ರಾಯಚೂರಿನಲ್ಲಿ 80ರ ದಶಕದಲ್ಲಿ ಯುವಜನರ ದಮನ ದಲಿತರ ಆಂದೋಲನ ಕಟ್ಟುವುದರಲ್ಲಿ ಶ್ರಮವಹಿಸಿದ ಪುರುಷೋತ್ತಮ ಕಲಾಲಬಂಡಿ ಎಂದು ಸಾಮಾಜಿಕ ಚಿಂತಕ ಆರ್ ಕೆ ಹುಡುಗಿ ಹೇಳಿದರು.
ಪುರುಷೋತ್ತಮ ಕಲಾಲಬಂಡಿರವರ ಒಡನಾಡಿಗಳ ಬಳಗದ ವತಿಯಿಂದ ಪುರುಷೋತ್ತಮ ಕಲಾಲ ಬಂಡಿ ಅವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ʼಮರೆಯದ ಕೆಂಪು ನಕ್ಷತ್ರ ಕೃತಿʼ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕಲಾಲ ಬಂಡಿ ಅವರು ನಮ್ಮ ಬಲಗೈ ಬಂಟನಾಗಿ ನಮ್ಮ ಮಧ್ಯದಲ್ಲಿ, ಹೋರಾಟದಲ್ಲಿ, ಘೋಷಣೆ ಸದ್ದಿನಲ್ಲಿ, ಕೆಂಪು ಧ್ವಜದಲ್ಲಿಯೂ ಹಾಗೆಯೇ ಪ್ರತಿ ಕ್ಷಣದಲ್ಲಿಯೂ ಇದ್ದಾರೆ. ಕ್ರಾಂತಿಗೆ ಹೇಗೆ ಸಾವಿಲ್ಲವೋ ಹಾಗೆಯೇ ಕ್ರಾಂತಿಕಾರಿಗೂ ಸಾವಿಲ್ಲ. ಪುರುಷೋತ್ತಮ ಕಲಾಲ ಬಂಡಿ ಅವರ ಚಿಂತನೆ, ಹೋರಾಟ ಅವರು ಹೇಳಿದ ಮಾರ್ಗವನ್ನು ಮುನ್ನಡೆಸಿ ಅವರ ಕನಸು ನನಸು ಮಾಡಬೇಕು” ಎಂದರು.
ಹೋರಾಟಗಾರ್ತಿ, ಚಿಂತಕಿ ಕೆ ನೀಲಾ ಮಾತನಾಡಿ, “ರಾಯಚೂರು ನಾಡು ಹೋರಾಟದ ಉಲ್ಲಾಸ, ಉತ್ಸಾಹದ ಕೇಂದ್ರ ಬಿಂದುವಾಗುವುದಕ್ಕೆ ಶ್ರಮ ಹಾಕಿದ ಪುರುಷೋತ್ತಮ ಕಲಾಲ ಬಂಡಿ ಅವರೂ ಕೂಡ ಕಾರಣರಾಗಿದ್ದಾರೆ. ಜನರು ಸಮಸ್ಯೆ ಎಂದು ಬಂದಾಗ ಅವರ ಜೀವವನ್ನೇ ಪಣಕ್ಕಿಟ್ಟು ಹೋರಾಟಕ್ಕೆ ಸಿದ್ಧರಾಗುತ್ತಿದ್ದರು. ಈಗಿನ ಕೆಲವು ಘಟನೆ ಪರಿಸ್ಥಿತಿ ನೋಡಿದರೆ ಅವರು ಒಂದು ನಿಮಿಷವೂ ಕೂಡ ಕಾಯುತ್ತಿರಲಿಲ್ಲ” ಎಂದು ಹೇಳಿದರು.
“ಬೀದಿಯ ಮೇಲೆ ರಕ್ತವಿದೆ. ಮಣಿಪುರ, ಪ್ಯಾಲೆಸ್ತೀನ್ ಇವೆಲ್ಲವೂ ನಮ್ಮ ಕಣ್ಣ ಮುಂದೆ ಇದೆ. ನಾವು ಹೋರಾಟದ ಕಿಚ್ಚು ಸದಾ ಕಲ್ಲಿದ್ದಲ ಕೆಂಡವಂತಾಗಿರಬೇಕು. ನಾವು ಪರಸ್ಪರ ಕೈ ಕೈ ಜೋಡಿಸಿ ಗಟ್ಟಿಯಾಗಬೇಕು. ಸಮಾಜಕ್ಕೆ ಬದಲಾವಣೆ ಮಾಡುವುದಕ್ಕೆ ಏನು ಮಾಡಬೇಕೋ ಅದನ್ನು ನಾವು ಮುಂದುವರೆಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೈಗೆ ಬಾರದ ಬೆಳೆ; ಆದಾಯಕ್ಕೆ ಪರ್ಯಾಯ ಮಾರ್ಗ ಹುಡುಕಿದ ರೈತರು
1989 ಹೋರಾಟದಲ್ಲೂ ಭಾಗಿಯಾದಾಗ ನಾವು ಜನರ ಮಧ್ಯದಲ್ಲಿ ಹೋಗಬೇಕು. ಆವಾಗ ಜನರೇ ನಮ್ಮನ್ನು ಮುಂದೆ ಕರೆದುಕೊಂಡು ಹೋಗುತ್ತಾರೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಭಾರತ ಸಂಪಾದಕ ಚಂದ್ರ ಶೇಖರ ಬಾಳೆ, ಮಾಜಿ ಹಟ್ಟಿ ಚಿನ್ನದಗಣಿ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ವಿಜ್ಞಾನಿ ಪ್ರಭಾ ಬೆಳವಂಗಲ, ಮರೆಯದ ಕೆಂಪು ನಕ್ಷತ್ರ ಕೃತಿಯ ಸಂಪಾದಕ ವೀರ ಹನುಮಾನ, ಏಮ್ಸ್ ಹೋರಾಟಗಾರ ಬಸವರಾಜ್ ಕಳಸ, ಪತ್ರಕರ್ತ ಕೆ ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.