ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ: ಒಕ್ಕೂಟ, ನಾಡ ಆಳಿಕೆಗಳ ಇಬ್ಬಗೆಯ ನೀತಿಗೆ ಹಾದಿ ತಪ್ಪಿದ ಗ್ರಾಮ ಸ್ವರಾಜ್ಯ

Date:

​ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂಬುದು ರಾಜಕಾರಣಿಗಳು ಮಂದಿಗೆ ಕೊಡುವ ತಿರುಪೆಯಲ್ಲ, ಅದು ಸಂವಿಧಾನವು ಪ್ರತಿಯೊಬ್ಬ ಹಳ್ಳಿಗನಿಗೂ ನೀಡಿರುವ ಹಕ್ಕು. ಈ ಹಕ್ಕನ್ನು ಮರಳಿ ಪಡೆಯಲು, ಆಯ್ಕೆಗಳನ್ನು ಕೂಡಲೇ ನಡೆಸುವಂತೆ ಆಳಿಕೆಯ ವಿರುದ್ಧ ದನಿ ಎತ್ತಲೇಬೇಕಾದ ಅನಿವಾರ್ಯತೆ ಇಂದಿನದ್ದಾಗಿದೆ.

ಕರ್ನಾಟಕದಲ್ಲಿ ಕಳೆದ 11 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೆಂಬ ಪ್ರಜಾಪ್ರಭುತ್ವದ ಹಬ್ಬ, ಗ್ರಾಮ ಸ್ವರಾಜ್ಯದ ಕನಸು ಸಂಪೂರ್ಣವಾಗಿ ಹಳಿತಪ್ಪಿದೆ. ತಳಮಟ್ಟದ ಜನರಿಗೆ ಅಧಿಕಾರ ನೀಡಬೇಕಾದ ಏರ್ಪಾಟಿನ ಕತ್ತು ಹಿಸುಕಲಾಗುತ್ತಿದೆ. ಜಿಬಿಎ ಆಯ್ಕೆ ನಡೆದು 11 ವರುಷಗಳು ಉರುಳಿದವು, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆಯ್ಕೆಗಳು ನಡೆದು ಬರೋಬ್ಬರಿ ಆರು ಏಡು(ವರ್ಷ)ಗಳೇ ಕಳೆದಿವೆ. ಇತ್ತೀಚೆಗಷ್ಟೇ ಹೊತ್ತು ಪೂರೈಸಿದ ಗ್ರಾಮ ಪಂಚಾಯಿತಿಗಳಿಗೂ ಆಯ್ಕೆ ನಡೆಸಬೇಕಾಗಿ ಆರು ತಿಂಗಳು ಉರುಳಿವೆ. ಆದರೆ, ʼಈ ವರ್ಷ ಗ್ರಾಮ ಪಂಚಾಯಿತಿ ಆಯ್ಕೆ ನಡೆಸಲು ಸಾಧ್ಯವೇ ಇಲ್ಲʼವೆಂದು ನಾಡ ಆಳಿಕೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಮೂಲಕ ತಳಮಟ್ಟದ ಆಡಳಿತಕ್ಕೆ ಅಧಿಕೃತವಾಗಿ ಬೀಗ ಜಡಿದಿದೆ.

- Advertisement -

​ಇದರ ಹಿಂದಿನ ಅಸಲಿ ಕಾರಣ ಆಡಳಿತಾತ್ಮಕ ತೊಡಕುಗಳಲ್ಲ, ಬದಲಾಗಿ ರಾಜಕೀಯ ಪಕ್ಷಗಳ ‘ಅಧಿಕಾರ ದಾಹ’ ಮತ್ತು ಬೂಟಾಟಿಕೆ. ​ʼನಮ್ಮ ಹಂತಕ್ಕಿಂತ ಕೆಳಗೆ ಅಧಿಕಾರ ಬೇಡʼ ಎಂಬ ಮನಸ್ಥಿತಿಯೇ ಇದಕ್ಕೆಲ್ಲ ಕಾರಣ. ​ಇಂದು ನಾಡ ಆಳಿಕೆಯೂ ಪ್ರತಿಯೊಂದಕ್ಕೂ ಒಕ್ಕೂಟ ಆಳಿಕೆಯತ್ತ ಬೊಟ್ಟು ಮಾಡುತ್ತ, ಒಕ್ಕೂಟದ ನೀತಿಗಳನ್ನು ಟೀಕಿಸುತ್ತಿದೆ. ಆದರೆ, ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಒಕ್ಕೂಟ ಮತ್ತು ನಾಡ ಆಳಿಕೆಗಳೆರಡರ ಮನಸ್ಥಿತಿಯೂ ಒಂದೇ ಆಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಒಕ್ಕೂಟದಲ್ಲಿರುವ ಆಡಳಿತರೂಢರಿಗೆ ʼತಮ್ಮ ಕೈಯಿಂದ ಅಧಿಕಾರ ನಾಡುಗಳಿಗೆ ಹೋಗಬಾರದುʼ ಎಂಬ ಹಪಾಹಪಿ ಇದ್ದರೆ, ನಾಡಿನಲ್ಲಿರುವ ಆಳಿಕೆಗೆ ʼಶಾಸಕರ ಹಂತಕ್ಕಿಂತ ಕೆಳಕ್ಕೆ, ಅಂದರೆ ಪಂಚಾಯಿತಿ ಮಟ್ಟಕ್ಕೆ ಅಧಿಕಾರ ವರ್ಗಾವಣೆ ಆಗಬಾರದುʼ ಎಂಬ ಸ್ವಾರ್ಥವಿದೆ. ಎರಡೂ ಆಳಿಕೆಗಳು ಅಧಿಕಾರ ವಿಕೇಂದ್ರೀಕರಣದ ಬದ್ಧ ವೈರಿಗಳಂತೆ ವರ್ತಿಸುತ್ತಿವೆ. ​

ಚುನಾವಣಾ ಆಯೋಗಗಳು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಬೇಕು ಎಂಬುದು ಸಂವಿಧಾನದ ಆಶಯ. ಆದರೆ, ವಾಸ್ತವದಲ್ಲಿ ನಡೆಯುತ್ತಿರುವುದೇ ಬೇರೆ. ​ಒಕ್ಕೂಟ ಆಳಿಕೆಯೂ ಒಕ್ಕೂಟ ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು, ತನಗೆ ಬೇಕಾದ ಹೊತ್ತಿನಲ್ಲಿ, ತನಗೆ ಅನುಕೂಲವಾಗುವ ರೀತಿಯಲ್ಲಿ ಆಯ್ಕೆಗಳನ್ನು ನಡೆಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪಗಳಿವೆ. ​ಅಚ್ಚರಿ ಎಂದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಒಕ್ಕೂಟವನ್ನು ಕಟುವಾಗಿ ಟೀಕಿಸುವ ನಾಡ ಆಳಿಕೆ, ತನ್ನ ವ್ಯಾಪ್ತಿಯಲ್ಲಿರುವ ‘ರಾಜ್ಯ ಚುನಾವಣಾ ಆಯೋಗ’ವನ್ನು ನಡೆಸಿಕೊಳ್ಳುತ್ತಿರುವ ರೀತಿಯೂ ಭಿನ್ನವಾಗಿಲ್ಲ.

ನಾಡ ಚುನಾವಣಾ ಆಯೋಗಕ್ಕೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡದೆ, ಮೀಸಲಾತಿ ಮತ್ತು ವಾರ್ಡ್ ವಿಂಗಡಣೆಯ ನೆಪವೊಡ್ಡಿ ಅದನ್ನೂ ಒಂದು ಕೈಗೊಂಬೆಯಂತೆಯೇ ಬಳಸಿಕೊಳ್ಳುತ್ತಿದೆ ನಾಡ ಆಳಿಕೆ. ​ಪರಸ್ಪರ ವಿರೋಧಿಗಳಂತೆ ಬಿಂಬಿಸಿಕೊಳ್ಳುವ ಈ ರಾಜಕೀಯ ಪಕ್ಷಗಳು, ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಮಾತ್ರ ಅಘೋಷಿತ ಒಪ್ಪಂದ ಮಾಡಿಕೊಂಡಂತೆ ವರ್ತಿಸುತ್ತಿವೆ.

​ರಾಜಕೀಯ ಪಕ್ಷಗಳ ಇಬ್ಬಗೆಯ ನೀತಿಗೆ ಅತ್ಯಂತ ದೊಡ್ಡ ಮಾದರಿ ಎಂದರೆ ಮಹಿಳಾ ಮೀಸಲಾತಿಯ ವಿಚಾರ. ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆಯ ಹೊತ್ತಿನಲ್ಲಿ ಒಕ್ಕೂಟ ಆಳಿಕೆಯೂ ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿತು ಅಷ್ಟೇ. ಒಕ್ಕೂಟದ ಈ ನೀತಿಗಳನ್ನು ಮತ್ತು ವಿಳಂಬ ದೋರಣೆಯನ್ನು ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಕಟುವಾಗಿ ಟೀಕಿಸಿತು.

​ಆದರೆ, ನಾಡಿನಲ್ಲಿ ಅಧಿಕಾರದಲ್ಲಿರುವ ಇದೇ ಕಾಂಗ್ರೆಸ್ ಆಳಿಕೆ, ಮಹಿಳೆಯರಿಗೆ ನೇರವಾಗಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮಾತ್ರ ನಡೆಸುತ್ತಿಲ್ಲ. ಜಿಬಿಎ, ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಸಾವಿರಾರು ಮಹಿಳೆಯರು ಅಧಿಕಾರದ ಚುಕ್ಕಾಣಿ ಹಿಡಿದು ಮುಂದಾಳುಗಳಾಗಿ ಬೆಳೆಯುವ ಅವಕಾಶವನ್ನು ಈ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಒಕ್ಕೂಟವನ್ನು ಟೀಕಿಸುವ ಭರದಲ್ಲಿ, ನಾಡ ಆಳಿಕೆಯೂ ತನ್ನದೇ ವ್ಯಾಪ್ತಿಯಲ್ಲಿರುವ ಮಹಿಳೆಯರ ರಾಜಕೀಯ ಹಕ್ಕನ್ನು ಮತ್ತು ಸಂವಿಧಾನಬದ್ಧವಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ 369 ವಾರ್ಡ್‌ಗಳಿಗೆ ಸಿಕ್ಕಿರುವ ಶೇ.50ರಷ್ಟು ಮೀಸಲಾತಿಯನ್ನು ಪ್ರಜಾಸತ್ತಾತ್ಮಕವಾಗಿಯೇ ನಿರಾಕರಿಸುತ್ತಿರುವುದು ಬಹುದೊಡ್ಡ ವಿಪರ್ಯಾಸ.

ಇದನ್ನೂ ಓದಿದ್ದೀರಾ? ಗ್ರಾಮ ಸ್ವರಾಜ್ಯದ ಸಾಕಾರ: ಜನರ ಕೈಗೆ ಅಧಿಕಾರ, ಸಮಸ್ಯೆಗೆ ಪರಿಹಾರ

​ವಿಧಾನಸೌಧದಲ್ಲಿ ಕುಳಿತು ಪರಸ್ಪರ ಕೆಸರೆರಚಾಟ ಮಾಡುವ ರಾಜಕೀಯ ಪಕ್ಷಗಳಿಗೆ, ಹಳ್ಳಿಯ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣ ಬೇಕಾಗಿಲ್ಲ. ಚುನಾವಣಾ ಆಯೋಗಗಳನ್ನು ತಮ್ಮಿಚ್ಛೆಯಂತೆ ಕುಣಿಸುತ್ತ, ಮಹಿಳಾ ಮೀಸಲಾತಿಯಂತಹ ವಿಚಾರಗಳಲ್ಲಿ ಕೇವಲ ಭಾಷಣ ಬಿಗಿಯುತ್ತ ಕಾಲಹರಣ ಮಾಡುತ್ತಿವೆ. ಎಚ್ಚೆತ್ತ ನಾಗರಿಕರು ಈ ಬೂಟಾಟಿಕೆಯನ್ನು ಪ್ರಶ್ನಿಸಬೇಕಿದೆ. ​ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂಬುದು ರಾಜಕಾರಣಿಗಳು ಮಂದಿಗೆ ಕೊಡುವ ತಿರುಪೆಯಲ್ಲ, ಅದು ಸಂವಿಧಾನವು ಪ್ರತಿಯೊಬ್ಬ ಹಳ್ಳಿಗನಿಗೂ ನೀಡಿರುವ ಹಕ್ಕು. ಈ ಹಕ್ಕನ್ನು ಮರಳಿ ಪಡೆಯಲು, ಆಯ್ಕೆಗಳನ್ನು ಕೂಡಲೇ ನಡೆಸುವಂತೆ ಆಳಿಕೆಯ ವಿರುದ್ಧ ದನಿ ಎತ್ತಲೇಬೇಕಾದ ಅನಿವಾರ್ಯತೆ ಇಂದಿನದ್ದಾಗಿದೆ.

Untitled 24
ನಗರಕೆರೆ ಜಗದೀಶ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...