ಮಾನವೀಯ ಮೌಲ್ಯ ಬೆಳೆಸುವ ಸಂಜೀವಿನಿ ವನವೇ ರಂಗಭೂಮಿ: ದೇವನೂರು ಬಸವರಾಜು

Date:

ಮೈಸೂರು ನಗರದ ಕಲಾಮಂದಿರದ, ಕಿರುರಂಗಮಂದಿರದಲ್ಲಿ ಐದು ದಿನಗಳ ಕಾಲ ನಡೆದ ‘ನಿರಂತರ ರಂಗ ಉತ್ಸವ’ ಸಮಾರೋಪದಲ್ಲಿ ಮಾತನಾಡಿದ ಚಿಂತಕ ಹಾಗೂ ಲೇಖಕ ದೇವನೂರು ಬಸವರಾಜು, “ರಂಗಭೂಮಿಯ ಪ್ರಸ್ತುತತೆಯನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಸದಭಿರುಚಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ಸಂಜೀವಿನಿ ವನವೇ ರಂಗಭೂಮಿ” ಎಂದು ಅಭಿಪ್ರಾಯಪಟ್ಟರು.

- Advertisement -

“ರಂಗಭೂಮಿಯ ಮೂಲಕ ಬದುಕನ್ನು ಹಸನುಗೊಳಿಸುವ, ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಹುಟ್ಟಿಸುವ ಕೆಲಸ ನಡೆಯಬೇಕು. ಪ್ರಸಕ್ತ ಕಾಲಘಟ್ಟ ವಿಷಮಯವಾಗಿದ್ದು, ನಾವು ಬದುಕುತ್ತಿರುವ ಪರಿಸ್ಥಿತಿ ಹಾಗು ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಆತಂಕ ಹುಟ್ಟುತ್ತದೆ. ಇಂತಹ ಸಂದರ್ಭದಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಮರುನಿರ್ಮಿಸಬೇಕಾದ ಅಗತ್ಯವಿದೆ. ಅದಕ್ಕೆ, ರಂಗಭೂಮಿ ಅತ್ಯುತ್ತಮ ಮಾರ್ಗವಾಗಿದ್ದು, ಮಾನವೀಯತೆ ಎಲ್ಲೆಡೆ ನೆಲಸಬೇಕಿದೆ. ಅದು ಇಲ್ಲದಿದ್ದರೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ನಾಳೆಯ ನೆಮ್ಮದಿಯೂ ಕಾಣದಂತಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ಜಾತಿ, ಧರ್ಮ, ಅಸಹನೆ ಹೆಚ್ಚಾಗುತ್ತಿದ್ದು, ಹೊಟ್ಟೆ ಕಿಚ್ಚಿನಲ್ಲೇ ಕಾಲ ಕಳೆದು ಹೋಗುತ್ತಿರುವ ಸ್ಥಿತಿಯ ಬಗ್ಗೆ ಆತಂಕವಿದೆ. ಬದುಕು ಕಲೆಗೂ ಹೌದು, ವಿಜ್ಞಾನಕ್ಕೂ ಹೌದು; ಹಾಗೆಯೇ, ರಂಗಭೂಮಿಯೂ ಕೂಡ. ‘ರಂಗಭೂಮಿ’ ಎಂಬ ರೂಪದಲ್ಲಿ ಅಲ್ಲದಿದ್ದರು, ಮನುಷ್ಯನ ನಾಗರಿಕತೆಯ ಆರಂಭದ ಕೇಂದ್ರ ಬಿಂದು ಎನ್ನಬಹುದು. ಚಿತ್ರಕಲೆ, ಕುಣಿತ, ಹಾಡು, ಮಾನವ ಪೂರ್ವದ ಕಲಾರೂಪಗಳು. ನಂತರ ಅವು ಕಲಾ ಪ್ರಕಾರಗಳಾಗಿ ಉಳಿದುಕೊಂಡವು. ಇವೆಲ್ಲದರ ಕ್ರೋಢಿಕೃತ ರೂಪವೇ ರಂಗಭೂಮಿಯಾಗಿದ್ದು, ಅದು ಕಲೆಗಿಂತಲೂ ಮೀರಿದ ಸಾಮಾಜಿಕ ಕಾರ್ಯವನ್ನು ವಿಸ್ತರಿಸಿಕೊಂಡಿದೆ” ಎಂದು ವಿವರಿಸಿದರು.

ಹಿರಿಯ ರಂಗ ನಿರ್ದೇಶಕ ಚಿದಂಬರರಾವ್ ಜಂಬೆರ್ ಮಾತನಾಡಿ, ನಿರಂತರ ತಂಡವನ್ನು ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ. ಇವರು ನಡೆಸುತ್ತಿರುವ ಸಹಜರಂಗ ತರಬೇತಿ ಶಿಬಿರಗಳು, ಕಾವ್ಯ ಓದು, ಸಾಹಿತ್ಯ ಹಾಗೂ ನಾಟಕಗಳ ಅಧ್ಯಯನದ ಮೂಲಕ ವಿದ್ಯಾರ್ಥಿಗಳನ್ನು ಸರಿಯಾದ ದಿಕ್ಕಿನತ್ತ ಕರೆದೊಯ್ಯುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ನಿರಂತರ ಫೌಂಡೇಷನ್ ಅಧ್ಯಕ್ಷ ಎಂ.ಎಂ. ಸುಗುಣ ಮಾತನಾಡಿ, “ಜಿಡಿಪಿ ಅಥವಾ ಷೇರು ಸೂಚ್ಯಂಕದ ಬೆಳವಣಿಗೆಯೇ ದೇಶದ ಪ್ರಗತಿ ಎಂಬ ಭ್ರಮಾ ಲೋಕವನ್ನು ಸೃಷ್ಟಿಸಲಾಗುತ್ತಿದೆ. ಆದರೆ, ಅದು ನಿಜವಲ್ಲ. ಸಾಂಸ್ಕೃತಿಕ ಅಭಿವ್ಯಕ್ತಿಯೇ ದೇಶದ ಸಮೃದ್ಧಿಯ ನಿಜವಾದ ಸಂಕೇತ. ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳುವ ಸಮಾಜ ನಿರ್ಮಾಣವಾಗಬೇಕು. ರಂಗಭೂಮಿ ಜೀವಂತ ಕಲೆ; ಅದು ಸಮಾಜದ ಆಗುಹೋಗುಗಳಿಗೆ ನೇರವಾಗಿ ಮುಖಾಮುಖಿಯಾಗುತ್ತದೆ. ವರ್ತಮಾನದಲ್ಲಿ ಭವಿಷ್ಯವನ್ನು ಚಿಂತಿಸುವುದು, ಇತಿಹಾಸದಲ್ಲಿನ ನಕಾರಾತ್ಮಕತೆಯನ್ನು ತಿದ್ದಿ ಕ್ರಿಯಾತ್ಮಕತೆಗೆ ರೂಪಿಸುವುದೇ ರಂಗಭೂಮಿಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.

ಈ ವಿಶೇಷ ವಿಡಿಯೋ ವೀಕ್ಷಿಸಿ:https://www.youtube.com/watch?v=rBBDK8Y88O0

ಸಮಾರೋಪ ಸಮಾರಂಭದಲ್ಲಿ ರೈತ ಸಂಘದ ಹೊಸಕೋಟೆ ಬಸವರಾಜು, ಪ್ರೊ. ಕಾಳಚನ್ನೆಗೌಡ, ಮೀನಾ ಮಸೂರು, ಪ್ರೊ. ಚ. ಸರ್ವಮಂಗಳ, ಶ್ರೀನಿವಾಸ್ ಪಾಲಳ್ಳಿ, ಪ್ರಸಾದ್ ಕುಂದೂರು, ಹರಿಪ್ರಸಾದ್, ಡಾ. ನರೆಂದ್ರಕುಮಾರ್, ದೇವಾನಂದ್ ವರಪ್ರಸಾದ್ ಸೇರಿದಂತೆ ಪ್ರೇಕ್ಷಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...