ಚಿಂತಾಮಣಿ | ಕಾರು, ದ್ವಿಚಕ್ರ ವಾಹನ ಡಿಕ್ಕಿ; ಇಬ್ಬರು ಸಾವು

Date:

ಮಹೇಂದ್ರ ಥಾರ್‌ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಸಂದ್ರ ಹಾಗೂ ಕೆಂದನಹಳ್ಳಿ ಮಧ್ಯೆ ಗುರುವಾರ ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ನಡೆದಿದೆ.

- Advertisement -

ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿಯ ತಳಗವಾರ ಗ್ರಾಮದ ಅರ್ಜುನ್(30) ಮತ್ತು ಪುನೀತ್(21) ಮೃತ ದುರ್ದೈವಿಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಅರ್ಜುನ್ ಮತ್ತು ಪುನೀತ್ ಇಬ್ಬರು ರಾಯಲ್‌ ಎನ್‌ಫೀಲ್ಡ್ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಕಡೆಯಿಂದ ತಳಗವಾರ ಗ್ರಾಮದ ಕಡೆ ಹೋಗುತ್ತಿದ್ದರು. ಈ ವೇಳೆ ಎದುರಿಗೆ ಬಂದ ಮಹೇಂದ್ರ ಥಾರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಡಿವೈಎಸ್ಪಿ ಮುರಳಿಧರ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿಸಲಾಗಿದೆ.

ಇದನ್ನೂ ಓದಿ : ಬೆಂ.ಗ್ರಾಮಾಂತರ | ಮುಹೂರ್ತದ ವೇಳೆ ಹೊರನಡೆದ ವರ; ಕುಟುಂಬ ಕಂಗಾಲು

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಘಟನೆಯ ಮಾಹಿತಿ ಪಡೆದು ಸೂಕ್ತ ಕ್ರಮಕ್ಕೆ ಸೂಚಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...