ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ನಮ್ಮ ಸರ್ಕಾರ ಅಷ್ಟು ಪ್ರಚಾರ ಮತ್ತು ದಂಡದ ಮೂಲಕ ಪ್ರಜ್ಞೆ ಮೂಡಿಸುತ್ತಲೇ ಬಂದಿದೆ. ಆದರೆ ಸಾರ್ವಜನಿಕರು ಕಡೆಗಣಿಸುತ್ತಿದ್ದಾರೆ. ಇದರಿಂದ ನಮ್ಮ ತಪ್ಪು ಅಥವಾ ನಮ್ಮದಲ್ಲದ ತಪ್ಪಿನ ಪರಿಣಾಮವಾಗಿ ಎಷ್ಟೋ ಜೀವಗಳು ಪ್ರಾಣಪಾಯಕ್ಕೆ ಸಿಲುಕಿವೆ.
ಬಾಗಲಕೋಟೆ ಜಿಲ್ಲೆ, ರಬಕವಿಯ ಹಜಾರೆ ಬಟ್ಟೆ ಅಂಗಡಿಯ ಮುಂಭಾಗದಲ್ಲಿ ರಸ್ತೆಯ ಮೇಲೆಯೇ ಸಾವಿರಾರು ವಾಹನಗಳನ್ನು ನಿಲ್ಲಿಸಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಪ್ರತಿ ವರ್ಷವೂ ಅಪಘಾತಗಳಲ್ಲಿ ಪ್ರಾಣ ಹಾನಿ ಸಂಭವಿಸಿದ ಉದಾಹರಣೆಗಳಿವೆ. ಆದರೆ ಇಲ್ಲಿಯವರೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
ಸ್ಥಳೀಯರು ಹೇಳುವ ಪ್ರಕಾರ ಈ ಸ್ಥಳವು ಅಪಘಾತದ ಕೇಂದ್ರವಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆಯನ್ನು ಅಕ್ರಮಿಸಿಕೊಂಡಿರುತ್ತಾರೆ. ಇದರಿಂದ ಕಬ್ಬಿನ ಟ್ರಾಕ್ಟರ್ ಹಾಗೂ ಸರಕು ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಪ್ರತಿ ವರ್ಷವೂ ಅನೇಕ ಅಪಘಾತಗಳು ನಡೆಯುತ್ತಿವೆ. ಈ ಅವ್ಯವಸ್ಥೆಯನ್ನು ಆದಷ್ಟು ಬೇಗ ಸರಿಪಡಿಸಲು ಅವರು ಆಗ್ರಹಿಸಿದ್ದಾರೆ.




