ತುಮಕೂರು | ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕರೆ; ರಸ್ತೆಗಿಳಿದ ರೈತರಿಂದ ಅರೆ ಬೆತ್ತಲೆ ಉರುಳು ಸೇವೆ

Date:

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರನ್ನು ಬೇರೆ ಜಿಲ್ಲೆ ರಾಮನಗರದತ್ತ ಕೊಂಡೊಯ್ಯುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಅಕ್ರಮವಾಗಿದೆ. ಯೋಜನೆ ರದ್ದು ಪಡಿಸಲು ನಿರಂತರ ಹೋರಾಟ ನಡೆಸಿದ ಸಮಿತಿ ಕರೆ ನೀಡಿದ್ದ ತುಮಕೂರು ಜಿಲ್ಲೆ ಬಂದ್ ಹಿನ್ನಲೆ ಮಂಗಳವಾರ ಗುಬ್ಬಿ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

- Advertisement -

ಗುಬ್ಬಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಬೆಳಿಗ್ಗೆ 7 ರಿಂದ ಅಂಗಡಿ ಮುಂಗಟ್ಟು ಮುಚ್ಚಿ ರೈತರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ಸೂಚಿಸಿದರು. ನಂತರ ತಾಲೂಕು ಕೇಂದ್ರ ಗುಬ್ಬಿ ಪಟ್ಟಣದಲ್ಲಿ ಶಾಲಾ ಕಾಲೇಜು, ಸಣ್ಣ ಕೈಗಾರಿಕೆಗಳು, ದಿನಸಿ ಅಂಗಡಿಗಳು, ಹೋಟೆಲ್‌ಗಳು, ಎಲ್ಲ ವರ್ತಕರು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಲಿಂಕ್ ಕೆನಾಲ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ಬಳಿಕ ರೈತ ಸಂಘದ ಸದಸ್ಯರು ಅರೆ ಬೆತ್ತಲೆಯಲ್ಲಿ ಉರುಳು ಸೇವೆ ನಡೆಸಿದರು. ಇವರಿಗೆ ಸಾಥ್ ನೀಡಿದ ಎಲ್ಲ ಪಕ್ಷದ ಮುಖಂಡರೂ ಕೂಡಾ ರಸ್ತೆಯಲ್ಲಿ ಮಲಗಿ ವಿನೂತನವಾಗಿ ಪ್ರತಿಭಟಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, “ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಬಂದ್ ಯಶಸ್ವಿ ಮಾಡಿದ ರೈತರ ಸಹಕಾರ ಮುಂದಿನ ತೀವ್ರ ಹೋರಾಟಕ್ಕೂ ಬೇಕಿದೆ. ಬಂದ್‌ಗೆ ಬೆಂಬಲ ಇದೆ ಎಂದ ಶಾಸಕರು ಮನೆಯಲ್ಲಿ ಕುಳಿತರೆ ಹೇಗೆ ರೈತರ ಪರ ಆಗುತ್ತದೆ. ಬೀದಿಗಿಳಿದು ನಮ್ಮ ಹೋರಾಟದಲ್ಲಿ ಧುಮುಕಿ ನೀರಿಗಾಗಿ ಸರ್ಕಾರಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಬೇಕಿತ್ತು. ಇಲ್ಲಿ ರಾಜಕೀಯ ಬೇಳೆ ಬೇಯಿಸುವ ಉದ್ದೇಶವಿಲ್ಲ. ಚುನಾವಣೆ ಬಂದಾಗ ನಡೆಯುವ ತಂತ್ರ ಇಲ್ಲಿಲ್ಲ. ನೀರಿಗಾಗಿ ನಡೆದ ರೈತರ ಹೋರಾಟ ಪಕ್ಷಾತೀತ ನಿಲುವು, ಜನಪರ ನಿಲ್ಲಬೇಕಿದೆ ಎಂದ ಅವರು ಈ ಬಂದ್ ಎಚ್ಚರಿಕೆಗೆ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, “ಸರ್ಕಾರಕ್ಕೆ ನೀಡಿದ ಎಚ್ಚರಿಕೆ ಗಂಟೆಗೆ ಜಗ್ಗದಿದ್ದರೆ ಚಾನಲ್ ಮುಚ್ಚುವ ಹೋರಾಟ ತಾಲೂಕಿನ 50 ಸಾವಿರ ರೈತರೊಂದಿಗೆ ನಡೆಸುತ್ತೇವೆ. ನೂರಾರು ಜೆಸಿಬಿ, ಹಿಟಾಚಿ ಯಂತ್ರ ತಂದು ಕಾಮಗಾರಿ ಸ್ಥಗಿತ ಮಾಡುತ್ತೇವೆ. ಈ ನೀರಾವರಿ ಹೋರಾಟಕ್ಕೆ ಶಾಸಕರು ರಾಜೀನಾಮೆ ನೀಡಿ ಬೆಂಬಲ ಸೂಚಿಸಬೇಕು. ಮಾಧ್ಯಮದಲ್ಲಿ ಹೇಳಿಕೆ ನೀಡಿ ಮನೆಯಲ್ಲಿದ್ದರೆ ಅದು ಸಹಕಾರ ಅಲ್ಲ. ಅವರಿಗೆ ಬಂದ 60 ಸಾವಿರ ಮತದಲ್ಲಿ ಬಹುತೇಕರು ರೈತ ವರ್ಗ ಎಂಬುದನ್ನು ಶಾಸಕರು ಮರೆಯಬಾರದು” ಎಂದು ಕುಟುಕಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿ ಎಂಪಾಳ್ಯ ಲೋಕೇಶ್ ಮಾತನಾಡಿ, “ರೈತರ ಹೋರಾಟಕ್ಕೆ ಎಲ್ಲ ಸಂಘ ಸಂಸ್ಥೆಗಳು ಸಾಥ್ ನೀಡಿವೆ. ಈ ಅವೈಜ್ಞಾನಿಕ ಕಾಮಗಾರಿ ರದ್ದು ಮಾಡದಿದ್ದರೆ ಕೆನಾಲ್ ನಮ್ಮ ಜಿಲ್ಲೆಗೆ ಮರಣ ಶಾಸನವಾಗಲಿದೆ. ಬಂದ್ ಶಾಂತಿಯ ಹೋರಾಟವಾಗಿದೆ. ಯೋಜನೆ ಕೈ ಬಿಡದಿದ್ದರೆ ತೀವ್ರ ಹೋರಾಟ, ಕೆನಾಲ್ ಮುಚ್ಚುವ ಕಾರ್ಯ ನಿರಂತರ ನಡೆಯಲಿದೆ. ಚಾನಲ್ ಬಳಿಯ ಹೋರಾಟ ಎಷ್ಟೇ ಕೇಸು ದಾಖಲಿಸಿದರೂ ಸಾವಿರಾರು ಜನ ಬರಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.

ಜಿಪಂ ಮಾಜಿ ಸದಸ್ಯ ಪಿ ಬಿ ಚಂದ್ರಶೇಖರಬಾಬು ಮಾತನಾಡಿ, “ಕಳೆದ 30 ವರ್ಷದ ಹಿಂದೆ ಹೇಮಾವತಿ ಜಿಲ್ಲೆಗೆ ನೀರು ಹರಿಸಲು ನಡೆಸಿದ ತೀವ್ರ ಹೋರಾಟ ಮತ್ತೊಮ್ಮೆ ಹೇಮಾವತಿ ಉಳಿಸಿಕೊಳ್ಳಲು ಮಾಡಬೇಕಿದೆ. ತಾಲೂಕು ಬಂದ್ ಯಶಸ್ವಿಗೆ ಬೆಂಬಲ ನೀಡಿದ ಎಲ್ಲ ಜನರು ಮತ್ತೆ ನೀರು ನಮ್ಮ ಹಕ್ಕು ಎಂದು ಪ್ರತಿಪಾದಿಸಲು ನಿರಂತರ ಹೋರಾಟಕ್ಕೆ ಬರಬೇಕು” ಎಂದು ಕರೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಬಿ ಆರತಿ ಅವರಿಗೆ ಮನವಿಪತ್ರ ಸಲ್ಲಿಸಿ ರಾಜ್ಯಪಾಲರಿಗೆ ತಲುಪಿಸಲು ಮನವಿ ಮಾಡಿದರು. ನಂತರ ಸಾವಿರಾರು ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯವರೆಗೆ ಅಂಗಡಿ ಮುಂಗಟ್ಟು ಮುಚ್ಚಲು ಮತ್ತೊಮ್ಮೆ ಪ್ರಚಾರ ಮಾಡಿ ಪ್ರತಿಭಟನಾ ಸಭೆ ಅಂತ್ಯ ಮಾಡಿದರು.

ಈ ಸುದ್ದಿ ಓದಿದ್ದೀರಾ? ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ವಿರೋಧ; ತುಮಕೂರು ಜಿಲ್ಲಾ ಬಂದ್ ಯಶಸ್ವಿ

ಪ್ರತಿಭಟನೆಯಲ್ಲಿ ಮುಖಂಡರಾದ ಹೊನ್ನಗಿರಿಗೌಡ, ಜಿ ಎನ್ ಬೆಟ್ಟಸ್ವಾಮಿ, ಎನ್ ಸಿ ಪ್ರಕಾಶ್, ಯೋಗಾನಂದಕುಮಾರ್, ಸಾಗರನಹಳ್ಳಿ ವಿಜಯ್ ಕುಮಾರ್, ಎಚ್ ಟಿ ಭೈರಪ್ಪ, ಜಿ ಡಿ ಸುರೇಶ್ ಗೌಡ, ಸಿದ್ದಗಂಗಮ್ಮ, ಪಂಚಾಕ್ಷರಿ, ನಂಜೇಗೌಡ, ಪಪಂ ಸದಸ್ಯರಾದ ಜಿ ಆರ್ ಶಿವಕುಮಾರ್, ಜಿ ಎನ್ ಅಣ್ಣಪ್ಪಸ್ವಾಮಿ, ಜಿ ಸಿ ಕೃಷ್ಣಮೂರ್ತಿ, ಶಶಿಕುಮಾರ್, ಸಿ ಆರ್ ಶಂಕರ್ ಕುಮಾರ್, ರೈತ ಸಂಘದ ವೆಂಕಟೇಗೌಡ, ಸಿ ಜಿ ಲೋಕೇಶ್, ಜಿ ಚಂದ್ರಶೇಖರ್ ಸೇರಿದಂತೆ ರೈತಸಂಘದ ಸದಸ್ಯರು, ವರ್ತಕರ ಸಂಘ, ಧಾನ್ಯ ಮಾರಾಟಗಾರರ ಸಂಘ, ಮಾಜಿ ಸೈನಿಕರ ಸಂಘ, ಸ್ತ್ರೀ ಶಕ್ತಿ ಒಕ್ಕೂಟ, ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಬೆಂಬಲ ನೀಡಿದ್ದವು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ತುಮಕೂರು ದಸರಾಕ್ಕೆ ತಾರಾ ಮೆರುಗು : 11 ದಿನ, ನೂರಾರು ಆಕರ್ಷಣೆ

ದೇವಿಯ ಆರಾಧನೆ, ತಾರೆಯರ ಕಲರವ, ಸಂಗೀತದ ರಸದೌತಣ, ನೃತ್ಯ ವೈಭವ, ಕ್ರೀಡಾ...