ರಾಯಚೂರು | ವಿದ್ಯುತ್ ಉತ್ಪಾದನೆ ಕುಸಿತ; ಹೆಚ್ಚಿದ ಬೇಡಿಕೆ

Date:

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದ್ದು ಕಲ್ಲಿದ್ದಲು ಆಧಾರಿತ ಘಟಕಗಳು ಸೇರಿದಂತೆ ಇತರೆ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಇಳಿಕೆಯಾಗುತ್ತಿದೆ.

ರಾಯಚೂರು ಶಾಖೋತ್ಪನ್ನ ಕೇಂದ್ರದ ಐದು ಘಟಕಗಳು ಸ್ಥಗಿತಗೊಂಡಿದ್ದು‌, ಉಳಿದ ಮೂರು ಘಟಕಗಳಲ್ಲಿಯೂ ಉತ್ಪಾದನೆ ಇಳಕೆಯಾಗಿದೆ.

1720 ಮೆ ವ್ಯಾ ವಿದ್ಯುತ್ ಸಾಮರ್ಥ್ಯವಿರುವ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ 160 ಮೆ ವ್ಯಾ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ. ಇನ್ನೂ ವೈಟಿಪಿಎಸ್, ಬಿಟಿಪಿಎಸ್ ವಿದ್ಯುತ್ ಘಟಕಗಳು ಪೂರ್ಣಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಮಧ್ಯೆ ಮಳೆ ಕುಸಿತವಾದ ಪರಿಣಾಮ ಜಲಾಧಾರಿತ ಘಟಕಗಳು ಉತ್ಪಾದನೆ ನಿಲ್ಲಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯದಲ್ಲಿ 10 ಸಾವಿರ ಮೆ ವ್ಯಾ ವಿದ್ಯುತ್ ಬೇಡಿಕೆಯಿದ್ದು, ಉತ್ಪಾದನೆ ಮಾತ್ರ 2750 ಮೆ ವ್ಯಾ ಆಗುತ್ತಿದೆ. ಕೇಂದ್ರ ಗ್ರೀಡ್ ಹಾಗೂ ಸೋಲಾರ್ ಮೂಲದಿಂದ ವಿದ್ಯುತ್ ಲಭ್ಯವಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಸಾಧ್ಯವಾಗದೇ ಇರುವದರಿಂದ ಪೂರೈಕೆಯನ್ನು ಸರಿದೂಗಿಸಲು ಸಮಸ್ಯೆ ಎದುರಾಗಿದೆ.

ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆಯಿಂದ ಹೊರ ಬಾರದ ಕಲ್ಲಿದ್ದಲು ಘಟಕಗಳು ನಿರಂತರ ವಿದ್ಯುತ್ ಉತ್ಪಾದನೆ ಸಮಸ್ಯೆ ಸುಳಿಗೆ ಸಿಲುಕಿದತಾಗಿದೆ. ರಾಜ್ಯ ಸರ್ಕಾರ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.

“ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ದುರಸ್ತಿ, ತಾಂತ್ರಿಕ ಸಮಸ್ಯೆ ಹೆಸರಿನಲ್ಲಿ ವಿದ್ಯುತ್ ಕಡಿತ ನಡೆಯುತ್ತಲೇ ಇದೆ. ಶಾಖೋತ್ಪನ್ನ ಘಟಕಗಳ ನಿರ್ವಹಣೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಉತ್ಪಾದನೆಯಲ್ಲಿ ಇಳಿಕೆಯಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಿ: ಆರ್.ಇಂದಿರಾ

ಸೋಲಾರ್, ಪವನ ಸೇರಿದಂತೆ ಇತರೆ ಮೂಲಗಳ ಉತ್ಪಾದನೆಯಿಂದ ಬೇಡಿಕೆ ಸಮತೋಲನ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ವಿದ್ಯುತ್ ಖರೀದಿ ಪ್ರಕ್ರಿಯೆಯೂ ಪ್ರಾರಂಭಗೊಂಡಿದೆ. ಯುಪಿಸಿಎಲ್, ಜಿಂದಾಲ್ ಸೇರಿದಂತೆ ಇತರೆ ಖಾಸಗಿ ಕಂಪನಿಗಳಿಂದ ಖರೀದಿ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದೆ. ಜಲಾಶಯಗಳ ಸಂಗ್ರಹ ಕುಸಿಯುತ್ತಿದೆ. ಮಳೆಯಾದರೆ ಮಾತ್ರ ವಿದ್ಯುತ್ ಬೇಡಿಕೆ ಇಳಿಕೆಯಾಗುವ ಸಾಧ್ಯತೆಯಿದೆ.

ರಾಯಚೂರು ಜಿಲ್ಲಾ ಸಿಟಿಜನ್‌ ಜರ್ನಲಿಸ್ಟ್‌ ಹಫೀಜುಲ್ಲ ಮಾಹಿತಿ ಆಧರಿಸಿದ ವರದಿ
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ

ಪ್ರತಿವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬಜೆಟ್‌ನಲ್ಲಿ ಕಸ ವಿಲೇವಾರಿಗೆಂದೇ ಹಣ...

ಚನ್ನಪಟ್ಟಣ ಉಪಚುನಾವಣೆಯಲ್ಲಿ ದರ್ಶನ್ ಕಣಕ್ಕಿಳಿಸಲು ಡಿಕೆ ಸಹೋದರರು ಯೋಜಿಸಿದ್ದರು: ಸಿಪಿ ಯೋಗೇಶ್ವರ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಚನ್ನಪಟ್ಟಣ ಉಪಚುನಾವಣೆಯಲ್ಲಿ...

ಹಾಸನ | ಬೀದಿ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳ ದರ್ಪ; ಬದುಕು ಬೀದಿ ಪಾಲು

ಶಿಲ್ಪಕಲೆಗಳ ತವರೂರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ, ಚನ್ನಕೇಶವನ ನಾಡು ವಗೈರೆ...

ಹಾಸನ | 3ನೇ ಅವಧಿಗೆ ಮೋದಿ ಪ್ರಧಾನಿ; 12 ಕಿ.ಮೀ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದ ಮೋದಿ ಭಕ್ತ

ಮೋದಿ 3ನೇ ಬಾರಿಗೆ ಪ್ರಧಾನಿಯಗಬೇಕೆಂದು ಹರಕೆ ಹೊತ್ತಿದ್ದ ಮೋದಿ ಅಭಿಯಾನಿಯೊಬ್ಬ, 12...