ಶ್ರೀನಿವಾಸಪುರ ಮಾವಿನ ಮಾರುಕಟ್ಟೆ ಮತ್ತೆ ಸಜ್ಜು; ಮೇ 15ರಿಂದ ಆರಂಭ

Date:

ದೇಶದ ಅತಿದೊಡ್ಡ ಮಾವು ಉತ್ಪಾದನಾ ಕ್ಷೇತ್ರವಾಗಿ ಪ್ರಸಿದ್ಧಿಪಡೆದಿರುವ ಶ್ರೀನಿವಾಸಪುರದಲ್ಲಿನ ಮಾವಿನ ಮಾರುಕಟ್ಟೆ ಈ ವರ್ಷದ ಮೇ 15ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈಗಾಗಲೇ ತಯಾರಿ ಕಾರ್ಯಗಳು ತೀವ್ರಗೊಂಡಿದ್ದು, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳ ಮಾಲೀಕರು, ರೈತರು ಮತ್ತು ವ್ಯಾಪಾರಸ್ಥರು ಸಜ್ಜಾಗುತ್ತಿದ್ದಾರೆ.

- Advertisement -

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು 57 ಸಾವಿರ ಎಕರೆ ಭಾಗದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ಶ್ರೀನಿವಾಸಪುರ ‘ಮಾವಿನ ನಾಡು’, ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಸಂಪೂರ್ಣವಾಗಿ ಸ್ಥಾಪಿಸಿಕೊಂಡಿದೆ. ಇಲ್ಲಿನ ಮಾವಿಗೆ ರಾಜ್ಯದಷ್ಟೇ ಅಲ್ಲದೆ ದೇಶಾದ್ಯಂತ ಭಾರೀ ಬೇಡಿಕೆ ಉಂಟಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ತೋತಾಪುರಿ, ನೀಲಂ, ರಾಜಗಿರ, ಮಲಿಕಾ‌, ಬಾದಾಮಿ, ಬೇನಿಶ, ಮಲ್ಗೋಬಾ, ಖುದ್ದೂಸ್, ಶಕರ್ ಬೀಜ್, ದೇಸರಿ, ಇಮಾಮ್ ಪಸಂದ್, ಪಾಶಾ ಪಸಂದ್, ಶೇರಿ, ದಿಲ್ ಪಸಂದ್, ಖುದಾದತ್, ಕೆಸರ್, ಚಿತ್ತೋರ, ನಾಟಿ ಸೇರಿದಂತೆ ಮುಂತಾದ ಪ್ರಸಿದ್ಧ ಮಾವು ತಳಿಗಳು ಇಲ್ಲಿ ಸಸ್ಯವಾಗುತ್ತವೆ. ಇವುಗಳಲ್ಲಿ ಕೆಲವು ತಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿಯಾಗಿವೆ.

ಮಾರುಕಟ್ಟೆ 1

ಇಲ್ಲಿನ ಮಾವುಗಳು ಜಮ್ಮು-ಕಾಶ್ಮೀರ್, ಪಂಜಾಬ್, ಹರಿಯಾಣ, ರಾಜಸ್ಥಾನ್, ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ವೆಸ್ಟ್ ಬಂಗಾಳ, ಗೋವಾ, ಕೇರಳ, ಛತ್ತೀಸ್‌ಗಢ, ಬಿಹಾರ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ಇತರ ರಾಜ್ಯಗಳಿಗೆ ನಿತ್ಯ ರವಾನೆಯಾಗುತ್ತವೆ. ಬಾದಾಮಿ, ಮಲಿಕಾ‌, ಬೇನಿಶ ತಳಿಗಳ ಮಾವುಗಳು ದುಬೈ, ಸೌದಿ ಅರೇಬಿಯಾ, ಸಿಂಗಾಪುರ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿವೆ. ಅಲ್ಲದೆ ಇಲ್ಲಿನ ಮಾವಿನಿಂದ ತಯಾರಾಗುವ ಜ್ಯೂಸ್ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಿಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಮಾರುಕಟ್ಟೆ

ಈ ಬಾರಿ ಮೇ 15ರಿಂದ ಮಾರುಕಟ್ಟೆ ಆರಂಭವಾಗಲಿದ್ದು, ರೈತರು ಹಾಗೂ ವ್ಯಾಪಾರಸ್ಥರಲ್ಲಿ ನೂತನ ಆಸೆಗಳು ಮೂಡಿವೆ. ಮಾರುಕಟ್ಟೆಗಳ ತಯಾರಿ ಕೆಲಸಗಳು ಪೂರ್ಣಗೊಂಡಿದ್ದು, ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿಸಲಾಗುತ್ತಿದೆ. ಪ್ರತ್ಯಕ್ಷ ಖರೀದಿದಾರರು, ಜೈವಿಕ ಉತ್ಪನ್ನ ಹಮ್ಮಿಕೊಳ್ಳುವ ವ್ಯಾಪಾರಸ್ಥರು, ತಾಜಾ ಮಾರುಕಟ್ಟೆ ವ್ಯವಸ್ಥಾಪಕರು ಎಲ್ಲರೂ ತಾವು ತಾವು ಸಜ್ಜಾಗುತ್ತಿದ್ದಾರೆ.

ಈ ಬಾರಿ ಮಾವಿಗೆ ಹವಾಮಾನ ಬೆಂಬಲವಾಗಿಲ್ಲವೋ ಎಂಬ ಅನುಮಾನವಿದ್ದರೂ, ಮಾರುಕಟ್ಟೆ ಆರಂಭವಾದ ಮೇಲೆ ಉತ್ಪಾದನೆಯ ಪೂರ್ಣ ಸ್ಥಿತಿ ಗೊತ್ತಾಗಲಿದೆ. ಕೆಲವೊಂದು ಪ್ರದೇಶಗಳಲ್ಲಿ ಫಲವತ್ತತೆ ಕಡಿಮೆಯಾಗಿದ್ದು, ಇದರಿಂದ ಬೆಲೆಗೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಮಾವು ಬೆಳಗಾರ ಬಿ ಎ ಸೈಯದ್ ಫಾರೂಕ್ ಬುರಕಾಯಲಕೋಟೆ ಹೇಳಿದ್ದಾರೆ.

ಇದನ್ನೂ ಓದಿದ್ದೀರಾ? ವಿಜಯಪುರ‌ | ಕಲ್ಲಂಗಡಿ ಹಣ್ಣು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ ರೈತ

ಎಪಿಎಂಸಿ ಮಾರುಕಟ್ಟೆ ಮಂಡಿಗಳ ಮಾಲೀಕರು ಹಾಗೂ ಖಾಸಗಿ ಮಂಡಿಗಳವರು ಮೇ 15ರಿಂದ ಮಾರುಕಟ್ಟೆ ಆರಂಭವಾಗುತ್ತದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬುದು ಮಾರುಕಟ್ಟೆ ಚಟುವಟಿಕೆ ಪ್ರಾರಂಭವಾದ ನಂತರವೇ ಸ್ಪಷ್ಟವಾಗಲಿದೆ.

ವರದಿ : ಶಬ್ಬೀರ್ ಅಹ್ಮದ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...