ್ಠ-24.0
  • ಹುಣಸೂರು: ಗರಿಷ್ಠ-37.9, ಕನಿಷ್ಠ-24.0
  • ಮೈಸೂರು:ಗರಿಷ್ಠ-38.5, ಕನಿಷ್ಠ-24.2
  • ಕೃಷ್ಣರಾಜನಗರ: ಗರಿಷ್ಠ-36.2, ಕನಿಷ್ಠ-23.7
  • ನಂಜನಗೂಡು: ಗರಿಷ್ಠ-39.1, ಕನಿಷ್ಠ-24.0
  • ಪಿರಿಯಾಪಟ್ಟಣ: ಗರಿಷ್ಠ-38.5, ಕನಿಷ್ಠ-23.3

ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ವಿಶ್ವಾದ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಆರೋಗ್ಯ ಎಂದರೆ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಸ್ಥಿತಿ. ಆದರೆ, ಹವಾಮಾನದಲ್ಲಿ ಉಂಟಾಗುತ್ತಿರುವ ತೀವ್ರ ಬದಲಾವಣೆಗಳು ಮಾನವನ ಆರೋಗ್ಯದ ಮೇಲೂ ಸ್ಪಷ್ಟ ಪರಿಣಾಮ ಬೀರುತ್ತಿವೆ. ಬೇಸಿಗೆ ಮುನ್ನವೇ ತಾಪಮಾನ ಏರಿಕೆ ಕಂಡುಬರುತ್ತಿದ್ದು, ಚಳಿಗಾಲದಲ್ಲಿ ತೀವ್ರ ಚಳಿ ಕಾಡುತ್ತಿರುವುದು ಗಮನಾರ್ಹವಾಗಿದೆ” ಎಂದು ತಿಳಿಸಿದರು.

ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕುಗಳು ವನಸಿರಿ ನಾಡಾಗಿದ್ದರೂ, ಇತ್ತೀಚೆಗೆ ಇಲ್ಲಿ ಬಿಸಿಗಾಳಿ ಮತ್ತು ತಾಪಮಾನ ಏರಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ.

ಬಿಸಿಗಾಳಿಯಿಂದ ರಕ್ಷಣೆಗಾಗಿ ಸೂಚನೆಗಳು

  • ಬೇಸಿಗೆ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸರಳ ಕ್ರಮಗಳನ್ನು ಪಾಲಿಸುವುದು ಅತ್ಯವಶ್ಯಕ.
  • ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು; ದಾಹವಾಗದಿದ್ದರೂ ನೀರು ಸೇವಿಸುವುದು ಅಗತ್ಯ.
  • ತಾಜಾ ಹಣ್ಣುಗಳು, ಹಣ್ಣಿನ ರಸ ಹಾಗೂ ಓಆರ್‌ಎಸ್ ದ್ರಾವಣ ಸೇವಿಸುವುದರಿಂದ ನಿರ್ಜಲೀಕರಣವನ್ನು ತಡೆಯಬಹುದು.
  • ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು.
  • ಅಗತ್ಯವಿದ್ದರೆ ಟೋಪಿ, ಛತ್ರಿ ಮುಂತಾದ ರಕ್ಷಣಾತ್ಮಕ ಉಪಕರಣಗಳನ್ನು ಬಳಸಬೇಕು.
  • ಹೊರಾಂಗಣದಲ್ಲಿ ಕೆಲಸ ಮಾಡುವಾಗ ನೆರಳಿನಲ್ಲಿ ಕೆಲಸ ನಿರ್ವಹಿಸುವುದು ಉತ್ತಮ.
  • ಸಮತೋಲನ ಆಹಾರ ಸೇವನೆಗೆ ಆದ್ಯತೆ ನೀಡಬೇಕು.
  • ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು.

ಶಾಖಾಘಾತ(ಸನ್ ಸ್ಟ್ರೋಕ್) ಎಂದರೇನು?

ವಾತಾವರಣದ ಉಷ್ಣತೆ 42°Cಗಿಂತ ಹೆಚ್ಚಾದಾಗ ದೇಹದ ಒಳಗಿನ ತಾಪಮಾನ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಶಾಖವನ್ನು ಬೆವರು ಮುಖಾಂತರ ಹೊರಹಾಕಲು ಸಾಧ್ಯವಾಗದಾಗ ದೇಹದ ಉಷ್ಣತೆ ಹೆಚ್ಚಾಗಿ ‘ಶಾಖಾಘಾತ’ ಉಂಟಾಗುತ್ತದೆ.

ಶಾಖಾಘಾತದ ಲಕ್ಷಣಗಳು:

ತೀವ್ರ ಸುಸ್ತು, ಆಯಾಸ, ತಲೆನೋವು, ತಲೆ ಸುತ್ತುವುದು, ವಾಂತಿ, ವಾಕರಿಕೆ, ಸ್ನಾಯು ನೋವು ಮತ್ತು ಸೆಳೆತ, ಉಸಿರಾಟದ ವೇಗ ಮತ್ತು ಹೃದಯಬಡಿತ ಹೆಚ್ಚಳ, ಬಿಸಿ, ಕೆಂಪು ಅಥವಾ ಒಣ ತ್ವಚೆ, ರಕ್ತದೊತ್ತಡ ಕಡಿಮೆಯಾಗುವುದು. ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರುವ ಅಪಾಯವೂ ಇದೆ.

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

  • ಶಿಶುಗಳು ಮತ್ತು ಹಿರಿಯರು
  • ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಮಸ್ಯೆ ಹೊಂದಿರುವವರು
  • ಹೊರಾಂಗಣದಲ್ಲಿ ಕೆಲಸ ಮಾಡುವವರು
  • ಕ್ರೀಡಾಪಟುಗಳು ಮತ್ತು ಶ್ರಮದಾಯಕ ಕೆಲಸ ಮಾಡುವವರು ಬಿಸಿಲಿನ ಝಳಕ್ಕೆ ತುತ್ತಾಗುವ ಅಪಾಯವಿದೆ.

ತಡೆಗಟ್ಟುವ ವಿಧಾನಗಳು

  • ದಿನಕ್ಕೆ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು
  • ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು
  • ಗಾಢ ಬಣ್ಣದ ಹಾಗೂ ಬಿಗಿಯಾದ ಬಟ್ಟೆ ತೊಡುವುದನ್ನು ತಪ್ಪಿಸಬೇಕು
  • ಗಂಜಿ, ಮಜ್ಜಿಗೆ, ಎಳನೀರು, ಹಾಲು ಮುಂತಾದ ಪಾನೀಯಗಳನ್ನು ಸೇವಿಸಬೇಕು
  • ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಶ್ರಮದಾಯಕ ಕೆಲಸಗಳನ್ನು ತಪ್ಪಿಸಬೇಕು

ಶಾಖಾಘಾತಕ್ಕೆ ಪ್ರಥಮ ಚಿಕಿತ್ಸೆ

  • ಶಾಖಾಘಾತಕ್ಕೆ ತುತ್ತಾದವರನ್ನು ತಂಪಾದ ನೆರಳಿನ ಸ್ಥಳಕ್ಕೆ ಕರೆದೊಯ್ಯಬೇಕು.
  • ಬಟ್ಟೆಗಳನ್ನು ಸಡಿಲಿಸಿ ದೇಹಕ್ಕೆ ತಂಪಾದ ಗಾಳಿ ಹಾಗೂ ನೀರು ಸಿಂಪಡಿಸಬೇಕು.
  • ತೊಡೆ ಮತ್ತು ಕೈ ಸಂಧಿಗಳಲ್ಲಿ ಐಸ್ ಪ್ಯಾಕ್ ಇಡಬಹುದು.
  • ಎಳನೀರು, ಲಿಂಬೆ ರಸ ಮುಂತಾದ ನೈಸರ್ಗಿಕ ಪಾನೀಯಗಳನ್ನು ನೀಡಬಹುದು.
  • ದೇಹದ ಉಷ್ಣತೆಯನ್ನು ನಿರಂತರವಾಗಿ ಪರಿಶೀಲಿಸಬೇಕು.
  • ಸ್ಥಿತಿ ಗಂಭೀರವಾಗಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಈ ವಿಶೇಷ ಸುದ್ದಿ ಓದಿದ್ದೀರಾ?ತಂಬಾಕು ದರ ಕುಸಿತ, ಬೆಳೆ ಮಿತಿ ಹೇರಿಕೆ: ಮೈಸೂರು ಜಿಲ್ಲೆಯ ರೈತರು ಸಂಕಷ್ಟದಲ್ಲಿ

ಹವಾಮಾನ ಬದಲಾವಣೆಯ ಪರಿಣಾಮವಾಗಿ ಬಿಸಿಗಾಳಿ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಜನರು ಜಾಗೃತರಾಗಿರುವುದು ಅತ್ಯಂತ ಅಗತ್ಯ. ಸರಳ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಶಾಖಾಘಾತ ಸೇರಿದಂತೆ ಬೇಸಿಗೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ಆರೋಗ್ಯ ಇಲಾಖೆಯ ಸೂಚನೆಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

WhatsApp Image 2025 02 05 at 18.09.20
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | SBI ಎಟಿಎಂ ಕಳವು ಪ್ರಕರಣ: ನಾಲ್ವರು ಅಂತರರಾಜ್ಯ ಆರೋಪಿಗಳ ಬಂಧನ

ಭಾಲ್ಕಿ ನಗರದ ಹಿರೇಮಠ ಸಂಸ್ಥಾನ ಕ್ಯಾಂಪ್ಲೆಕ್ಸ್‌ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI)...

ಬೆಂಗಳೂರು | ಶಂಕಿತ ವಸ್ತು ಪತ್ತೆ; ತನಿಖೆ ಬೆನ್ನಲ್ಲೇ ಅದು ಖಾಲಿ ಟ್ಯೂಬ್ ಎಂದ ಅಧಿಕಾರಿಗಳು!

ಬೆಂಗಳೂರು ನಗರದ ಸೋನೆಹಳ್ಳಿಕೆರೆ ವೃತ್ತದ ಸಮೀಪದ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತಿರುವ ಖಾಲಿ...

ಕಮಲನಗರ | ಗುಳೆ ಹೋಗಬೇಡಿ, ಊರಲ್ಲಿಯೇ ವಿಬಿ-ಜಿ ರಾಮ್‌ ಜಿ ಕೆಲಸ ಮಾಡಿ

ಕೂಲಿ ಕಾರ್ಮಿಕರು ಗುಳೆ ಹೋಗದೆ ತಮ್ಮ ಗ್ರಾಮದಲ್ಲಿಯೇ ವಿಬಿ-ಜಿ ರಾಮ್‌ ಜಿ...

ಶಿವಮೊಗ್ಗ | ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ; ಮನೆಗೆ ತೆರಳಿ ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ

ಸರಳತೆ, ಜನಪರ ಕಾಳಜಿ ಮತ್ತು ಹೋರಾಟದ ಬದುಕಿನ ಪ್ರತೀಕವಾಗಿರುವ ಕಾಂಗ್ರೆಸ್‌ನ ಹಿರಿಯ...