ಗುಬ್ಬಿ | ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡಲ್ಲ : ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು

Date:

ತುಮಕೂರು ಜಿಲ್ಲೆಯ  ಜೀವನಾಡಿ ಹೇಮಾವತಿ ನೀರು ಬೇರೆಡೆ ಹರಿಸುವ ಅವೈಜ್ಞಾನಿಕ ಲಿಂಕ್ ಕೆನಾಲ್ ಕಾಮಗಾರಿ ವರ್ಷದ ಹಿಂದೆ ಹೋರಾಟದ ಮೂಲಕವೇ ಸ್ಥಗಿತ ಮಾಡಲಾಗಿತ್ತು. ಜನರ ತಾಳ್ಮೆ ಪರೀಕ್ಷಿಸಿದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಹೇಳಿಕೆ ಮತ್ತೊಂದು ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆದಂತಾಗಿದೆ. ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಎಲ್ಲಾ ಪಕ್ಷದ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ಗುರುವಾರ ಪೂರ್ವಭಾವಿ ನಡೆಸಿ ಹೋರಾಟಕ್ಕೆ ಯಾರು ಬರಲಿ ಬಿಡಲಿ ಉಗ್ರ ಹೋರಾಟಕ್ಕೆ ಸನ್ನದ್ಧ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನೆ ಮಾಡಿದರು.

- Advertisement -

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ರೈತರು ಶಾಸಕರು, ಸಂಸದರು ಈ ಹೋರಾಟಕ್ಕೆ ಬರಬೇಕು. ಜಿಲ್ಲೆಯ ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಹೋರಾಟಕ್ಕೆ ಯಾರೊಬ್ಬರ ನೇತೃತ್ವಕ್ಕಿಂತ ಸಾಮೂಹಿಕ ನೇತೃತ್ವದಲ್ಲಿ ಯಾರು ಬರಲಿ ಬಿಡಲಿ ಹೋರಾಟ ಸಾವಿರಾರು ರೈತರೊಟ್ಟಿಗೆ ನಡೆಯಲಿದೆ. ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಒಕ್ಕೊರಲಿನ ತೀರ್ಮಾನ ಕೈಗೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಜಿಲ್ಲೆಯ ಏಳು ತಾಲ್ಲೂಕಿಗೆ ಜೀವಜಲವಾದ ಹೇಮಾವತಿ ನೀರು ಏಕಾಏಕಿ ಮಾಗಡಿ ರಾಮನಗರದತ್ತ ಹೊಯ್ಯುವುದು ಸರಿಯಲ್ಲ. ಇಲ್ಲಿನ ರೈತರಿಗೆ ಮರಣ ಶಾಸನ ಬರೆದು ಸಿಎಂ ತಮ್ಮ ಕನಸಿನ ಕೂಸು ಬಿಡದಿ ಟೌನ್ ಶಿಪ್ ಗಾಗಿ ನಮ್ಮ ನೀರು ಹರಿಸಿಕೊಳ್ಳುತ್ತಿರುವುದು ಯಾವ ನ್ಯಾಯ. ಕೆಡಿಪಿ ಸಭೆಯಲ್ಲಿ ಕಾಮಗಾರಿ ನಿಲ್ಲಿಸುವ ಮಾತು ಹೇಳಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಈಗ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು ರೈತರಿಗೆ ವಿಷ ಕೊಟ್ಟಂತೆ. ಜಿಲ್ಲೆಯ ಜನರಿಗೆ ದ್ರೋಹ ಮಾಡದೆ ನೀರು ಉಳಿಸುವ ಬಗ್ಗೆ ಸಿಎಂ ಮನವರಿಕೆ ಮಾಡಬೇಕಿದೆ. ಆಕ್ರೋಶಕ್ಕೆ ಒಳಗಾದ ರೈತರು ಮುಂದೆ ನಡೆಸುವ ಉಗ್ರ ಹೋರಾಟಕ್ಕೆ ತಡೆ ಎನ್ನುವುದಿಲ್ಲ. ಯಾವುದೇ ಕೆಟ್ಟ ಪರಿಣಾಮ ನಡೆದರೂ ಸರ್ಕಾರವೇ ಹೊಣೆಯಾಗಬೇಕು ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಜನಶಕ್ತಿ ಮುಂದೆ ಯಾವುದೇ ಸರ್ಕಾರ ಮಂಡಿಯೂರಲೇಬೇಕು. ಈಗಾಗಲೇ 80 ಮಂದಿ ರೈತರ ಮೇಲೆ ಕೇಸು ದಾಖಲಾಗಿದೆ. ದೊಡ್ಡ ಹೋರಾಟದ ಮೂಲಕ ಕಾಮಗಾರಿ ನಿಲ್ಲಿಸಿದ್ದೇವು. ಮತ್ತೊಮ್ಮೆ ಉಗ್ರ ಹೋರಾಟಕ್ಕೆ ರೈತರು ಸಜ್ಜಾಗಿದ್ದಾರೆ. ಜೈಲ್ ಭರೋ ಎಂದು ಘೋಷಣೆ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾವಿರಾರು ರೈತರು ನಿಲ್ಲುತ್ತಾರೆ. ಯಾವ ಹಿಂಜರಿಕೆ ಇಲ್ಲದೆ ರೈತರು ಒಗ್ಗೂಡಿ ಕೆನಾಲ್ ಬಳಿ ಹೋರಾಟ ಮಾಡುತ್ತಾರೆ. ಪ್ರತಿ ಮನೆಯಿಂದ ಇಬ್ಬರು ಕಡ್ಡಾಯ ಬರುತ್ತಾರೆ. ಈ ಜನಪ್ರವಾಹ ತಡೆಯಲು ಸಾಧ್ಯವಿಲ್ಲ ಎಂದ ಅವರು ಕಳೆದ ವರ್ಷ ನಾಲಾ ಮೂಲಕವೇ 3.5 ಟಿಎಂಸಿ ನೀರು ಕುಣಿಗಲ್ ತಾಲ್ಲೂಕಿಗೆ ಹರಿದಿದೆ. ಅಲ್ಲಿಂದ ಮಾಗಡಿ ರಾಮನಗರಕ್ಕೆ ಪಂಪ್ ಸಹ ಆಗಿದೆ. ಎಲ್ಲವೂ ತಿಳಿದು ನಮ್ಮ 80 ಕಿಮೀ ನಾಲೆಯ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಎಲ್ಲಾ ರೈತರ ಯೋಗಕ್ಷೇಮ ನೋಡಬೇಕು. ಗುಬ್ಬಿ ಶಾಸಕರು ವಿರೋಧದ ಹೇಳಿಕೆ ನೀಡಿದ್ದಾರೆ. ಆದರೆ ಹೋರಾಟಕ್ಕೆ ಮುಂಚೂಣಿಯಲ್ಲಿ ಬಂದರೆ ಸ್ವಾಗತ ಕೋರುತ್ತೇವೆ ಎಂದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಹೋರಾಟದಿಂದ ಮಾತ್ರ ಕಾಮಗಾರಿ ಸ್ಥಗಿತವಾಗಿತ್ತು. ಮತ್ತೊಮ್ಮೆ ಹೋರಾಟ ಮಾಡುವ ಅಬಿವಾರ್ಯವಿದೆ. ಇಲ್ಲಿ ಯಾವ ಪಕ್ಷವಿಲ್ಲ. ಚುನಾವಣಾ ಗಿಮಿಕ್ ಯಾವುದು ಇಲ್ಲ. ರೈತರ ಉಳಿವಿನ ಪ್ರಶ್ನೆ ಇಲ್ಲಿದೆ. ಕುಣಿಗಲ್ ರೈತರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಅವರ ಪಾಲಿನ ನೀರು ನಾಲೆ ಮೂಲಕ ಕೊಡಲು ನಮ್ಮ ಅಡ್ಡಿಯಿಲ್ಲ. ಕುಣಿಗಲ್ ಶಾಸಕರು ಪ್ರಚೋದನೆ ಮಾಡುತ್ತಿದ್ದಾರೆ. ನಮ್ಮ ಶಾಸಕರು ದಿಢೀರ್ ಪತ್ರಿಕಾ ವಿರೋಧವಿದೆ ಎಂದು ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನದ ಲಾಭಿಯ ಒಂದು ಅಸ್ತ್ರವಾಗಿ ಈ ಹೇಳಿಕೆ ಬರದಿದ್ದರೆ ಒಳಿತು. ಮನಸ್ಸಿನಿಂದ ಹೇಳಿದ್ದರೆ ಅವರ ನೇತೃತ್ವದಲ್ಲಿ ಹೋರಾಟ ನಡೆಯಲಿ. ಅವರ ಜೊತೆ ನಾವು ಹೊರಡುತ್ತೇವೆ ಎಂದರು.

ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ನೀರಾವರಿ ಹೋರಾಟಕ್ಕೆ ನಮ್ಮಲ್ಲೇ ನಿರಾಸಕ್ತಿ ತೋರುತ್ತಾರೆ. ಅಂತಹ ಮುಖಂಡರು ದೂರವಿರುವುದು ಔಚಿತ್ಯ. ಒಂದು ತಾಲ್ಲೂಕಿನ ಹೋರಾಟ ಇದಲ್ಲ. ಜಿಲ್ಲೆಯ ಈ ಹೋರಾಟಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಹೋರಾಟ ಸಮಿತಿ ರಚಿಸಿ ಸಂಚಾಲಕರ ನೇತೃತ್ವದಲ್ಲಿ ಹೋರಾಟ ನಡೆಯಲಿ. ಸಾವಿರಾರು ರೈತರ ಹೋರಾಟ ನೋಡಿ ಚುನಾಯಿತ ಎಲ್ಲಾ ಪ್ರತಿನಿಧಿಗಳು ಸ್ಥಳಕ್ಕೆ ಬರುತ್ತಾರೆ. ಕುಡಿಯಲು ನೀರು ಸಿಗದ ದುಸ್ಥಿತಿ ಬರುವ ಮುನ್ನ ಎಲ್ಲರೂ ಎಚ್ಚೆತ್ತು ಹೋರಾಟಕ್ಕೆ ಬನ್ನಿ ಎಂದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಹೋರಾಟದ ಬಿಸಿ ಈಗಾಗಲೇ ಸರ್ಕಾರಕ್ಕೆ ತಿಳಿದಿದೆ. ಆದರೂ ಹಠಕ್ಕೆ ಬಿದ್ದು ಮತ್ತೊಮ್ಮೆ ರೈತರನ್ನು ಕೆಣಕಿದ್ದಾರೆ. ಸಿಎಂ ಅವರು ಮೇಕೆದಾಟು ಯೋಜನೆ ಮಾಡಿ ರಾಮನಗರ, ಮಾಗಡಿ, ಬಿಡದಿಗೆ ನೀರು ಹರಿಸಿಕೊಳ್ಳಲಿ. ನಮ್ಮ ಪಾಲಿನ ನೀರು ಹೇಗೆ ಕೊಡಲು ಸಾಧ್ಯ. ಮಾರ್ಕೋನಹಳ್ಳಿ ಡ್ಯಾಂ ಗೆ 4 ಟಿಎಂಸಿ ಹಾಗೂ ಕುಣಿಗಲ್ ಗೆ 3.5 ಟಿಎಂಸಿ ಪಡೆದರೆ ಉಳಿದ ತಾಲ್ಲೂಕು ಹೇಗೆ ನೀರು ಹಂಚಿಕೊಳ್ಳುತ್ತವೆ. ಈ ಬಗ್ಗೆ ಎಲ್ಲಾ ಶಾಸಕರು ಮಾತನಾಡಬೇಕಿದೆ. ನಮ್ಮ ಶಾಸಕರು ಸಹ ಹೋರಾಟಕ್ಕೆ ಬರಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಮುಖಂಡರಾದ ಎಚ್.ಟಿ.ಭೈರಪ್ಪ, ಜಿ.ಡಿ.ಸುರೇಶಗೌಡ, ಬಲರಾಮಯ್ಯ, ಕೆ.ಪಿ.ಮಹೇಶ್, ಚಂದ್ರಶೇಖರ್, ಸಿ.ಆರ್.ಶಂಕರ್ ಕುಮಾರ್, ವಿದ್ಯಾಸಾಗರ್, ರೈತಸಂಘದ ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ರೈತನ ಜಮೀನು ಹರಾಜಿಗೆ ವಿರೋಧ: ನ. 2ರಂದು ರೈತಸಂಘದ ಪ್ರತಿಭಟನೆ

 ಬರಗಾಲದಿಂದ ಬೆಳೆ ನಷ್ಟ ಹಾಗೂ ಕೊಳವೆಬಾವಿಗಳು ಬತ್ತಿರುವ ಸಂಕಷ್ಟದ ನಡುವೆಯೇ ಸಾಲ...

ತುಮಕೂರು | ಚಿರತೆ ಸೆರೆಗೆ ನಿರ್ಲಕ್ಷ್ಯ, ರೈತರ ಮೇಲೆ ಕೇಸ್‌ : ಅರಣ್ಯಾಧಿಕಾರಿಗಳ ಅಮಾನತಿಗೆ ಆಗ್ರಹ

ಚಿರತೆ ಸೆರೆಹಿಡಿಯುವಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ...

ಅಮಾನಿಕೆರೆಯಲ್ಲಿ ಜಲಕ್ರೀಡೆಯ ಹೊಸ ಅಲೆ: ಮಿನಿ ಒಲಿಂಪಿಕ್ಸ್‌ಗೆ ತುಮಕೂರು ಮಕ್ಕಳು ಸಜ್ಜು

ತುಮಕೂರು ನಗರದ ಅಮಾನಿಕೆರೆಯಲ್ಲಿ ಜಲಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ...

ಮಧುಗಿರಿ | ಮಾನವೀಯ ಮೌಲ್ಯಗಳ ಪ್ರತಿಪಾದಕ ವಾಲ್ಮೀಕಿ ಸದಾ ಸ್ಮರಣೀಯರು: ಪ್ರೊ. ಕೆ.ಎಸ್. ಕುಮಾರ್

 ಜಗತ್ತಿಗೆ ಶ್ರೇಷ್ಠ ಮಹಾಕಾವ್ಯವಾದ ರಾಮಾಯಣವನ್ನು ನೀಡಿದ ಮಹರ್ಷಿ ವಾಲ್ಮೀಕಿ ಮಾನವೀಯ ಮೌಲ್ಯಗಳನ್ನು...