ಮೈಸೂರು | ವಂಚಿತರಿಗೆ ಸಾಮಾಜಿಕ ನ್ಯಾಯ ನೀಡುವುದು ಕಾನೂನು ಶಿಕ್ಷಣದ ಮುಖ್ಯ ಗುರಿ: ಪ್ರೊ ಎಂ ಕೆ ರಮೇಶ್

Date:

ಕಾನೂನು ಶಿಕ್ಷಣದ ಮುಖ್ಯ ಗುರಿಯೇ ವಂಚಿತರಿಗೆ ಸಾಮಾಜಿಕ ನ್ಯಾಯ ನೀಡುವುದು ಎಂದು ಬೆಂಗಳೂರಿನ ನ್ಯಾಷನಲ್ ಲಾ ಆಫ್ ಇಂಡಿಯಾ ಯುನಿವರ್ಸಿಟಿಯ ನಿವೃತ್ತ ಕಾನೂನು ಪ್ರಾಧ್ಯಾಪಕ ಪ್ರೊ ಎಂ ಕೆ ರಮೇಶ್ ಅಭಿಪ್ರಾಯಿಸಿದರು.

ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜು ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾನೂನೇತರ ಕಾರಣಗಳಿಂದಾಗಿ ವಂಚಿತರಾದ ದೇಶದ ಜನಕ್ಕೆ ಕಾನೂನಿನ ಮೂಲಕ ನ್ಯಾಯ ಒದಗಿಸುವುದು ಮುಖ್ಯ ಕೆಲಸ ಆಗಬೇಕಿದೆ. ಸಾಮಾಜಿಕ ಅಸಮಾನತೆಗೆ ನೂರಾರು ಕಾರಣ ನೀಡಬಹುದು ಆದರೆ ಕಾನೂನು ಒಂದು ಅಸ್ತ್ರವಾಗಿ, ಒಂದು ಸಾಧನವಾಗಿ ಬಳಸುವುದರ ಮೂಲಕ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬಹುದು ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕೆ ಪುಟ್ಟಸ್ವಾಮಿಯವರ ನಿರಂತರ ಶ್ರಮದಿಂದ ಗುಂಡಪ್ಪ ಗೌಡ ಹಾಗೂ ಪಿ ಎಂ ಚಿಕ್ಕಬೋರಯ್ಯ ನೆರವಿನ ಫಲವಾಗಿ ವಿದ್ಯಾವರ್ಧಕ ಕಾನೂನು ಕಾಲೇಜು ಆರಂಭವಾಯಿತು. ನಾನು ಸಹ ಮೊದಲ ಬ್ಯಾಚಿನ ವಿದ್ಯಾರ್ಥಿ ಎಂದ ಅವರು, “ಈ ಹಿಂದೆಯಲ್ಲ ಕಾನೂನು ಶಿಕ್ಷಣ ಕೈಗೆಟಕುವ ರೀತಿಯಲ್ಲಿ ಇರಲಿಲ್ಲ. ನೆರೆ ರಾಜ್ಯಗಳಿಗೆ, ಉತ್ತರ ಭಾರತದ ಕಡೆಗೆ ತೆರಳಬೇಕಾದ ಪರಿಸ್ಥಿತಿ ಇತ್ತು ಆಗ ಇದನ್ನೆಲ್ಲ ಮನಗಂಡು ಹಿರಿಯರ ಶ್ರಮದ ಫಲ ಕಾನೂನಿನ ಅಭ್ಯಾಸಕ್ಕೆ ವೇದಿಕೆಯಾಯಿತು” ಎಂದು ತಿಳಿಸಿದರು.

“ಕಾನೂನು ಶಿಕ್ಷಣವನ್ನು ಗಂಭೀರವಾಗಿ ತೆಗೆದುಕೊಂಡ ಹಾಗೆ, ಕಾನೂನು ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಕಾನೂನು ಕೇವಲ ವ್ಯವಹಾರದಂತೆ ಆಗಬಾರದು. ನೊಂದವರಿಗೆ, ವಂಚಿತರಿಗೆ ನ್ಯಾಯ ಒದಗಿಸುವ ಅಸ್ತ್ರವಾಗಬೇಕು. ಯಾವುದೇ ರಾಜಕೀಯದ ದಾಳವಾಗಿ ಉರುಳದೆ, ಸಾಮಾಜಿಕ ಕಳಕಳಿಯ ಮೂಲವಾಗಬೇಕು. ಕಾಲುದಾರಿಯಲ್ಲಿ ನಡೆಯುವುದರ ಬದಲು ಹೆದ್ದಾರಿಯಲ್ಲಿ ನಡೆಯುವ ದಿಟ್ಟತನ ನಿಮ್ಮಲ್ಲಿರಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಪ್ರೊ ಎಂ ಕೆ ರಮೇಶ್ ಸಲಹೆ ನೀಡಿದರು.

ಇದನ್ನು ಓದಿದ್ದೀರಾ? ಶಿರೂರು ದುರಂತ | ಮತ್ತೆ ಕಾರ್ಯಾಚರಣೆ ಮುಂದುವರಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ ವಿಶ್ವನಾಥ್, ಎಸ್ ಶಿವಲಿಂಗಯ್ಯ, ಪ್ರಾಂಶುಪಾಲ ಡಾ ಪಿ ದೀಪು, ಡಾ ಕೆ ಎಲ್ ಚಂದ್ರಶೇಖರ್ ಐಜೂರು, ಐ ಜಿ ಸ್ವಾತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಒಳ ಮೀಸಲಾತಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಸೆ.12ರಂದು ರಾಜ್ಯಾದ್ಯಂತ ತಮಟೆ ಚಳವಳಿ

ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು...

ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 'ಪೂರ್ಣಚಂದ್ರ...

ಬಂಟ್ವಾಳ | ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿ,...