ಗುಬ್ಬಿ | ಬೇಸಿಗೆ ನೀರಿನ ಸಮಸ್ಯೆಗೆ ಮೆನ್ನೆಚ್ಚರಿಕೆಗೆ ಕ್ರಮ : ಶಾಸಕ ಎಸ್.ಆರ್.ಶ್ರೀನಿವಾಸ್

Date:

ಗುಬ್ಬಿ ತಾಲ್ಲೂಕಿನಲ್ಲಿ ಕೆಲ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನಲೆ ತಕ್ಷಣ ತುರ್ತು ಕ್ರಮ ವಹಿಸಲಾಗಿದೆ. ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಕಾಣದಂತೆ ಮೆನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳ ಸಭೆ ಇದೇ ತಿಂಗಳ 13 ರಂದು ಕರೆಯಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

- Advertisement -

ತಾಲ್ಲೂಕಿನ ಚಿಕ್ಕಹಳ್ಳಿ, ವಿರೂಪಾಕ್ಷಪುರ, ಎಂ.ಎನ್.ಕೋಟೆ ಹಾಗೂ ಅಳಿಲುಘಟ್ಟ ಗ್ರಾಮದಲ್ಲಿ ಒಟ್ಟು 5.30 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಅದಲಗೆರೆ ಗೊಲ್ಲರಹಟ್ಟಿ, ಕೊಂಡ್ಲಿ ಕ್ರಾಸ್ ನಲ್ಲಿ ನೀರಿನ ಸಮಸ್ಯೆ ಕಂಡಿತ್ತು. ಶೀಘ್ರ ಕ್ರಮಕ್ಕೆ ಸೂಚಿಸಲಾಯಿತು. ಈ ಬೇಸಿಗೆಯಲ್ಲಿ ನೀರು ವಿದ್ಯುತ್ ಸಮಸ್ಯೆ ತಲೆದೋರುವ ಮುನ್ನ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಹರಿಸುವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕೇಂದ್ರ ಸರ್ಕಾರ ಈ ಯೋಜನೆಗೆ 10 ಸಾವಿರ ಕೋಟಿ ಬಾಕಿ ನೀಡಬೇಕಿದೆ. ಗುತ್ತಿಗೆದಾರರು ಕೆಲಸ ಕೈಬಿಟ್ಟಿದ್ದಾರೆ. ನಿತ್ಯ ದೂರುಗಳು ಬರುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ತಲಾ ಶೇಕಡಾ 37.50 ಹಣ ನೀಡಿದರೆ, ಗ್ರಾಮ ಪಂಚಾಯಿತಿ ಮುಂದಿನ ಕ್ರಮ ವಹಿಸಿದೆ. ಆದರೆ ಯೋಜನೆಗೆ ಕೇಂದ್ರವೇ ಹಣ ನೀಡಿಲ್ಲ ಎಂದು ದೂರಿದರು.

ತಾಲ್ಲೂಕಿನಲ್ಲಿ ಬಾಕಿ ಇರುವ ಗ್ರಾಮೀಣ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ. ಕಳೆದೆರಡು ತಿಂಗಳಿಂದ ನೂರಾರು ಕೋಟಿ ಕೆಲಸಕ್ಕೆ ಪೂಜೆ ನಡೆದಿದೆ. ಈಗಾಗಲೇ 500 ಕೋಟಿ ಅನುದಾನ ಬೇರೆ ಬೇರೆ ಯೋಜನೆಯಡಿ ತಾಲ್ಲೂಕಿನಲ್ಲಿ ಕೆಲಸ ನಡೆದಿದೆ. ವಿಶೇಷವಾಗಿ ಹಾಗಲವಾಡಿ ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಸರ್ಕಾರಿ ವ್ಯಾಲಿ ಜೊತೆಗೆ ರೈತರ ಜಮೀನಲ್ಲಿ ಸಹ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದ ಅವರು ಯುದ್ಧದ ನೆಪದಲ್ಲಿ ಕೆಲ ಔಷಧಿಗಳ ಕಾಳಸಂತೆ ಮಾರಾಟದ ಬಗ್ಗೆ ಸರ್ಕಾರ ಗಮನಹರಿಸಿದೆ ಎಂದರು.

ಮತಯಂತ್ರ ಬದಲು ಮತಪತ್ರ ಬಳಕೆಗೆ ಸುಪ್ರಿಂ ಕೋರ್ಟ್ ಆದೇಶವನ್ನು ನೀಡಿದೆ. ಎಲ್ಲೆಡೆ ಅದೇ ಪ್ರಾಮುಖ್ಯತೆ ಪಡೆಯುತ್ತಿದೆ. ರಾಜ್ಯಪಾಲರು ಅದನ್ನು ತಡೆಹಿಡಿಯಲು ಸಾಧ್ಯವಿಲ್ಲ. ಮತಪತ್ರ ಬಳಕೆಗೆ ಅಂಗೀಕಾರ ಸಿಗಲಿದೆ ಎಂದ ಅವರು ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಮುಖಂಡರು ಚುನಾವಣೆ ಮಾಡಿಲ್ಲ ಎನ್ನುವ ಆರೋಪಕ್ಕೆ ಆಧಾರವಿಲ್ಲ. ಅಸಮಾಧಾನದ ಮಾತುಗಳು ಅಷ್ಟೇ ಅಲ್ಲಿ ಕಂಡಿರುವುದು ಎಂದು ಸಮಜಾಯಿಸಿ ನೀಡಿದರು.

ವಿದ್ಯುತ್ ಸಮಸ್ಯೆಗೆ ನಮ್ಮಲ್ಲಿ ಸರಬರಾಜು ಉಪಘಟಕಗಳು ಇನ್ನೂ ಕೆಲವು ಆರಂಭವಾಗಲಿದೆ. ಭೋಗಸಂದ್ರ, ಎಂಎಂಎ ಕಾವಲ್, ತೊರೆಹಳ್ಳಿ ಹೀಗೆ ಹಲವೆಡೆ ಕಾಮಗಾರಿ ಆರಂಭವಾಗಿದೆ. ಈ ಜೊತೆಗೆ ಗುಬ್ಬಿಯಲ್ಲಿ 220 ಕೆವಿ ಸ್ಟೇಷನ್ 130 ಕೋಟಿ ರೂಗಳಲ್ಲಿ ಕೆಲಸ ನಡೆದಿದೆ ಎಂದ ಅವರು ಶಾಸಕರಾದವರಿಗೆ ಮಂತ್ರಿಯಾಗುವ ಆಸೆ ಸಹಜವಾಗಿ ಇರುತ್ತದೆ. ಈ ಹಿನ್ನಲೆ ಕೆಲಸ ಶಾಸಕರು ದೆಹಲಿಯತ್ತ ಸಾಗಿದ್ದಾರೆ. ಇದರಲ್ಲಿ ವಿಶೇಷತೆ ಏನಿಲ್ಲ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ಗುರುರೇಣುಕಾರಾಧ್ಯ, ಸಣ್ಣರಂಗಯ್ಯ, ಪುಟ್ಟರಾಜು, ತಿಮ್ಲಿಪಾಳ್ಯ ಶಶಿಧರ್, ಎಂ.ಎನ್.ಕೋಟೆಯ ಗೋಪಾಲಶಟ್ಟಿ , ನಾಗರಾಜಗುಪ್ತ , ಮಾರುತಿಕುಮಾರ್, ಸಿದ್ದಲಿಂಗಪ್ಪ ,ಪಾಂಡುರಂಗಯ್ಯ , ಲಕ್ಷ್ಮೀಕಾಂತಯ್ಯ ದೇವರಾಜು , ಸತ್ಯಪ್ರಸಾದ್ , ನಂಜರಾಜುಗುಪ್ತ , ದಿಲೀಪ್ ಕುಮಾರ್, ಶಿವಪ್ಪ , ಸಿದ್ದರಾಮಣ್ಣ , ವಸಂತ್ ಕುಮಾರ್, ನಿಜಗುಣಮೂರ್ತಿ ಶೇಖರ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾಕ್ಕೆ ತಾರಾ ಮೆರುಗು : 11 ದಿನ, ನೂರಾರು ಆಕರ್ಷಣೆ

ದೇವಿಯ ಆರಾಧನೆ, ತಾರೆಯರ ಕಲರವ, ಸಂಗೀತದ ರಸದೌತಣ, ನೃತ್ಯ ವೈಭವ, ಕ್ರೀಡಾ...

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ನಾಲ್ವರಿಗೆ ಸ್ಥಾನ

 ಜಾಗತಿಕ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಮತ್ತೊಂದು ಮಹತ್ವದ...

ತುಮಕೂರು ದಸರಾ | ಬೆಳಕಿನ ಹಬ್ಬದ ಹಿಂದೆ ಕತ್ತಲ ಲೆಕ್ಕ!

 ನಾಡಹಬ್ಬ ದಸರಾಕ್ಕೆ ತುಮಕೂರು ನಗರ ಸಜ್ಜಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು...

ಚಿಕ್ಕನಾಯಕನಹಳ್ಳಿ | ಮನೆ ಕುಸಿಯುವ ಮುನ್ನ ತಹಸೀಲ್ದಾರ್ ನೆರವಿನ ಹಸ್ತ ಚಾಚಲಿ

ಒಂದು ಕಡೆ ತಂದೆಯನ್ನು ಕಳೆದುಕೊಂಡ ಅಪ್ರಾಪ್ತ ಮಗಳ ಭವಿಷ್ಯದ ಚಿಂತೆ… ಮತ್ತೊಂದೆಡೆ...