ರಾಮನಗರ | ಮಕ್ಕಳಿಗೆ ಗೂಡ್ಸ್‌ ವಾಹನ ಢಿಕ್ಕಿ ಪ್ರಕರಣ; ರಸ್ತೆ ಮಧ್ಯೆ ಬಾಲಕಿ ಶವವಿಟ್ಟು ಪ್ರತಿಭಟನೆ

Date:

ರಾಮನಗರ ತಾಲೂಕಿನ ಗೊಲ್ಲರದೊಡ್ಡಿಯಲ್ಲಿ ಮಕ್ಕಳಿಗೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಬಾಲಕಿ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸೋಮವಾರ ಬೆಳಿಗ್ಗೆ ಬಾಲಕಿ ಶವವನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮದ ರಾಜಣ್ಣ ಮತ್ತು ಶಾಂತಮ್ಮ ದಂಪತಿಯ ಎರಡನೇಯ ಪುತ್ರಿ, ಒಂದನೇ ತರಗತಿಯಲ್ಲಿ ಓದುತ್ತಿದ್ದ ಜ್ಞಾನವಿ (7) ಮೃತ ಬಾಲಕಿ. ಘಟನೆ ನಡೆದ ದಿನವೇ ಅವರ ಮೊದಲ ಪುತ್ರಿ ಶಾಲಿನಿ (9) ಕೊನೆಯುಸಿರೆಳೆದಿದ್ದಳು. ಇದರೊಂದಿಗೆ ಘಟನೆಯಲ್ಲಿ ಮೃತರಾಗಿರುವ ಮಕ್ಕಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಗದಗ | ಯುವಜನತೆಯ ಕ್ರಿಯಾಶೀಲತೆಗೆ ಬಹುಶಿಸ್ತೀಯ ಪ್ರದರ್ಶನ ಪೂರಕ: ಪ್ರೊ. ಎಸ್ ವಿ ಸಂಕನೂರು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಳಿಗ್ಗೆಯೇ ರಸ್ತೆ ಮಧ್ಯೆ ಶವವಿಟ್ಟು ಜಮಾಯಿಸಿದ ಗ್ರಾಮಸ್ಥರು, ಟೈಯರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. “ನಾಲ್ವರು ಮಕ್ಕಳನ್ನು ಬಲಿ ಪಡೆದ ಗೂಡ್ಸ್ ವಾಹನದ ಚಾಲಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಅಳಲು ಆಲಿಸಬೇಕು. ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮ: ಜಿಲ್ಲಾಧಿಕಾರಿ

ಮೈಸೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ...

ರಾಯಚೂರು | ವಿಶೇಷಚೇತನ ಅನುದಾನ ಪೂರ್ಣ ಬಳಕೆಯಲ್ಲಿ ವಿಫಲ: ಸುರೇಶ ಭಂಡಾರಿ ಮದುಗಲ್

ವಿಶೇಷಚೇತನರ ಕಲ್ಯಾಣಕ್ಕಾಗಿ ರೂಪಿಸಿರುವ ಕಾಯ್ದೆ ಕಾನೂನುಗಳನ್ನು ಜಿಲ್ಲಾಡಳಿತ ಉಲ್ಲಂಘಿಸುತ್ತಿದೆ. ವಿಶೇಷಚೇತನರ ಅನುದಾನ...

ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಮೃತದೇಹ ಪತ್ತೆ

ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಸ್ಪದವಾಗಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಸಂಪಗಿರಾಮ ಠಾಣೆಯ...

ಬೆಂಗಳೂರು | ನಮ್ಮ ಮೆಟ್ರೋದಲ್ಲಿ ‘ಸೆಲ್ಫಿ ಪಾಯಿಂಟ್’ ನಿರ್ಮಾಣ

ಸೆಲ್ಫಿ ಪ್ರಿಯರಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ನಮ್ಮ ಮೆಟ್ರೋದಲ್ಲಿ...