ಪೆನ್‌ ಪಾಯಿಂಟ್‌ ಕ್ರಿಕೆಟ್‌: ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌; ಅಟ್ಯಾಕರ್ಸ್‌ ರನ್ನರ್‌-ಅಪ್‌

Date:

ಸಾಮಾಜಿಕ ಹೋರಾಟ, ಕಾರ್ಯಾಗಾರ, ಬಡವರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಆರ್ಥಿಕ ಸಹಾಯ ಸೇರಿದಂತೆ ವಿವಿಧ ಸಮಾಜ ಸೇವೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ‘ಪೆನ್‌ ಪಾಯಿಂಟ್‌ ಸ್ನೇಹ ವೇದಿಕೆ’ ಆಯೋಜಿಸಿದ 5ನೇ ಆವೃತ್ತಿಯ ಕ್ರಿಕೆಟ್‌ ಫೆಸ್ಟ್‌ನಲ್ಲಿ ಎಮಾರ್‌ ಸ್ಟ್ರೈಕರ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಟ್ಯಾಕರ್ಸ್‌ ತಂಡ ರನ್ನರ್‌-ಅಪ್‌ ಸ್ಥಾನ ಪಡೆದುಕೊಂಡಿತು.

- Advertisement -

ಕೇರಳದ ಕಾಸರಗೋಡು ಜಿಲ್ಲೆಯ ಲಾರ್ಡ್ಸ್‌ ಮೈದಾನದಲ್ಲಿ ಈ ಬಾರಿ ಟೂರ್ನಿ ನಡೆಯಿತು. ನ್ಯಾಯವಾದಿ ಅಶ್ರಫ್‌ ಕನ್ಯಾರಕೋಡಿ ಮಾಲಕತ್ವದ, ಸಾಬಿತ್‌ ಕುಂಬ್ರ ನಾಯಕತ್ವದ ಎಮಾರ್‌ ಸ್ಟ್ರೈಕರ್ಸ್‌ ತಂಡ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿ, ಅಧಿಕಾರಯುತವಾಗಿ ಕಿರೀಟ ಮುಡಿಗೇರಿಸಿಕೊಂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಹಕೀಮ್‌ ಪದಡ್ಕ ಮಾಲಕತ್ವದ, ರಾಝಿಕ್ ಬಿ.ಎಂ. ನಾಯಕತ್ವದ ಅಟ್ಯಾಕರ್ಸ್‌ ತಂಡ ಈ ಬಾರಿ ಅತ್ಯಾಕರ್ಷಕ ಆಟದ ಮೂಲಕ ಗಮನ ಸೆಳೆಯುವುದರ ಜೊತೆಗೆ, ಫೈನಲ್‌ ಕೂಡಾ ಪ್ರವೇಶಿಸಿತು. ಆದರೆ ಫೈನಲ್‌ನಲ್ಲಿ ಎಮಾರ್‌ ತಂಡದ ವಿರುದ್ಧ ವೀರೋಚಿತ ಸೋಲು ಕಂಡು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

1573047

ರೋಚಕ ಸೆಣಸಾಟ:
ಟೂರ್ನಿಯಲ್ಲಿ ಈ ಬಾರಿ ಒಟ್ಟು 6 ತಂಡಗಳು ಪಾಲ್ಗೊಂಡವು. ಎಮಾರ್‌ ಸ್ಟ್ರೈಕರ್ಸ್‌, ಅಟ್ಯಾಕರ್ಸ್‌ ಜೊತೆಗೆ ಅಶ್ರಫ್‌ ನಟ್ಟಿಬೈಲ್‌ ಮಾಲಿಕತ್ವದ ಗೋಲ್ಡನ್‌ ಯಾರ್ಕರ್ಸ್‌, ಕಳೆದೆರಡು ಬಾರಿ ಚಾಂಪಿಯನ್‌ ಆಗಿದ್ದ ಉದ್ಯಮಿ ಇರ್ಫಾನ್‌ ಕನ್ಯಾರಕೋಡಿ ಮಾಲಿಕತ್ವದ ಬ್ಲೂ ಹಂಟರ್ಸ್‌, ಅಶ್ರಫ್ ಕಟ್ಟದಪಡ್ಪು ಮಾಲಕತ್ವದ ಚಾಲೆಂಜರ್ಸ್‌, ನೂರುದ್ದೀನ್‌ ಬಪ್ಪಳಿಗೆ ಒಡೆತನದ ಸ್ಪೋರ್ಟ್ಸ್‌ವರ್ಲ್ಡ್‌ ಕಿಂಗ್ಸ್‌ ತಂಡಗಳ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತು.

ಲೀಗ್‌ ಹಂತದಲ್ಲಿ ಎಮಾರ್‌ ಅಗ್ರಸ್ಥಾನಿಯಾದರೆ, ಅಟ್ಯಾಕರ್ಸ್‌ 2ನೇ ಸ್ಥಾನ ಪಡೆದುಕೊಂಡಿತು. ಚಾಲೆಂಜರ್ಸ್‌, ಬ್ಲೂ ಹಂಟರ್ಸ್‌ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದುಕೊಂಡಿತು. ಯಾರ್ಕರ್ಸ್‌ ತಂಡ 5ನೇ, ಸ್ಪೋರ್ಟ್ಸ್‌ವರ್ಲ್ಡ್‌ ಕಿಂಗ್ಸ್‌ 6ನೇ ಸ್ಥಾನಕ್ಕೆ ತೃಪ್ತಿಪಟ್ಟು ಗುಂಪು ಹಂತದಲ್ಲೇ ಹೊರಬಿದ್ದವು.

ಎಮಾರ್‌ ಸ್ಟ್ರೈಕರ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ಪ್ರಮುಖ ಪಾತ್ರ ವಹಿಸಿದ ಸ್ಟಾರ್‌ ಆಟಗಾರ ಶಬೀರ್‌ ರೆಂಜ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿ ಸಾಬಿತ್‌ ಕುಂಬ್ರ ಪಾಲಾಯಿತು.

ವೈಯಕ್ತಿಕ ಪ್ರಶಸ್ತಿಗಳ ಪಟ್ಟಿ:
ಸರಣಿ ಶ್ರೇಷ್ಠ: ಶಬೀರ್‌ ರೆಂಜ
ಶ್ರೇಷ್ಠ ಆಲ್ರೌಂಡರ್‌: ಶಿಹಾಬ್‌ ಉಬಾರ್‌
ಶ್ರೇಷ್ಠ ಬ್ಯಾಟ್ಸ್‌ಮನ್‌: ಜಮಾಲ್‌ ಕಲ್ಲಡ್ಕ
ಆರೆಂಜ್‌ ಕ್ಯಾಪ್‌: ಸಿಯಾಬ್‌ ಪಟ್ನ
ಶ್ರೇಷ್ಠ ಬೌಲರ್‌: ಸಾಬಿತ್‌ ಕುಂಬ್ರ
ಪರ್ಪಲ್‌ ಕ್ಯಾಪ್‌: ಅಲ್ಫಾನ್‌ ಅಹ್ಮದ್‌
ಶ್ರೇಷ್ಠ ಕ್ಯಾಚ್‌: ಸರ್ಫು ವಳಾಲ್‌
ಶ್ರೇಷ್ಠ ಫೀಲ್ಡರ್‌: ಶರೀಫ್ ಕಡಬ
ಶ್ರೇಷ್ಠ ವಿಕೆಟ್‌ ಕೀಪರ್‌: ತನ್ಸೀಫ್‌ ಬಿ.ಎಂ.
ಫೈನಲ್‌ನ ಪಂದ್ಯಶ್ರೇಷ್ಠ: ಸಾಬಿತ್‌ ಕುಂಬ್ರ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳಾ ಟಿ20 ಇತಿಹಾಸದಲ್ಲೇ ಮೊದಲು: ಏಷ್ಯಾಕಪ್‌ನಲ್ಲಿ ಲಂಕಾ, ಪಾಕ್ ಸ್ಪಿನ್ನರ್‌ಗಳ ವಿಕ್ರಮ

ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಸಂಪೂರ್ಣ...

ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೆ ‘ಮ್ಯಾಚ್ ಫಿಕ್ಸಿಂಗ್’ ಕಳಂಕ: 7 ಮಂದಿ ತಂಡದಿಂದ ಔಟ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಡುವೆಯೇ ಪಾಕಿಸ್ತಾನ...

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...

75ನೇ ವರ್ಷದ ಬಾಂಧವ್ಯ: ಭಾರತ-ಜಪಾನ್ ನಡುವೆ ಚೊಚ್ಚಲ ಟಿ20 ಕ್ರಿಕೆಟ್

ಭಾರತ ಹಾಗೂ ಜಪಾನ್ ನಡುವಿನ 75ನೇ ವರ್ಷದ ರಾಜತಾಂತ್ರಿಕ ಬಾಂಧವ್ಯದ ಸಂಭ್ರಮಾಚರಣೆಯ...