ರೈಲು ಹಳಿ ನಿರ್ಮಾಣಕ್ಕೆ ಅಗತ್ಯವಿದ್ದ ಮಣ್ಣಿನ ಸಲುವಾಗಿ ಅಗೆದಿದ್ದ ಗುಂಡಿಯಲ್ಲಿ ಎಂಟು ವರ್ಷದ ಬಾಲಕ ಬಿದ್ದು ಸಾವನ್ನಪ್ಪಿದ ಘಟನೆ ಮಾನ್ವಿ ತಾಲ್ಲೂಕು ಕಪಗಲ್ ಹೊರವಲಯದಲ್ಲಿ ನಡೆದಿದೆ.
ಬಾಲಕ ಯಶವಂತ್ (8) ದುರ್ದೈವಿ. ಮಣ್ಣಿಗಾಗಿ ಅಗೆದಿದ್ದ ಗುಂಡಿಯನ್ನು ಹಾಗೆಯೇ ಬಿಡಲಾಗಿತ್ತು. ಈಚೆಗೆ ಸುರಿದ ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾನುವಾರ ಪೋಷಕರೊಂದಿಗೆ ಜಮೀನಿಗೆ ಬಂದಿದ್ದ ಬಾಲಕ, ಆಟವಾಡುತ್ತಾ ಬಂದು ಗುಂಡಿಯಲ್ಲಿ ಬಿದ್ದಿದ್ದಾನೆ.
ಕೆಲಸದಲ್ಲಿ ಮಗ್ನರಾಗಿದ್ದ ಪಾಲಕರಿಗೆ ಬಾಲಕ ಬಿದ್ದಿದ್ದು ಮೊದಲು ತಿಳಿದಿರಲಿಲ್ಲ. ಕೆಲ ಹೊತ್ತಿನ ನಂತರ ಮಗನಿಗಾಗಿ ಅವರು ಹುಡುಕಿದಾಗ ಗುಂಡಿಯಲ್ಲಿ ಶವ ಸಿಕ್ಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿಥಿಲ ಕಟ್ಟಡದಲ್ಲಿ ಶಿಕ್ಷಣ; ಮದರಕಲ್ ಸರ್ಕಾರಿ ಶಾಲೆಯ ದುಸ್ಥಿತಿಗಿಲ್ಲ ಮುಕ್ತಿ
ಪೋಷಕರು ನೀಡಿದ ದೂರಿನನ್ವಯ ರೈಲು ಮಾರ್ಗ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





