ರಾಯಚೂರು | ದೇವದಾರಿ ಗಣಿಗಾರಿಕೆ ಅನುಮತಿ ರದ್ದುಪಡಿಸಲು ಎಸ್‌.ಆರ್‌ ಹಿರೇಮಠ್ ಆಗ್ರಹ

Date:

ರಾಜ್ಯದಲ್ಲಿ ವಿವಾದಾತ್ಮಕವಾಗಿರುವ ಕೆಐಒಸಿಎಲ್ ಮತ್ತು ವಿಐಆರ್‌ಎಲ್ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ತಡೆಯುವಂತೆ ಓವರ್‌ಸೈಟ್ ಆಥಾರಿಟಿಯ ನ್ಯಾಯಮೂರ್ತಿ ಬಿ.ಸುದರ್ಶನರೆಡ್ಡಿ ಹಾಗೂ ರಾಜ್ಯದ ಕಾನೂನು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹೀರೆಮಠ್ ಹೇಳಿದರು.

ರಾಯಚೂರುನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಕೇಂದ್ರ ಉಕ್ಕು ಸಚಿವಾಲಯದ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಪ್ರಮಾಣವಚನ ತೆಗೆದುಕೊಂಡ ದಿನದಂದೇ ಸಂಡೂರು ತಾಲೂಕಿನ ದೇವದಾರಿ ಗಣಿಗಾರಿಕೆಗೆ ಸಹಿ ಹಾಕುವ ಅಗತ್ಯ ಏನಿತ್ತು” ಎಂದು ಪ್ರಶ್ನಿಸಿದರು.

“ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪರಾಮರ್ಶಿಸದೇ ಗಣಿಗಾರಿಕೆಗೆ ಅನುಮತಿ ನೀಡುವ ಅತುರತೆ ಏನಿತ್ತು. ಗಣಿಗಾರಿಕೆ ಅನುಮತಿ ಕೋರಿ ರಾಜ್ಯ ಸರ್ಕಾರ ಪ್ರಸ್ತಾವನೆಯಿದ್ದರೂ ಪರಿಶೀಲಸಿ ನಿರ್ಧರಿಸಬೇಕಿರುವುದು ಸಚಿವಾಲಯದ ಕರ್ತವ್ಯ. ಅದಿರು ಗಣಿಗಾರಿಕೆಯಿಂದ ಆಗುವ ಅಪಾಯಗಳನ್ನು ಈಗಾಗಲೇ ಸುಪ್ರಿಂಕೋರ್ಟ್ ಸೇರಿ ಹಲವಾರು ಪರಿಸರ ರಕ್ಷಣಾ ಸಂಸ್ಥೆಗಳು, ಸಮಿತಿಗಳು ವರದಿ ನೀಡಿವೆ. ಅಪಾಯಗಳನ್ನು ಯೋಚಿಸದೇ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ” ಎಂದು ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“20 ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ಕೆಐಒಸಿಎಲ್‌ ನಡೆಸುತ್ತಿದ್ದ ಗಣಿಗಾರಿಕೆ ಗುತ್ತಿಗೆಯನ್ನು ರದ್ದುಪಡಿಸಿದೆ. ಗಣಿಗಾರಿಕೆಯಿಂದ ಪರಿಸರ ಹಾಗೂ ಅರಣ್ಯ ಪ್ರದೇಶ ಹಾನಿಯಾಗುತ್ತಿದ್ದ ಕಾರಣಕ್ಕೆ ಗುತ್ತಿಗೆ ರದ್ದುಪಡಿಸಿದ್ದಾರೆ. ಮತ್ತೆ ಅದೇ ಕಂಪನಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಕೆಐಒಸಿಎಲ್‌ ಗಣಿಗಾರಿಕೆಯಿಂದ 99,330  ಮರಗಳು, ವಿಐಎಸ್‌ಎಲ್ ಗಣಿಗಾರಿಕೆಯಿಂದ 29,440 ಮರುಗಳು ನಾಶವಾಗುತ್ತವೆ. ಅಪಾರ ಪರಿಸರ ಸಂಪತ್ತು ಗಣಿಗಾರಿಕೆ ಪರ್ಯಾಯ ವ್ಯವಸ್ಥೆ ಹೇಗೆ ಸರಿದೂಗಿಸಲು ಸಾಧ್ಯ” ಎಂದರು.

“ಸುಪ್ರಿಂಕೋರ್ಟ್ ಸೂಚನೆ ಮೇರೆಗೆ ಬಳ್ಳಾರಿ, ತುಮಕೂರು, ಚಿತ್ರದುರ್ಗ ಸೇರಿ ನಾಲ್ಕು ಜಿಲ್ಲೆಗಳ ಪರಿಸರ ಪುನಶ್ಚೇತನ ಕಾರ್ಯಕ್ರಮ ಸಮರ್ಪಕ ಜಾರಿಗೊಳಿಸಲಾಗಿದೆ. ಸಮಿತಿ ವರದಿಯಂತೆ ನಾಲ್ಕು ಜಿಲ್ಲೆಗಳ‌ 283 ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ 400 ಗ್ರಾಮಗಳನ್ನು ಗುರುತಿಸಿರುವುದು ಅವೈಜ್ಞಾನಿಕವಾಗಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಅಭಿವೃದ್ದಿ ಸೂಚ್ಯಂಕ ಆಧಾರದ ಮೇಲೆ ರೂಪಿತವಾಗಿರುವ ಕ್ರಿಯಾ ಯೋಜನೆಯಂತೆ ಜಾರಿಗೊಳಿಸಬೇಕು. ಕಟ್ಟಡ, ಕಾಮಗಾರಿ ಕೆಲಸಗಳನ್ನು ಕೈಗೆತ್ತಿಕೊಳ್ಳಬಾರದು” ಎಂದು ಒತ್ತಾಯಿಸಿದರು.

“ಪರಿಸರ ಪುನಶ್ಚೇತನಕ್ಕೆ ನಿಗದಿಪಡಿಸಲಾದ 25 ಸಾವಿರ ಕೋಟಿ ರೂ. ಬಳಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬದ್ದತೆ ತೋರಬೇಕು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೆ ಸಕರಾತ್ಮಕ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಎರಡು ಗಣಿಗಾರಿಕೆ ಅನುಮತಿ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ನೀಟ್ ರದ್ದು ಮಾಡಿದರೆ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ: ಶಿಕ್ಷಣ ಸಚಿವ

ಪತ್ರಿಕಾಗೋಷ್ಠಿಯಲ್ಲಿ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಜಾನವೆಸ್ಲಿ, ಖಾಜಾ ಅಸ್ಲಂ ಅಹ್ಮದ್, ಭೀಮರಾಯ ಜರದಬಂಡಿ ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಮೀನು ರಫ್ತು ಕಂಪನಿಯಲ್ಲಿ ಭಾರೀ ಬೆಂಕಿ ಅವಘಡ; 10 ಕೋಟಿ ರೂ. ಮೌಲ್ಯದ ಸೊತ್ತು ನಷ್ಟ

rದಲ್ಲಿ ಕಾರ್ಯಾಚರಿಸುತ್ತಿದ್ದ ಮೀನು ರಫ್ತು ಘಟಕದ ಕಂಪನಿಯಲ್ಲಿ ಭಾನುವಾರ ಮಧ್ಯಾಹ್ನ ಭಾರೀ...

ಚಿಂತಾಮಣಿ | ಎರಡು ವರ್ಷಗಳ ಪ್ರೀತಿಗೆ ಪೋಷಕರ ವಿರೋಧ; ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು...

ಮುಂದಿನ ಎರಡು ದಿನ ರಾಜ್ಯದ ಹಲವೆಡೆ ಭಾರೀ ಮಳೆ; ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯದ ಹಲವೆಡೆ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗುತ್ತಿದ್ದು ಮುಂದಿನ ಎರಡು ದಿನಗಳ...