ಭೂಮಿ ಕಳೆದುಕೊಂಡ ರೈತ ಮಕ್ಕಳಿಗೆ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಅಡಕನಹಳ್ಳಿಯ ಸಿದ್ದರಾಜು ಎಂಬ 28ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದು, ನ್ಯಾಯಕ್ಕಾಗಿ ಕೆ.ಆರ್.ಆಸ್ಪತ್ರೆಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆಗಿಳಿದಿತ್ತು.
ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಡಾ. ಯತಿಂದ್ರ ಸಿದ್ರಾಮಯ್ಯ ಮತ್ತು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಭೇಟಿ ನೀಡಿ, ಮೃತನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5ಲಕ್ಷ ಚೆಕ್ ನೀಡಿ, ಮೃತನ ಮಡದಿಗೆ ಉದ್ಯೋಗ ಬರವಸೆ ನೀಡಿದರು.
ಅಲ್ಲದೇ, ಕಾರ್ಖಾನೆಯಿಂದ ಹೆಚ್ಚಿನ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದ ನಂತರ, ರೈತ ಸಂಘ ಪ್ರತಿಭಟನೆ ಹಿಂಪಡೆಯಿತು. ಸಂಜೆ 3.30ರ ಸಮಯದಲ್ಲಿ ಪ್ರತಿಭಟನೆ ಹಿಂಪಡೆದು ಶವ ಸಂಸ್ಕಾರ ನಡೆಸಲು ತೀರ್ಮಾನಿಸಿದರು.
ಕೈಗಾರಿಕೆಗಾಗಿ ಜಮೀನು ಪಡೆದು ಉದ್ಯೋಗ ನೀಡದ ಕಾರಣ ಬೇಸರಗೊಂಡು ಯುವ ರೈತನೋರ್ವ ಡೆತ್ ನೋಟ್ ಬರೆದಿಟ್ಟು, ನಂಜನಗೂಡಿನ ಅಡಕನಹಳ್ಳಿ ಗ್ರಾಮದ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪಿ. ಮರಂಕಯ್ಯ, ಚಂದ್ರಶೇಖರ ಮೇಟಿ, ಉಗ್ರ ನರಸಿಂಹ ಗೌಡ, ಕರುಣಾಕರ, ಬಕ್ಕಳಿ ನಂಜುಂಡಸ್ವಾಮಿ, ಸಿರಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಪ್ರೇಮ ರಾಜ್, ಸಾಲುಂಡಿ ಬಸವರಾಜು, ಸಂತೋಷ್, ಶ್ರೀಕಂಠ, ರಂಗಸ್ವಾಮಿ, ಮಹೇಶ, ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.