ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್‌ಆರ್‌ಎಸ್) ಉಡುಪಿ ಜಿಲ್ಲಾ ಘಟಕದ ವತಿಯಿಂದ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸುವ ಕುರಿತು ಹೂಡೆ ಸಾಲಿಹಾತ್ ಶಾಲೆಯ ಸಭಾಂಗಣದಲ್ಲಿ ಕಾರ್ಯಗಾರ ನಡೆಯಿತು.
ಕಾರ್ಯಗಾರದಲ್ಲಿ ಎಚ್‌ಆರ್‌ಎಸ್ ಕರಾವಳಿ ಭಾಗದ ಹೊಣೆಗಾರ ಹಾಗೂ ತರಬೇತುದಾರ ಸಲೀಂ ಅವರು ಪ್ರಥಮ ಚಿಕಿತ್ಸೆ, ಸಿಪಿಆರ್ (ಹೃದಯ-ಶ್ವಾಸಕೋಶ ಪುನರುಜ್ಜೀವನ) ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಚ್‌ಆರ್‌ಎಸ್ ಉಡುಪಿ ಜಿಲ್ಲಾ ಸಂಚಾಲಕ ಬಿಲಾಲ್ ಮಲ್ಪೆ, ತರಬೇತುದಾರ ಝುಬೇರ್ ಮಲ್ಪೆ ಉಪಸ್ಥಿತರಿದ್ದರು. ಅಬುಲೈಸ್ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಗನಿ ಜಾಮಿಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರೂಕ್ ಕಾರ್ಯಕ್ರಮ ನಿರೂಪಿಸಿದರು.






