ಉಡುಪಿ | ಅಕ್ರಮವಾಗಿ ಬೋಟ್ ಧ್ವಂಸಗೊಳಿಸಿ, ಮಾಲೀಕನಿಗೆ ಜೀವ ಬೆದರಿಕೆ; ಎಸ್‌ಪಿಗೆ ದೂರು

Date:

ಕಳೆದ ನಾಲ್ಕು ವರ್ಷಗಳಿಂದ ದುರಸ್ಥಿಯಲ್ಲಿದ್ದ ಬೋಟೊಂದನ್ನು ಧ್ವಂಸಗೊಳಿಸಿದ್ದಲ್ಲದೇ, ಇದರ ಬಗ್ಗೆ ವಿಚಾರಿಸಿ ಬೋಟ್ ಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ನಾಗರಾಜ್ (36) ಎಂಬುವವರು ಸಾಯಿ ಶ್ಯಾಮ್ ಹೆಸರಿನ ಬೋಟಿನ ಮಾಲೀಕರಾಗಿದ್ದು, ಜಗದೀಶ್ ಎಂಬುವವರೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರು. ಆರೋಪಿಗಳಾದ ಬಿ ಎನ್ ಅನ್ವ‌ರ್ ಮತ್ತು ಸಹಚರರು ಬೋಟನ್ನು ಧ್ವಂಸಗೊಳಿಸಿದ್ದು, ಅವರನ್ನು ವಿಚಾರಿಸಿದಾಗ ಜಗದೀಶ್ ಅವರ ನಿರ್ದೇಶನದ ಮೇರೆಗೆ ಕೃತ್ಯವೆಸಗಿದ್ದಾಗಿ, ನಾಗರಾಜ್ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ದೂರುದಾರರು ಜಗದೀಶ್ ಅವರನ್ನು ಸಂಪರ್ಕಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಬೋಟ್ ಮಾಲೀಕ ನಾಗರಾಜ್, “ಸಾಯಿ ಶ್ಯಾಮ್ ಫಿಶಿಂಗ್ ಬೋಟ್ನ್ನು ಉದ್ಯಾವರದ ನಿವಾಸಿ ಜಗದೀಶ್ ಕೆ ಅಮೀನ್ ರವರು ನನ್ನ ಜೊತೆ ಪಾಲುದಾರಿಕೆಯ ಮೂಲಕ ಪಿಶಿಂಗ್ ನಡೆಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಬೋಟಿನ ಮೂಲಕ ಮೀನುಗಾರಿಕೆ ನಡೆಸುತ್ತಿದ್ದೆವು. ಕಳೆದ 4 ವರ್ಷಗಳ ಹಿಂದೆ ಬೋಟ್ ದುರಸ್ತಿಗೆ ಬಂದಿತ್ತು. ಹಾಗಾಗಿ ಅದನ್ನು ಮಲ್ಪೆಯ ಬಾಪುತೋಟದ ದಕ್ಕೆಯಲ್ಲಿ ಇರಿಸಲಾಗಿತ್ತು” ಎಂದು ಹೇಳಿದರು.

“ಕಳೆದ ಜನವರಿ 11ರಂದು ಮಲ್ಪೆ ಬಾಪುತೋಟದಲ್ಲಿ ಸಂಜೆ ವೇಳೆಗೆ ಸ್ನೇಹಿತರೊಬ್ಬರು ನನಗೆ ದೂರವಾಣಿ ಕರೆ ಮಾಡಿ. ನಿಮ್ಮ ಬೋಟನ್ನು ಯಾರೋ 5 ಮಂದಿ ಧ್ವಂಸಗೊಳಿಸುತ್ತಿದ್ದಾರೆಂದು ತಿಳಿಸಿದ್ದರು. ಆ ಕೂಡಲೇ ಜಾಗಕ್ಕೆ ಪ್ರವೇಶಿಸಿದಾಗ ಬೋಟನ್ನು ಮಂಗಳೂರಿನ ಅನ್ವರ್ ಮತ್ತು ಇತರರು ಧ್ವಂಸಗೊಳಿಸುತ್ತಿರುವುದು ತಿಳಿದುಬಂತು. ಇದನ್ನು ನಾನು ವಿರೋಧಿಸಿದಾಗ ನಿಮ್ಮ ಬೋಟನ್ನು ನಿಮ್ಮ ಪಾಲುದಾರ ಜಗದೀಶ್ ಅಮೀನ್ ಒಡೆದು ಹಾಕಲು ಹೇಳಿದ್ದಾರೆಂದು ಅನ್ವ‌ರ್ ತಿಳಿಸಿದ್ದ. ಆ ಕೂಡಲೇ ನಾನು ಜಗದೀಶ್ ಅಮೀನ್ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದೆನು. ಅದಕ್ಕೆ ಅವರು ನಿನಗೆ ಈ ವಿಷಯ ಬೇಡ, ನೀನು ಬೋಟಿನ ಸುದ್ದಿಗೆ ಬಂದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದಾನೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಜಿಂದಾಲ್ ಕಂಪನಿಗೆ ತುಂಗಭದ್ರಾ ಜಲಾಶಯದಿಂದ ನೀರು; ಸರ್ಕಾರದ ವಿರುದ್ಧ ರೈತ ಸಂಘ ಕಿಡಿ

“ಸದ್ಯ ನನ್ನ ಮೌಲ್ಯಯುತ ಬೋಟನ್ನು ಮಂಗಳೂರಿನ ಅನ್ವ‌ರ್ ಮತ್ತು ಇತರ ನಾಲ್ಕು ಮಂದಿ ಅಕ್ರಮವಾಗಿ ಧ್ವಂಸಗೊಳಿಸಿದ್ದು, ಗುಜಿರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಪಾಲುದಾರ ಜಗದೀಶ್ ಅಮೀನ್ ಕುಮ್ಮಕ್ಕು ನೀಡಿ ನಮಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರ ನೀಡಿದ್ದೇನೆ” ಎಂದು ತಿಳಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...

ಹಾವೇರಿ | ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್‌ಐ-ಅಂಚೆ ಜೀವವಿಮೆ) ಮತ್ತು...

ಬಸವನ ಬಾಗೇವಾಡಿ | ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ: ಡಿಎಚ್‌ಒ ಸ್ಪಷ್ಟನೆಗೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ...