ತುಮಕೂರು | “ಹುಳಿಮಾವು ಮತ್ತು ನಾನು” ಸೃಜನಶೀಲ ಸ್ತ್ರೀ ಸಂವೇದನೆಯ ಮಹತ್ವದ ಕೃತಿ: ವಾಣಿ ಸತೀಶ್

Date:

“ಹುಳಿಮಾವು ಮತ್ತು ನಾನು” ಕೃತಿಯು ಕೇವಲ ಒಬ್ಬ ಮಹಿಳೆಯ ಸಾಂಸಾರಿಕ ಬದುಕಿನ ನೆನಪುಗಳಲ್ಲ. ವ್ಯವಸ್ಥೆಯೊಳಗಿದ್ದುಕೊಂಡೇ ಮಹಿಳೆಯೊಬ್ಬಳು ತನ್ನ ಬೌದ್ಧಿಕ, ಸಾಂಸಾರಿಕ ಹಾಗೂ ಆಂತರಿಕ ಜಗತ್ತನ್ನು ಹೇಗೆ ಗಟ್ಟಿಯಾಗಿ ಕಾಯ್ದುಕೊಂಡಳು ಎಂಬುದನ್ನು ನಿರೂಪಿಸುವ ಸೃಜನಶೀಲ ಸ್ತ್ರೀ ಸಂವೇದನೆಯ ಮಹತ್ವದ ಕೃತಿಯಾಗಿದೆ ಎಂದು ರಂಗಕರ್ಮಿ ವಾಣಿ ಸತೀಶ್ ಅಭಿಪ್ರಾಯಪಟ್ಟರು.

- Advertisement -

ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ, ದಾರಿಬುತ್ತಿ ಹಾಗೂ ಅಂಗಳ ಕಮ್ಯುನಿಟಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಇಂದಿರಾ ಲಂಕೇಶ್ ಅವರಿಗೆ ನುಡಿ ನಮನ ಹಾಗೂ “ಹುಳಿಮಾವು ಮತ್ತು ನಾನು” ಕೃತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಸಾಮಾನ್ಯವಾಗಿ ಮಹಿಳಾ ಬರವಣಿಗೆಯಲ್ಲಿ ಶೋಷಣೆ ಅಥವಾ ಕಷ್ಟಗಳ ನಿರೂಪಣೆಯಲ್ಲಿ ಅಳಲು ಅಥವಾ ವಿಷಾದದ ಧ್ವನಿ ಕಾಣಿಸಿಕೊಳ್ಳುತ್ತದೆ. ಆದರೆ ಇಂದಿರಾ ಅವರ ಬರವಣಿಗೆಯಲ್ಲಿ ಆತ್ಮಗೌರವ, ಪ್ರಬುದ್ಧತೆ ಮತ್ತು ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಎಲ್ಲಿಯೂ ಸ್ವಮರುಕದ ಛಾಯೆ ಕಾಣಿಸದಿರುವುದು ಕೃತಿಯ ವಿಶೇಷತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುಗುಣಾದೇವಿ, ಲಂಕೇಶ್ ಅವರ ಸಾಹಿತ್ಯ ಸಾಧನೆಯ ಹಿಂದೆ ಇಂದಿರಾ ಅವರ ತ್ಯಾಗ, ಕೌಟುಂಬಿಕ ನಿರ್ವಹಣೆ ಹಾಗೂ ಬೆಂಬಲ ಮಹತ್ತರವಾಗಿತ್ತು. ಸೀರೆ ವ್ಯಾಪಾರ ಆರಂಭಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿದ್ದ ಅವರು ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ತಾವು ಕೂಡ ಅವರಿಂದ ಸೀರೆ ಖರೀದಿಸಿದ್ದ ಅನುಭವವನ್ನು ಹಂಚಿಕೊಂಡರು.

ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಇಂದಿರಾ ಮತ್ತು ಲಂಕೇಶ್ ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ, ಪ್ರೀತಿ ಮತ್ತು ಘನತೆಯನ್ನು ಉಳಿಸಿಕೊಂಡು ಸಂಬಂಧವನ್ನು ನಿಭಾಯಿಸಿದ ರೀತಿಯು ಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ತಮ್ಮ ದಾಂಪತ್ಯ ಜೀವನದಲ್ಲಿ ಎದುರಾದ ಸವಾಲುಗಳಿಗೆ ಯಾರನ್ನೂ ದೂಷಿಸದೆ ಸಮಚಿತ್ತದಿಂದ ನಿರೂಪಿಸಿರುವುದು ಕೃತಿಯ ಮತ್ತೊಂದು ವಿಶೇಷತೆ ಎಂದು ಹೇಳಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಬಗ್ಗನಡು ಮಾತನಾಡಿ, ದಾಂಪತ್ಯದ ಯಶಸ್ಸು ಎಂದರೆ ಭಿನ್ನಾಭಿಪ್ರಾಯಗಳೇ ಇಲ್ಲದಿರುವುದಲ್ಲ. ಪರಸ್ಪರರ ಸ್ವತಂತ್ರ ವ್ಯಕ್ತಿತ್ವವನ್ನು ಗೌರವಿಸುತ್ತಲೇ ಕಾಳಜಿ ಮತ್ತು ಸಂಬಂಧವನ್ನು ಉಳಿಸಿಕೊಳ್ಳುವ ಬದುಕಿನ ಮೌಲ್ಯವನ್ನು ಇಂದಿರಾ ಮತ್ತು ಲಂಕೇಶ್ ಅವರ ಜೀವನ ಕೃತಿ ಅನಾವರಣಗೊಳಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಸುನಂದಮ್ಮ, ಇಂದಿರಮ್ಮ, ರಂಗಮ್ಮ ಹೊದೆಕಲ್ಲು, ಗೀತಾಲಕ್ಷ್ಮಿ, ರಾಣಿ ಚಂದ್ರಶೇಖರ್, ಮರಿಯಂಬಿ, ರೇಖಾ ಹಿಮಾನಂದ್, ವರುಣ್ ರಾಜ್, ನವೀನ್ ಕುಮಾರ್ ಪೂಜಾರಹಳ್ಳಿ, ಬಾಬು ಮನಸೇ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಎಸ್‌ಐಆರ್ ರದ್ದುಪಡಿಸಿ, ಜ್ಞಾನೇಶ್ ಕುಮಾರ್‌ರನ್ನು ಪದಚ್ಯುತಿಗೊಳಿಸಿ : ಪ್ರಕಾಶ್ ರಾಜ್

ಜನರನ್ನು ಗೊಂದಲಕ್ಕೆ ಸಿಲುಕಿಸಿ ಅರ್ಹರ ಮತಹಕ್ಕು ಕಸಿಯುವ ಸಾಧ್ಯತೆ ಇರುವ ಎಸ್‌ಐಆರ್‌...

ಮಧುಗಿರಿಯಲ್ಲಿ ಲೋಕಾಯುಕ್ತ ಬೇಟೆ : ₹30 ಸಾವಿರ ಲಂಚ ಪಡೆಯುವಾಗ ಆರ್‌ಐ ಬಂಧನ

 ಪೌತಿ ಖಾತೆ ಮಾಡಿಕೊಡಲು ರೈತನಿಂದ ₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ...

ತುಮಕೂರು | ಪಿಟಿಸಿಎಲ್ ಕಾಯ್ದೆ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಶೆಟ್ಟಿಹಳ್ಳಿ ಮಹೇಶ್ ಅವಿರೋಧ ಆಯ್ಕೆ

ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ...

ತುಮಕೂರು | ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ

ಮಧುಗಿರಿ ತಾಲ್ಲೂಕಿನ ಕಸಾಪುರ ಗ್ರಾಮದ ದಲಿತ ಯುವಕ ಸಿಂಹಾದ್ರಿ ಹತ್ಯೆಯನ್ನು ಖಂಡಿಸಿರುವ...