ರಾಮನಗರ ಪಿಡಬ್ಲ್ಯೂಡಿ ಇಲಾಖೆಯಲ್ಲಿ ʼಜಿಎಸ್‌ಟಿ ಹಗರಣʼ: 12 ಕೋಟಿ ರೂ. ಗೋಲ್‌ಮಾಲ್ ಶಂಕೆ, ಆರ್‌ಟಿಐನಲ್ಲಿ ಬಯಲು

Date:

​ರಾಮನಗರ ವಿಶೇಷ ವಿಭಾಗದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿರುವ ಗಂಭೀರ ಆರೋಪವೊಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ದಾಖಲೆಗಳಿಂದ ಬಯಲಾಗಿದೆ. ಜಿಎಸ್‌ಟಿ ಪಾವತಿ ಮತ್ತು ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಬೃಹತ್ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಇಲಾಖೆ ನೀಡಿರುವ ಸ್ಪಷ್ಟನೆಯು ಅಧಿಕೃತ ದಾಖಲೆಗಳಿಗೇ ತದ್ವಿರುದ್ಧವಾಗಿದೆ.

- Advertisement -

​ಈ ಬಗ್ಗೆ ಮಾಹಿತಿಗೆಂದು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ರಾಮನಗರ ಪಿಡಬ್ಲ್ಯೂಡಿ ವಿಶೇಷ ವಿಭಾಗದ ಕಾರ್ಯಪಾಲಕ ಎಂಜಿನಿಯರ್ 2026ರ ಏಪ್ರಿಲ್‌ 28ರಂದು ಹಿಂಬರಹ ನೀಡಿದ್ದಾರೆ. ಈ ಮಾಹಿತಿಯು ಇಲಾಖೆಯ ಹಣಕಾಸು ನಿರ್ವಹಣೆ ಮತ್ತು ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ರಾಮನಗರದ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗವು ಸಲ್ಲಿಸಿರುವ 2025-26ನೇ ಹಣಕಾಸು ವರ್ಷದ ಏಪ್ರಿಲ್ ತಿಂಗಳ ‘ಫಾರ್ಮ್ GSTR-7’ ರಿಟರ್ನ್ಸ್ ದಾಖಲೆಯಲ್ಲಿ ಈ ಬೃಹತ್ ವ್ಯತ್ಯಾಸ ಕಂಡುಬಂದಿದೆ. ತಿದ್ದುಪಡಿ(Amendments) ವಿಭಾಗದಲ್ಲಿ, ಗುತ್ತಿಗೆದಾರರಿಗೆ ಪಾವತಿಸಿದ ಪರಿಷ್ಕೃತ ಒಟ್ಟು ಮೊತ್ತವನ್ನು -12,05,35,400.00 ರೂ.(ಮೈನಸ್ 12 ಕೋಟಿ 5 ಲಕ್ಷದ 35 ಸಾವಿರದ 400 ರೂಪಾಯಿ) ಎಂದು ನಮೂದಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ಮೈನಸ್ ಎಂಟ್ರಿ ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜಿಎಸ್‌ಟಿ ಪೋರ್ಟಲ್‌ನಲ್ಲಿ ಕಾಣುತ್ತಿರುವ ಈ ವ್ಯತ್ಯಾಸದ ಬಗ್ಗೆ ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಇಲಾಖೆ ಲಿಖಿತ ಉತ್ತರ ನೀಡಿದೆ. “ನವೆಂಬರ್ 2023ರಲ್ಲಿ ಜಿಎಸ್‌ಟಿಆರ್-7 ರಿಟರ್ನ್ ಫೈಲ್ ಮಾಡುವ ಸಮಯದಲ್ಲಿ ಒಟ್ಟು ಮೊತ್ತದ ಬದಲು ವ್ಯವಕಲನ ಕಳೆದ ನಂತರದ ಮೊತ್ತವನ್ನು ಅಳವಡಿಸಲಾಗಿದೆ” ಎಂದು ಇಲಾಖೆ ಸ್ಪಷ್ಟಪಡಿಸಿದೆ. ​ಆದರೆ, ನವೆಂಬರ್ 2023ರ ಜಿಎಸ್‌ಟಿಆರ್-7 ದಾಖಲೆಗಳನ್ನು ಪರಿಶೀಲಿಸಿದಾಗ ಇಲಾಖೆಯ ಈ ವಾದ ಸಂಪೂರ್ಣ ಸುಳ್ಳು ಎಂಬುದು ಸಾಬೀತಾಗುತ್ತದೆ.

ನವೆಂಬರ್ 2023ರ ರಿಟರ್ನ್ಸ್‌ನಲ್ಲಿ ಗುತ್ತಿಗೆದಾರರಿಗೆ ಪಾವತಿಸಿದ ಒಟ್ಟು ಮೊತ್ತವೇ ಕೇವಲ 7,31,31,330(7.31 ಕೋಟಿ ರೂ.) ಎಂದು ನಮೂದಾಗಿದೆ. ಕೇವಲ 7.3 ಕೋಟಿ ರೂಪಾಯಿಗಳ ವಹಿವಾಟಿನಲ್ಲಿ 12 ಕೋಟಿ ರೂಪಾಯಿಗಳ ವ್ಯತ್ಯಾಸ ಬರಲು ಹೇಗೆ ಸಾಧ್ಯ? ಒಂದು ವೇಳೆ ಇಲಾಖೆ ಹೇಳುವಂತೆ ‘ಒಟ್ಟು ಮೊತ್ತದ ಬದಲು ಕಡಿತಗೊಳಿಸಿದ ಮೊತ್ತ’ ನಮೂದಾಗಿದ್ದರೆ, ಆ ತಪ್ಪನ್ನು ಸರಿಪಡಿಸಲು ಮುಂದಿನ ರಿಟರ್ನ್ಸ್‌ನಲ್ಲಿ ಮೊತ್ತವನ್ನು ಹೆಚ್ಚಿಸಬೇಕಿತ್ತು. ಆದರೆ, ಏಪ್ರಿಲ್ 2025-26ರ ದಾಖಲೆಯಲ್ಲಿ ಬರೋಬ್ಬರಿ -12 ಕೋಟಿ ರೂ. ಕಡಿತಗೊಳಿಸಲಾಗಿದೆ. ಅಂದರೆ, ಇಲಾಖೆಯು ಈ ಹಿಂದೆ 12 ಕೋಟಿ ರೂ.ಗಳನ್ನು ವಾಸ್ತವಕ್ಕಿಂತ ಹೆಚ್ಚುವರಿಯಾಗಿ ತೋರಿಸಿತ್ತು ಎಂಬುದನ್ನು ಈ ದಾಖಲೆ ಸ್ಪಷ್ಟಪಡಿಸುತ್ತದೆ.

ಗುತ್ತಿಗೆದಾರರಿಗೆ ಶೇ. 18ರಷ್ಟು ಜಿಎಸ್‌ಟಿ ಸೇರಿಸಿ ಕೋಟ್ಯಂತರ ರೂಪಾಯಿಗಳ ಬಿಲ್ ಪಾವತಿಸುವ ಪಿಡಬ್ಲ್ಯೂಡಿ ಅಧಿಕಾರಿಗಳು, “ಯಾವುದೇ ಸಾಮಾಗ್ರಿ ಖರೀದಿ ಪಟ್ಟಿ(ಇನ್‌ವಾಯ್ಸ್‌)ಯನ್ನು ಈ ವಿಭಾಗ ಕಚೇರಿಯು ಪಡೆಯುವುದಿಲ್ಲ” ಎಂದು ಖುದ್ದು ಲಿಖಿತವಾಗಿ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರು ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ತೆರಿಗೆ ಮೊತ್ತವನ್ನು ಕಣ್ಮುಚ್ಚಿ ಬಿಡುಗಡೆ ಮಾಡುತ್ತಿರುವುದು, ತೆರಿಗೆ ವಂಚಕರಿಗೆ ಇಲಾಖೆಯೇ ಹಾಸಿರುವ ಕೆಂಪುಗಂಬಳಿಯಂತಿದೆ. ಇಷ್ಟು ದೊಡ್ಡ ಮೊತ್ತದ ಲೆಕ್ಕಾಚಾರದ ಪ್ರಮಾದ ನಡೆದಿದ್ದರೂ, ಸಿಎಜಿ ಲೆಕ್ಕಪರಿಶೋಧನೆ ವರದಿಯಲ್ಲಿ ಈ ಅಸಂಗತತೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ(ಯಾವುದೂ ಇರುವುದಿಲ್ಲ) ಎಂದು ಇಲಾಖೆ ತಿಳಿಸಿದೆ. ಇದು ವ್ಯವಸ್ಥಿತ ಲೂಟಿಯ ಅನುಮಾನವನ್ನು ದಟ್ಟವಾಗಿಸಿದೆ.

“ಈ ಭಾರೀ ಅವ್ಯವಹಾರದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಣ ಪಡೆದ ಗುತ್ತಿಗೆದಾರರ ಹೆಸರು, ಅವರ ಜಿಎಸ್‌ಟಿ ನಂಬರ್ ಹಾಗೂ ಬಿಡುಗಡೆಯಾದ ಹಣದ ಪಟ್ಟಿಯನ್ನು ಆರ್‌ಟಿಐ ಅಡಿಯಲ್ಲಿ ಕೇಳಲಾಗಿತ್ತು. ಆದರೆ, “ಗುತ್ತಿಗೆದಾರರ ಜಿಎಸ್‌ಟಿ ನಂಬರ್ ವೈಯುಕ್ತಿಕ ಮಾಹಿತಿಯಾಗಿದ್ದು, ಅದನ್ನು ನೀಡಲು ಬರುವುದಿಲ್ಲ” ಎಂದು ಅಧಿಕಾರಿಗಳು ಆರ್‌ಟಿಐ ಕಾಯಿದೆಯನ್ನೇ ಗಾಳಿಗೆ ತೂರಿ ಮೂರ್ಖತನದ ಹಿಂಬರಹ ನೀಡಿದ್ದಾರೆ. ಸರ್ಕಾರದ ಬೊಕ್ಕಸದಿಂದ ಬಿಡುಗಡೆಯಾದ ತೆರಿಗೆ ಹಣವು ಖಾಸಗಿ ಮಾಹಿತಿಯಾಗಲು ಹೇಗೆ ಸಾಧ್ಯ? ಇದು ಕಳ್ಳರನ್ನು ಕಾಪಾಡುವ ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಸ್ಪಷ್ಟ ಯತ್ನ” ಎಂದು ಮಾಹಿತಿ ಹಕ್ಕು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿದ್ದೀರಾ? ಕಲ್ಯಾಣ ಕರ್ನಾಟಕದಲ್ಲಿ ಹೊಸ 6 ಜಿಲ್ಲೆ, 12 ತಾಲೂಕು ರಚನೆಗೆ ಒತ್ತಾಯ

​ಸಾರ್ವಜನಿಕರ ತೆರಿಗೆ ಹಣ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ಜಿಎಸ್‌ಟಿ ನಿಯಮಗಳನ್ನು ಗಾಳಿಗೆ ತೂರಿ, ಪಾರದರ್ಶಕತೆಯನ್ನು ಮರೆಮಾಚುತ್ತಿರುವ ರಾಮನಗರ ವಿಶೇಷ ವಿಭಾಗದ ಕಚೇರಿಯ ಈ ವಹಿವಾಟುಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕಿದೆ. ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಲೋಕಾಯುಕ್ತರು ಕೂಡಲೇ ಎಚ್ಚೆತ್ತುಕೊಂಡು, ಭ್ರಷ್ಟರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Untitled 24
ನಗರಕೆರೆ ಜಗದೀಶ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...