ತುಮಕೂರು | ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ : ಸಾಹಿತಿ ರಂಗಮ್ಮ ಹೊದೇಕಲ್ 

Date:

ದುಃಖಗಳಿಂದ ಮಾತ್ರವೇ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನಮ್ಮೊಳಗಿನ ಸೃಜನಶೀಲತೆಯನ್ನು ಉದ್ದೀಪಿಸಲು, ಮತ್ತೊಬ್ಬರ ನೋವಿಗೆ ಮಿಡಿಯುವಂತೆ ನಮ್ಮನ್ನು ಅಣಿಗೊಳಿಸಲು ಸಾಧ್ಯ ಎಂದು ಸಾಹಿತಿ ರಂಗಮ್ಮ ಹೊದೇಕಲ್ ಅಭಿಪ್ರಾಯಪಟ್ಟರು

- Advertisement -

ತುಮಕೂರು ನಗರದ ಎಸ್.ಎಸ್. ಪುರಂನ ಅಂಗಳ ಕಮ್ಯುನಿಟಿ ಟ್ರಸ್ಟ್ ನಲ್ಲಿ ದಾರಿಬುತ್ತಿ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಧನಪಾಲ ನಾಗರಾಜಪ್ಪ ಅವರ ‘ಮಾತಾಡುವ ದೇವರು’ ಮತ್ತು ‘ಅವಳಿಗೆ ಹೇಳಿ’ ಕೃತಿಗಳ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಈ ಕೃತಿಯಲ್ಲಿಯೂ ದುಃಖವಿದೆ. ದುಃಖದ ಗಾಯಗಳಿವೆ. ಅದರೆ, ಇವು ಕೇವಲ ಗಾಯಗಳಲ್ಲ, ಇವು ನಮಗೆ ಜೀವನ ಪಾಠಗಳನ್ನು ಹೇಳುವ ಅನುಭವಗಳು. ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ. ಯುವ ಕವಿಗಳಿಗೆ ಇಂಥಹ ಸಾಹಿತ್ಯ ಸಖ್ಯಗಳು ಹೊಸ ಓದುಗಳನ್ನು, ಭಿನ್ನ ಭಿನ್ನ ಜೀವನಾನುಭವಗಳನ್ನು ಕಲಿಸುತ್ತವೆ ಎಂದು ಹೇಳಿದರು.

 ಶಿಕ್ಷಕಿ ಕೆ.ವಿ. ವಿವೇಕ ಮಾತನಾಡಿ   “ಮಾತಾಡುವ ದೇವರು” ಕೃತಿಯನ್ನು ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಕನ್ನಡದ ಪ್ರಾದೇಶಿಕತೆಗೆ ಹೊಂದಿಸಿ ಅನುವಾದಿಸಲಾಗಿದೆ. ಈ ಕೃತಿ, ಕನ್ನಡದ್ದೇ ಕೃತಿ. ನಮ್ಮದೇ ಬದುಕಿನ ಕಥೆ ಎಂಬಂತೆ ಮೂಡಿಬಂದಿದೆ. ಇದು ಓದುಗರಲ್ಲಿ ವಿಚಾರ ಮಂಥನವನ್ನು ಉಂಟುಮಾಡುವ ಮಹತ್ವದ ಕೃತಿ. ಇಲ್ಲಿನ ಸ್ತ್ರೀಪಾತ್ರಗಳು ತಮ್ಮ ಆತ್ಮಸಾಕ್ಷಿಯಂತೆ ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದು ವಿಶೇಷ ಎಂದರು.

“ಅವಳಿಗೆ ಹೇಳಿ” ಕೃತಿಯನ್ನು ಕುರಿತು ಮಾತನಾಡಿದ ದರ್ಶನ್ ಎಸ್.ಆರ್., ಸುತ್ತಲೂ ಕತ್ತಲೆ ಆವರಿಸಿರುವಾಗ, ಕವಿತೆ ಒಂದು ಬೆಳಕು. ನಮ್ಮ ಸುತ್ತ ಇರುವ ಶೋಷಣೆ, ದೌರ್ಜನ್ಯ, ಅಸಮಾನತೆಗಳೇ ಈ ಕತ್ತಲೆ. ಈ ಕತ್ತಲೆ ಇದೆ ಎಂಬುದನ್ನು ಕಾಣಿಸುವುದು ಕವಿತೆ. ಅದೇ ಬೆಳಕು. ಮೌನಕ್ಕೆ ಹೊಸ ಭಾಷ್ಯವನ್ನು ಈ ಕವಿತೆಗಳು ಕಟ್ಟಿ ಕೊಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್. ಕಲಾಧರ್, ಧನಪಾಲ್ ನಾಗರಾಜಪ್ಪ, ಮೇಘನ ಸಿ ಎಸ್., ದಾದಾಪೀರ್ ಬಿ. ಕೆ., ಅನೀಸ., ರಜಿನಿ, ರಂಜಿತ ಎಂ.ಎನ್, ಮಾನಸ ಎ.ಪಿ., ನವೀನ್ ಕುಮಾರ್ ಪಿ.ಆರ್., ಧನುಷ್ ಎಚ್ ಶೇಖರ್., ಪಾತಲಿಂಗಯ್ಯ ಡಿ.ಪಿ., ಹರಿಕೃಷ್ಣ ಕೆ.ಎಸ್., ಮಾರುತಿ ಟಿ., ಜ್ಞಾನೇಶ್ ಕೆ., ಸೇರಿದಂತೆ ಜಿಲ್ಲೆಯ ಕವಿಗಳು, ದಾರಿಬುತ್ತಿ ಹಾಗೂ ಅಂಗಳ ಟ್ರಸ್ಟ್ ನ ಸದಸ್ಯರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...

ತುಮಕೂರು | ಬೆಳೆ ಕಟಾವು ಪ್ರಯೋಗ ಶೇ.100ರಷ್ಟು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿ ಹಂಚಿಕೆಯಾಗಿರುವ ಎಲ್ಲಾ 5,120...

ತುಮಕೂರು | ಎಸ್‌ಐಆರ್ ವಿರುದ್ಧ ಅ. 8ರಂದು ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ

 ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...