ತುಮಕೂರು | ಫೆ. 12 ಕ್ಕೆ ಸ್ವಯಂ ಪ್ರೇರಿತ ಬಂದ್ ಗೆ ರೈತ –ಕಾರ್ಮಿಕರ ಸಮಾವೇಶದಲ್ಲಿ ಕರೆ

Date:

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮತ್ತು ಸಂಯುಕ್ತ ಹೋರಾಟ ಕರ್ನಾಟಕ (ಎಸ್ ಎಚ್ ಕೆ) ರಾಜ್ಯ ಘಟಕಗಳು ಜಂಟಿಯಾಗಿ ಸಮಾವೇಶ ಸಂಘಟಿಸಿ ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳ ಜಾರಿ ವಿರೊಧಿಸಿ, ಜನ- ರೈತ ವಿರೋಧಿ ವಿದ್ಯುತ್ ಕಾಯಿದೆ – 25 ವಿರೋಧಿಸಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಸಿಗದಂತೆ ಮತ್ತು ರಾಜ್ಯ ಸರ್ಕಾರಗಳಿಗೆ ಹೊರೆ ಹಾಕುವುದನ್ನು ವಿರೋಧಿಸಿ,  ಕನಿಷ್ಠ ವೇತನ ಮಾಸಿಕ 41,000 ನಿಗಧಿಗೆ, ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ನಿಷೇಧಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಗಳ ಖಾಯಂ ಮಾಡಲು ,ಬೀಜ ಮಸೂದೆ, ಬಲವಂತದ ಭೂಸ್ವಾಧೀನ ವಿರೋಧಿಸಿ,  ಬಗರ್ ಹುಕುಂ ಸಾಗುವಳಿ ದಾರರಿಗೆ ಭೂಮಿ ನೀಡಲು , ಹೊಸ ಶ್ರಮ ನೀತಿ- ಕಾರ್ಮಿಕ ಸಂಹಿತೆಗಳ ಹೆಸರಲ್ಲಿ ಕಾರ್ಮಿಕರ ಮತ್ತೆ ಗುಲಾಮಿ ವ್ಯವಸ್ಥೆಗೆ ತಳ್ಳುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಫೇ12 ರಂದು ಕರೆ ನೀಡಿರುವ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರವನ್ನು ತುಮಕೂರು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಜ.28 ರಂದು ಬೆಳಿಗ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ನಡೆದ ರೈತ – ಕಾರ್ಮಿಕರ ಜಂಟಿ ಸಮಾವೇಶದಲ್ಲಿ ಜಿಲ್ಲೆಯ ಜನತೆಗೆ ವಿನಂತಿಸಿದೆ. ಅಂದು ದೇಶದ ಎಲ್ಲಾಡೆ ನಡೆಯುವ ಸಾರ್ವತ್ರೀಕ ಮುಷ್ಕರದ ಭಾಗವಾಗಿ ಕೈಗಾರಿಕೆಗಳು ಬಂದ್ ಅಗಲಿವೆ , ಕೈಗಾರಿಕಾ ಕಾರ್ಮಿಕರು,  ಅಸಂಘಟಿ ವಲಯದ ಕಾರ್ಮಿಕರು, ರೈತರು ಒಂದಾಗಿ ಈ ಮುಷ್ಕರಕ್ಕೆ ಮುಂದಾಗಿದ್ದಾರೆ. 

- Advertisement -

ಇದೇ ಸಮಾವೇಶದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕಾಂ; ಕೆ, ಮಹಂತೇಶ್,    ಸರ್ಕಾರಗಳು ರೈತ- ಕಾರ್ಮಿಕರ ವಿರೋಧಿ ಕಾನೂನುಗಳನ್ನು ಶರವೇಗದಲ್ಲಿ ಜಾರಿಮಾಡಿ ,ತಮ್ಮ ಕಾಪೋರೇಟ್ ಧಣಿಗಳ ಸೇವೆಯಲ್ಲಿ ತೊಡಗಿವೆ. ಮತದಾರ ಪ್ರಭುವನ್ನು ಮರೆತಿವೆ. ರೈತ ಬೆಳೆಗಳಿಗೆ ಬೆಂಬಲ ಬೆಲೆ, ಕಾರ್ಮಿಕರ ದುಡಿಮೆಗೆ ಬದುಕಲು ಯೋಗ್ಯವಾದ ಕೂಲಿ ಎರಡನ್ನು ನಿರಾಕರಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ರೈತ – ಕಾರ್ಮಿಕ ವಿರೋಧಿ ಕಾಯಿದೆಗಳನ್ನು ರಾಜ್ಯದಲ್ಲಿ ಜಾರಿಮಾಡಲ್ಲ ಎಂದು ಹೇಳುವ ಧೖರ್ಯವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತೋರುತಿಲ್ಲ. ಅದನ್ನು ರಾಜ್ಯದಲ್ಲಿ ವೇಗವಾಗಿ ಜಾರಿಗೆ ಹೋರಟಿದೆ ಎಂದು ಕಟುವಾಗಿ ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

 ದುಡಿವ ಜನರು ಐಕ್ಯತೆಯಿಂದ ಫೇಬ್ರವರಿ 12ರ ಮುಷ್ಕರವನ್ನು ಯಶಸ್ವಿಗೊಳಿಸಲು ವಿನಂತಿಸಿದರು. ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅತ್ಯನ್ನತವಾದ ತ್ರೀಪಕ್ಷೀಯ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸುವುದನ್ನೆ ನಿಲ್ಲಿಸಲಾಗಿದೆ. ಎಂದು ಅವರು ಅಪಾಧಿಸಿದರು. ರೈತರನ್ನು- ಕಾರ್ಮಿಕರನ್ನು ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೊಡಿರುವ ಈ ನೀತಿಗಳು ಬಂಡವಾಳಿಗರಿಗೆ ಅನುಕೂಲ ತಂದಿವೆ – ಸಂವಿಧಾನದ ಅಶಯಗಳಿಗೆ ವಿರೋಧಿಯಾಗಿವೆ ಎಂದರು

 ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕಾಂ;ಗೀರಿಶ್ ಮಾತನಾಡಿ ಜಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶದಲ್ಲಿ ದುಡಿಯು ಜನರಿಗೆ ನಿರಂರತವಾದ ಸಂಕಷ್ಟವನ್ನು ತಂದಿದದೆ. ಡಾಲರ್ ಬೆಲೆ ಗಗನಕ್ಕೆ ಮುಟ್ಟಿದೆ. ಸೂಲಿಬೆಲೆ ಅವರು ಪುಂಗಿದ್ದು ಸುಳ್ಳಿನ ಕಂತೆ ಎಂದು ಸಾಬಿತಾಗಿದೆ. ಹಕ್ಕುಗಳನ್ನು ಉಳಿಸಿಕೊಳ್ಳಲು ದುಡಿವವರು ಮುಂದಾಗುವಂತೆ ಕರೆ ನೀಡಿದರು.

 

1002746361

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಎ. ಗೋವಿಂದರಾಜು ಅವರು ಮಾತನಾಡಿ ಸರ್ಕಾರಗಳು ರೈತವಿರೋಧಿಯಾಗಿವೆ ಬಲವಂತದ ಭೂಸ್ವಾಧೀನ, ಬೆಂಬಲ ಬೇಲೆ ನಿಗಧಿಗೆ ಹಿಂದೇಟು. ಬಿಜ ಮಸೂದೆಯ ಮೂಲಕ ರೈತನ್ನು ಕಾಪೂರೇಟ್ ಗುಲಾಮಗಿರಿಗೆ ತಳಿದರೆ, ವಿದ್ಯುತ್ ಕಾಯಿದೆ ಮೂಲಕ ಜನತೆಯ ಸುಲಿಗೆಗೆ ಹೋರಟಿ. ಈ ಸಮಯದಲ್ಲಿ ರೈತ – ಕಾರ್ಮಿಕರು ಐಕ್ಯತೆಯಿಂದ ಚಳುವಳಿಗೆ ಮುಂದಾಗಬೆಕು ಎಂದರು. 

 ಸಂಯುಕ್ತ ಹೋರಾಟ ಕರ್ನಾಟಕದ ಸಿ. ಯತಿರಾಜು  ಮಾತನಾಡಿ ಸರ್ಕಾರಗಳು ಜನ ಕಲ್ಯಾಣ ರಾಜ್ಯದ ಪರಿಕಲ್ವನೆಯಿಂದ ಹಿಂದೆ ಸರಿದು, ಕಾಪೋರೆಟ್ ಕಲ್ಯಾಣಕ್ಕೆ ನಿಂತಾದ ಜನತೆ ಇದನ್ನು ಒಂದಾಗಿ ಪ್ರತಿರೋಧಿಸಬೇಕಾಗಿದೆ ಎಂದರು. 

ಎಐಯುಟಿಯುಸಿ ಮಂಜುಳಾ ಗೋನಾವರ  ಮಾತನಾಡಿ ಸರ್ಕಾರ ಶಿಕ್ಷಣವನ್ನು ಖಾಸಗಿಕರಿಸುತ್ತಿದೆ. ಶಾಲೆಗಳು ಮುಚ್ಚಲಾಗುತ್ತಿದೆ. ಸ್ವಾತಂತ್ರಗಳಿಸಿ 77ವರ್ಷಗಳು ಸಂದರು ಸರ್ಕಾರ ಅಧಿನದಲ್ಲಿ ದುಡಿವವರಿಗೆ ಕನಿಷ್ಟ ಕೂಲಿ ನೀಡದೆ ಇರುವುವು ನ್ಯಾಯ ಸಮ್ಮತವಲ್ಲ ಎಂದರು. 

 ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ. ಉಮೇಶ್. ಎಐಕೆಎಂಎಸ್ ಸ್ವಾಮಿ ಮಾತನಾಡಿದರು 

 ಅಧ್ಯಕ್ಷ ಮಂಡಳಿಯಲ್ಲಿ ಎ.ಐ.ಟಿ.ಯು.ಸಿ ಕಂಬೇಗೌಡ, ಸಿಐಟಿಯು ಸೈಯದ್ ಮುಜೀಬ್, ಎಐಯುಟಿಯುಸಿ ರೇಖಾ ಇದ್ದು ಸಮಾವೇಶವನ್ನು ನಡೆಸಿಕೊಟ್ಟರು 

ಆರಂಭದಲ್ಲಿ ಚಂದ್ರಶೇಖರ್ ಸ್ವಾಗತಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಕಾಂ; ಜಿ ಕಮಲ  ನಿರೂಪಿಸಿ, ಷಣ್ಮಖಪ್ಪ ಬಿ ಅವರು ವಂದಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ ಉತ್ಸವಕ್ಕೆ ಪೂರ್ವಸಿದ್ಧತೆ: ಆಚರಣೆಗೆ ಜಿಲ್ಲಾಡಳಿತ ಸಜ್ಜು

ತುಮಕೂರು ನಗರದಲ್ಲಿ ದಸರಾ ಉತ್ಸವವನ್ನು ಎಲ್ಲರನ್ನೊಳಗೊಂಡಂತೆ ಜನಪರವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ...

ತುಮಕೂರು | ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಒತ್ತಾಯ

ತುಮಕೂರು ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಿಪಟೂರು ಹೊರತುಪಡಿಸಿ ಜಿಲ್ಲೆಯ...

ತುಮಕೂರು | ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ಅರ್ಹ ಕುಟುಂಬಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು...

ತುಮಕೂರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?: ಹೈಕಮಾಂಡ್ ಮುಂದೆ ಬಣ, ಸಾಮಾಜಿಕ ಸಮೀಕರಣದ ಸವಾಲು

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ...