ಶಿವಮೊಗ್ಗ | ತೀರ್ಥಹಳ್ಳಿ – ಕುಂದಾಪುರ ಹೆದ್ದಾರಿಯಲ್ಲಿ ಏ. 15ರ ವರೆಗೆ ವಾಹನ ಸಂಚಾರ ಬಂದ್‌

Date:

  • ಬಾಳೆಬರೆ ಘಾಟಿ ಎರಡು ಭಾಗಗಳಲ್ಲಿ ಕಾಂಕ್ರೀಟ್ ಪೇವ್‌ಮೆಂಟ್‌ ನಿರ್ಮಾಣ ಕಾರ್ಯ
  • ಪರ್ಯಾಯ ಮಾರ್ಗ ಬಳಸಲು ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಅಧಿಸೂಚನೆ

ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿ ಎರಡು ಭಾಗಗಳಲ್ಲಿ ಕಾಂಕ್ರೀಟ್ ಪೇವ್‌ಮೆಂಟ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಏಪ್ರಿಲ್‌ 15ರ ವರೆಗೆ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

ಈ ಹಿಂದೆ ಏ. 5ರ ವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕಾಮಗಾರಿ ವೇಳೆ ಹಲವು ಬಾರಿ ಯಂತ್ರೋಪಕರಣಗಳು ದುರಸ್ತಿಗೆ ಒಳಪಟ್ಟ ಕಾರಣ ಹೆಚ್ಚುವರಿ ಹತ್ತು ದಿನಗಳ ಕಾಲ ಸಂಚಾರ ನಿಷೇಧ ವಿಸ್ತರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಗೋ ಸಾಗಾಟ | ವಾಹನ ತಡೆದ ಬಳಿಕ ಸ್ಟನ್ ಗನ್ ಬಳಸಿ ದೌರ್ಜನ್ಯ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ

ಸದ್ಯ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ – ಹಾಲಾಡಿ – ಬನ್ನೂರು ಅಥವಾ ತೀರ್ಥಹಳ್ಳಿ – ಹೆಬ್ರಿ – ಉಡುಪಿ – ಕುಂದಾಪುರ ಈ ರಸ್ತೆ ಮೂಲಕ ಸಂಚರಿಸಬೇಕು. ಘನ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ-ಕಾನಗೋಡು-ನಗರ-ಕೊಲ್ಲೂರು ಕುಂದಾಪುರ ಈ ರಸ್ತೆ ಮೂಲಕ ಸಂಚರಿಸಬೇಕು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಕಾಟ, ರೋಗಿಗಳು ಹೈರಾಣು

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳ ಕೊರತೆ...

ಗದಗ | ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶ

ಶಿಕ್ಷಣದ ಹಕ್ಕಿಗಾಗಿ, ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿನಿಯರಿಗೆ ಸಮಾನ ಗುಣಮಟ್ಟದ ಶಿಕ್ಷಣ ಹಾಗೂ...

ರಾಯಚೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ಧರಣಿ

ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ...

ಬೆಳಗಾವಿ | ಅಧಿವೇಶನದಲ್ಲಿ ಭಾಗವಹಿಸುವವರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಡಿ.4ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವವರಿಗೆ ವಸತಿ,...