ಕರ್ನಾಟಕ ಬಂದ್‌ | ರಾಯಚೂರು: ಕಾವೇರಿ ಕೂಗಿಗೆ ಹಲವು ಸಂಘಟನೆಗಳ ಬೆಂಬಲ

Date:

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕರೆ ಕೊಡಲಾಗಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ರಾಯಚೂರಿನಲ್ಲಿ ಹಲವು ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಯಚೂರು ಜಿಲ್ಲಾಧಿಕಾರಿಗೆ ಹಕ್ಕೊತ್ಥಾಯ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಪ್ರತಿಭಟನೆ ನಡೆಸಿದ್ದು, “ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು, ಜಲಾಶಯಗಳು ಬರಿದಾಗಿವೆ. ಸಂಕಷ್ಟದ ಸಮಯದಲ್ಲಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆ. ವಸ್ತುಸ್ಥಿತಿ ಅರಿಯದೇ ನೀಡಿರುವ ತೀರ್ಮಾನ ರದ್ದುಗೊಳಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವೀರೇಶ ಹೀರಾ, ಜಿಲ್ಲಾ ಸಂಚಾಲಕ ವಿರೇಶರೆಡ್ಡಿ, ತಾಲೂಕ ಅಧ್ಯಕ್ಷ ವೆಂಕಟರೆಡ್ಡಿ, ತುಳಜಾರಾಮ, ಶ್ಯಾಮ ಮಹೇಂದ್ರಕರ್, ರಾಜು ಭವಾನಿ, ವಿರುಪನಗೌಡ, ರಮೇಶ ವನಮಾಲಿ, ಎಂ.ಈರಣ್ಣ, ರುದ್ರಗೌಡ, ರುದ್ರಪ್ಪ, ಶಾಲಂ ಟೇಲರ್, ನರಸಿಂಗರಾವ್, ಅಮರೇಶ ಮಹೇಂದ್ರಕರ, ನಾಗೇಶ ಪತಂಗೆ, ಶಿವಶಂಕರ ಹೀರೆಮಠ ಸೇರಿದಂತೆ ಇತರರು ಇದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಮ್ ಅದ್ಮಿ ಪಕ್ಷದ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಆಮ್ ಅದ್ಮಿ ಪಕ್ಷದ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕರ್ನಾಟಕ ಬಂದ್ | ಚಿಕ್ಕಬಳ್ಳಾಪುರ: ತಲೆ ಬೋಳಿಸಿಕೊಂಡು ಪ್ರತಿಭಟನೆ

ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ರಾಜ್ಯದ ಸಂಸದರು ಧ್ವನಿ ಎತ್ತಬೇಕು. ಈ ಹಿಂದೆ ಸಂಸದರಾಗಿದ್ದ ಅನಂತಕುಮಾರ, ವೆಂಕಯ್ಯ ನಾಯ್ಡು ಇವರು ಕನ್ನಡಿಗರ ಪರವಾಗಿ ಧ್ವನಿಯೆತ್ತಿದಂತೆ ಹಣಕಾಸು ಸಚಿವ ನಿರ್ಮಲಾ ಸೀತರಾಮನ್ ಧ್ವನಿಯೆತ್ತಿ ನ್ಯಾಯ ಕೊಡಿಸಬೇಕು” ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶಕುಮಾರ, ನುಸ್ರತ್ ಅಲಿ, ಖಾದರ್ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗದ ಒಂದೇ ಕುಟುಂಬದ ನಾಲ್ವರ ಹತ್ಯೆ: ಪ್ರಕರಣ ಭೇದಿಸಿದ ಪೊಲೀಸರು: ಮಗ ವಿನಾಯಕನಿಂದಲೇ ಸುಪಾರಿ!

ಲೋಕಸಭಾ ಚುನಾವಣೆಯ ಹೊತ್ತಲ್ಲೇ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೂರು ದಿನಗಳ ಹಿಂದೆ...

ಓಡೋ.. ಓಡೋ.. ಓಡೋಲೇ – ಬೆಂಗಳೂರು ದಕ್ಷಿಣದಿಂದಲೂ ಓಡುವರೇ ತೇಜಸ್ವಿ ಸೂರ್ಯ

ಬಿಜೆಪಿಯ ಅಗ್ರಹಾರದಲ್ಲಿ ಪ್ರಬಲ ವಾಗ್ಮಿ ಎಂದೇ ಕರೆಸಿಕೊಂಡಿರುವ ತೇಜಸ್ವಿ ಸೂರ್ಯ ಅಷ್ಟೇ...

ಕಲಬುರಗಿ | ಸರ್ಕಾರಗಳಿಂದ ತೊಗರಿಬೆಳೆಗಾರರಿಗೆ ದ್ರೋಹ: ಶರಣಬಸಪ್ಪ ಮಮಶೆಟ್ಟಿ

ಕಲ್ಯಾಣ ಕರ್ನಾಟಕ ನಾಡಿನ ತೊಗರಿಕಣಜದ ಅಭಿವೃದ್ಧಿ ಕುಂಟಿತಾ ಕಂಡಿದೆ ಇದೊಂದು ತೊಗರಿ...