ಕೊರಟಗೆರೆ | ಗೃಹ ಸಚಿವರ ಕ್ಷೇತ್ರದಲ್ಲಿ ಕೆ.ಎಚ್ ಮುನಿಯಪ್ಪ ಸಿಎಂ ಎಂದು ಘೋಷಣೆ ಮೊಳಗಿಸಿದ ಬೆಂಬಲಿಗರು

Date:

ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ  ಸಚಿವ ಕೆ.ಹೆಚ್. ಮುನಿಯಪ್ಪ  ಅವರು ಮಧುಗಿರಿಯ ತನ್ನ ಸಂಬಂಧಿಗಳ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಚಿವರನ್ನು ಸ್ವಾಗತಿಸಿದ ಮಾದರ ಮಹಾಸಭಾ ಮತ್ತು ಮಾದಿಗ ಸಂಘಟನೆಗಳ ಮುಖಂಡರು ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್ ಮುನಿಯಪ್ಪ ಗೆ ಜೈ… ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್ ಮುನಿಯಪ್ಪಜಿ ಗೆ ಜೈ.. ಎಂಬ ಏರು ಧ್ವನಿಯ ಘೋಷಣೆಗಳು ಮಾರ್ದನಿಸಿದ ಘಟನೆ ನಡೆಯಿತು.

- Advertisement -

 ಮಧುಗಿರಿ ತಾಲೂಕಿನ ಜಡಗೊಂಡನಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಸಚಿವರನ್ನ ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ಪಟ್ಟಣದ ರಿಂಗ್ ರಸ್ತೆಯಲ್ಲಿ ಜಮಾವಣೆಗೊಂಡು ಮುಂದಿನ ಸಿಎಂ ಮುನಿಯಪ್ಪ ಎಂಬ ಘೋಷಣೆ ಮೊಳಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

 ಇದೇ ಸಂದರ್ಭದಲ್ಲಿ ಸುವರ್ಣಗಿರಿ ಸಂಜೀವಿನಿ ತಪ್ಪೋ ಕ್ಷೇತ್ರ ಸಿದ್ದರಬೆಟ್ಟ ಪ್ರಾಂತ್ಯವನ್ನು ಆಳಿದ ಕುರಂಗರಾಜ ಅಳಿದ ನೆಲವನ್ನ ಗುರುತಿಸಿ ಸಂರಕ್ಷಿಸುವುದರ ಜೊತೆಗೆ ಕುರಂಗರಾಜನ ಪ್ರತಿಷ್ಠಾನದ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು ಎಂಬ ಮನವಿಯನ್ನ ಕೊರಟಗೆರೆ ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ವಿಭೂತಿ ಸಿದ್ದಪ್ಪ, ದಾಡಿ ವೆಂಕಟೇಶ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು.

 ತುಮಕೂರು ಜಿಲ್ಲಾ ಮಾದರಾ ಮಹಾಸಭಾ ಜಿಲ್ಲಾಧ್ಯಕ್ಷ ಹುಚ್ಚಯ್ಯ ಅವರು ಶತಶತಮಾನಗಳಿಂದ ಶೋಷಣೆ ತುಳಿತ ಕೊಳಗಾದ ಮಾದಿಗ ಸಮುದಾಯದ ಯುವಕರನ್ನ ಸಂಘಟಿಸಿ ಮುನ್ನಡೆಸಬೇಕು ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.

 ಇದೇ ಸಂದರ್ಭದಲ್ಲಿ ಮಾದರ ಮಹಾಸಭಾದ ಮಾಜಿ ಶಾಸಕ ಗಂಗಾ ಹನುಮಯ್ಯ, ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಉಪಾಧ್ಯಕ್ಷರಾದ ಡಾ. ಎಲ್ ಮುಕುಂದರಾಜ್, ಕೊಟ್ಟ ಶಂಕರ್ , ಗೂಳರಿವೆ ನಾಗರಾಜು, ಕೊರಟಗೆರೆ ತಾಲೂಕು ಮಾದರ ಮಹಾಸಭಾದ ವಿಭೂತಿ ಸಿದ್ದಪ್ಪ ದಾಡಿ ವೆಂಕಟೇಶ್,ಲಕ್ಷ್ಮೀ ನರಸಪ್ಪ, ವೀರ ಕ್ಯಾತರಾಯ, ಟೌನ್ ಮಾರುತಿ, ಗೋಪಿ, ತೋವಿನಕೆರೆಹನುಮಂತರಾಯಪ್ಪ,ಕಾಮರಾಜನಹಳ್ಳಿ ದೊಡ್ಡಯ್ಯ,ಗಂಗಣ್ಣ, ಚಿಂಪುಗಾನಹಳ್ಳಿ ರವಿ,ನೇಗಲಾಲ ಸಿದ್ದೇಶ್ ಸೇರಿದಂತೆ ಮಾದಿಗ ಸಮುದಾಯದ ವಿವಿಧ ಮುಖಂಡರುಗಳು ಹಲವರು ಉಪಸ್ಥಿತರಿದ್ದರು.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ

ಮಧುಗಿರಿ ತಾಲ್ಲೂಕಿನ ಕಸಾಪುರ ಗ್ರಾಮದ ದಲಿತ ಯುವಕ ಸಿಂಹಾದ್ರಿ ಹತ್ಯೆಯನ್ನು ಖಂಡಿಸಿರುವ...

ತುಮಕೂರು | ಹೊಸ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ಕಾರ್ಮಿಕರ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರದ ಹೊಸ ಭವಿಷ್ಯ ನಿಧಿ (ಪಿಎಫ್) ನೀತಿಯಲ್ಲಿನ ಕಾರ್ಮಿಕ ವಿರೋಧಿ...

ಮಧುಗಿರಿ | ‘ಸಿಂಹಾದ್ರಿ’ ಕೊಲೆ ಖಂಡಿಸಿ ಪ್ರತಿಭಟನೆ :ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಿಸಲು ಒತ್ತಾಯ

ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಲ್ಲಿ...

ಮಧುಗಿರಿ | ಗಣೇಶ ವಿಸರ್ಜನೆ ವೇಳೆ ಗಲಾಟೆ: ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ; ಆರೋಪಿ ಬಂಧನ

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಭಾನುವಾರ ಗಣೇಶ ಮೂರ್ತಿ...