ಶಿವಮೊಗ್ಗ | ಆಗುಂಬೆ ಸುರಂಗ ಯೋಜನೆ ವಿರೋಧಿಸಿಬ್ಯಾನರ್: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

Date:

“ಆಗುಂಬೆ ನರಕವಾಗಿಸುವ ಸುರಂಗ ಯೋಜನೆಗೆ ನಮ್ಮ ಧಿಕ್ಕಾರ, ಸಮಸ್ತ ಆಗುಂಬೆ ಗ್ರಾಮಸ್ಥರು” ಎನ್ನುವ ಬ್ಯಾನರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಕಾಣಸಿಗುತ್ತವೆ. ಪಶ್ಚಿಮ ಘಟ್ಟದ ಆಗುಂಬೆಯಲ್ಲಿ ಸುರಂಗ ಮಾರ್ಗ ಮಾಡಬೇಕು ಎಂದು ಒತ್ತಾಯಿಸುತ್ತಿರುವ ಬಗ್ಗೆ ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಮೂಲಕ ಸುರಂಗದ ಕಾವು ಹೆಚ್ಚಾಗುತ್ತಿದೆ.

- Advertisement -

ಬ್ಯಾನರ್ ಪೋಟೋ ಹಾಕಿ ಪ್ರತಿಕ್ರಿಯಿಸಿರುವವರೊಬ್ಬರು “ಹೀಗೊಂದು ಬ್ಯಾನರ್ ಅನ್ನು ಆಗುಂಬೆ ಗ್ರಾಮಸ್ಥರು ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ.‌ ಆಗುಂಬೆಯನ್ನು ಉಳಿಸುವುದು ಒಂದು ಪ್ರದೇಶದ ವಿಚಾರವಲ್ಲ ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆ” ಎಂಬ ಆಗುಂಬೆ ಜನರ ಪ್ರಬುದ್ಧತೆಯನ್ನು ನಾವೆಲ್ಲರೂ ಮೆಚ್ಚಬೇಕು ಮತ್ತು ಅಭಿನಂದಿಸಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ.‌ ಇಂತಥ ವಿವೇಕ ನಮ್ಮ ಜನಪ್ರತಿನಿಧಿಗಳಿಗೆ ಬರಲಿ” ಎಂದು ಆಶಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ #SaveAgumbe, #StopAgumbeTunnelProject ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಕೂಡ ಆರಂಭಿಸಲಾಗಿದೆ.

ಇದನ್ನು ಪ್ರಶ್ನಿಸಿರುವ ಕೆಲವರು ಆಗುಂಬೆ ಸುತ್ತಮುತ್ತ ಬೋರ್ ವೆಲ್ ಮತ್ತು ತೋಟ ಮಾಡೋದಕ್ಕೆ ಗುಡ್ಡ ಅಗೆದರೆ ಗುಡ್ಡ ಕುಸಿಯುತ್ತೆ. ಸುರಂಗ ಬೇಡವೆಂದರೆ 24 ಗಂಟೆ ಬಸ್ಸಿನ ವ್ಯವಸ್ಥೆ ಮಾಡಿ. ಅದು ಆಗಲ್ಲ ಅಂದ ಮೇಲೆ ಗುಡ್ಡ ಕುಸಿತ ಅರಣ್ಯ ನಾಶ, ಪ್ರಾಣಿಗಳಿಗೆ ತೊಂದರೆ ಇಂಥ ಕಥೆಗಳನ್ನು ಹೇಳ್ಬೇಡಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜೀವ್ ಗಾಂಧಿ ವಸತಿ ಪ್ರೌಢಶಾಲೆ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

“ಉಡುಪಿಯಿಂದ ಸಂಜೆ 6.50 ರ ನಂತರ ಆಗುಂಬೆ ತೀರ್ಥಹಳ್ಳಿ ಬರುವುದಾದರೆ 130 ರೂಪಾಯಿ ಜಾಸ್ತಿ ಕೊಟ್ಟು, ನಾಲ್ಕ್ ಗಂಟೆ ಜಾಸ್ತಿ ಪ್ರಯಾಣ ಮಾಡಿ ಬರಬೇಕು. ಈ ಸಮಸ್ಯೆಯಿಂದ ಅಪರೂಪಕ್ಕೆ ಪ್ರಯಾಣ ಮಾಡೋ ನಮಗೆ ಸಮಸ್ಯೆಯಾಗುತ್ತೆ ಎಂದರೆ, ಆಗುಂಬೆ ಸುತ್ತ ಮುತ್ತ ವಾಸಿಸುವ ಜನಗಳ ಸಮಸ್ಯೆ ಸ್ವಲ್ಪ ಗಮನಿಸಬೇಕು, ಅದಕ್ಕೆ ಪರಿಹಾರ ದೊರಕಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಎಫ್‌ಸಿಐ ಗೋದಾಮಿನ ಹುಳು-ನುಸಿ ಕಾಟದಿಂದ ಬೇಸತ್ತ ಸ್ಥಳೀಯರು: ಸ್ಥಳಾಂತರಕ್ಕೆ ಆಗ್ರಹ

ಶಿವಮೊಗ್ಗದ ಆಲ್ಕೊಳ ಬಳಿ ಇರುವ ಎಫ್‌ಸಿಐ ಗೋದಾಮಿನಲ್ಲಿ ಸಂಗ್ರಹವಾಗಿರುವ ಅಕ್ಕಿಯಿಂದ ಹುಳು,...

ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಎತ್ತಂಗಡಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ...

ಶಿವಮೊಗ್ಗ | ಅಕ್ಟೋಬರ್ 11ರಂದು ರಾಜ್ಯ, ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ...

Form 7 ಅರ್ಜಿ ವಿವಾದ; ತನಿಖೆಗೆ SIT ರಚನೆಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ Form...