ಮಹತ್ವದ ತೀರ್ಪೋಂದರಲ್ಲಿ ಸುಪ್ರಿಂ ಕೋರ್ಟ್ ಇಂದು(ಸೋಮವಾರ) ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಸಮ್ಮತಿ ಸೂಚಿಸಿದೆ.
‘ಭಾರತೀಯ ಸಮಾಜದಲ್ಲಿ ಮದುವೆಯ ಬಳಿಕ ಗರ್ಭಧಾರಣೆಯು ದಂಪತಿಗಳಿಗೆ ಮತ್ತು ಸಮಾಜದಲ್ಲಿ ಖುಷಿಯ ವಾತಾವರಣ ಉಂಟು ಮಾಡುತ್ತದೆ. ಆದಾಗ್ಯೂ, ವಿವಾಹವಾಗದೇ ಗರ್ಭದಾರಣೆಯಾದರೆ ಇದು ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಗುಜರಾತ್‌ನ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಇದಕ್ಕೂ ಮೊದಲು ಸಂತ್ರಸ್ತೆ ಮಹಿಳೆಯು ಗರ್ಭಪಾತಕ್ಕೆ ಅನುಮತಿಸುವಂತೆ ಗುಜರಾತ್ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಆದರೆ ಆಕೆಯ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಗುಜರಾತ್ ಹೈಕೋರ್ಟ್‌ನ ಈ ನಡೆಯನ್ನು ಸುಪ್ರೀಂ ಕೋರ್ಟ್ ಟೀಕಿಸಿದ್ದು, ‘ಇಂತಹ ಅರ್ಜಿಗಳ ಬಗ್ಗೆ ತುರ್ತು ಭಾವನೆ ಇರಬೇಕು ಮತ್ತು ಸಾಮಾನ್ಯ ವಿಷಯವಾಗಿ ಪರಿಗಣಿಸುವ ಲೋಪದೋಷದ ವರ್ತನೆ ಇದು’ ಎಂದು ಹೇಳಿದೆ.