ಉಡುಪಿ ನಗರದ ಕೊಡವೂರು ಸಮೀಪ ಇಂದು ಸಂಜೆ ಹೊಸ ಬಾವಿ ತೋಡುವ ಕಾಮಗಾರಿ ವೇಳೆ ಬಾವಿಯ ಮಣ್ಣು ಕುಸಿದ ಪರಿಣಾಮ ಓರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಘಟನೆ ನಡೆದಿದೆ.
ನಾಲ್ಕೈದು ಕಾರ್ಮಿಕರು ಬಾವಿ ತೋಡುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಬಾವಿಯ ಗೋಡೆ ಕುಸಿದಿದ್ದು, ಇದರ ಪರಿಣಾಮ ಓರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವುದಾಗಿ ತಿಳಿದು ಬಂದಿದೆ. ಉಳಿದ ಇಬ್ಬರು ಕಾರ್ಮಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳ ಸಿಬ್ಬಂದಿಗಳು ಆಗಮಿಸಿ ಸಿಲುಕಿರುವ ಕಾರ್ಮಿಕನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.





