ಬೆಳಗಾವಿ | ಅಪಾರ ಜಲಸಂಪತ್ತು ಇದ್ದೂ, ತೀರದ ನೀರಿನ ದಾಹ

Date:

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಹಿಡಕಲ್‌ ಡ್ಯಾಮ್ ಮತ್ತು ಶಿರೂರು ಜಲಾಶಯಗಳು ಹಾಗೂ ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ಎಂಬ ಮೂರು ನದಿಗಳು ಹರಿಯುತ್ತಿದ್ದರೂ ಕೂಡ ಈ ಭಾಗದ ರೈತರ ಭೂಮಿಗಳಿಗೆ ನೀರಿಲ್ಲ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ.

- Advertisement -

ಹುಕ್ಕೇರಿ ತಾಲೂಕಿನಲ್ಲಿ ಶೇಕಡಾ 60 ರಷ್ಟು ಕೃಷಿ ಜಮೀನು ಮಳೆಯನ್ನೇ ಅವಲಂಬಿಸಿದೆ. ಶಾಶ್ವತ ನೀರಾವರಿ ವ್ಯವಸ್ಥೆ ಕೊರತೆಯಿಂದ ರೈತರು ನಿರಂತರ ಸಂಕಷ್ಟ ಅನುಭವಿಸುತ್ತಿದ್ದಾರೆ.ಸಮಸ್ಯೆ ಪರಿಹಾರವಾಗದ ಕುರಿತು ರೈತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದು, ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

“ಕತ್ತಿ ಕುಟುಂಬ ಅತಿ ಹೆಚ್ಚು ಬಾರಿ ಹುಕ್ಕೇರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದೆ. ಆದರೆ ಈ ಭಾಗದ ರೈತರಿಗೆ ಸಮರ್ಪಕ ನೀರಾವರಿ ಯೋಜನೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ದಿವಂಗತ ಉಮೇಶ ಕತ್ತಿಯವರು ಸಚಿವರಾಗಿಯೂ, ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದರೂ ಸಹ ಈ ಭಾಗದ ರೈತರ ಜಮೀನುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ” ಎಂಬ ಅಸಮಾಧಾನ ಜನರಲ್ಲಿ ಇದೆ.

“ಸಚಿವ ಸತೀಶ ಜಾರಕಿಹೊಳಿಯವರು ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರಕ್ಕೆ ಹುಕ್ಕೇರಿ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತವೆ. ಅವರು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸ್ಥಾನದಲ್ಲಿದ್ದರೂ ಕೂಡ ಈ ಭಾಗಕ್ಕೆ ಸಮರ್ಪಕ ನೀರಾವರಿ ಯೋಜನೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ” ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ.

ನಮ್ಮಲ್ಲೇ ಸಾಕಷ್ಟು ಜಲಸಂಪನ್ಮೂಲಗಳಿವೆ. ಇಲ್ಲಿ ಎರಡು ಜಲಾಶಯಗಳಿವೆ, ಮೂರು ನದಿಗಳು ಹರಿಯುತ್ತವೆ. ಇಂತಹ ಸಮೃದ್ಧ ಜಲ ಸಂಪತ್ತಿನ ನಡುವೆಯೂ ರೈತರು ನೀರಿಗಾಗಿ ಪರದಾಡಲು ಕಾರಣವೇನು,? ಎಂಬುದು ಹುಕ್ಕೇರಿ ತಾಲೂಕಿನ ರೈತರ ಪ್ರಶ್ನೆ.

“ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಹಿಡಕಲ್‌ ಜಲಾಶಯದಿಂದ ಸುಮಾರು 110 ಕಿ.ಮೀ. ದೂರ ಪೈಪ್‌ಲೈನ್ ಮೂಲಕ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒದಗಿಸುತ್ತಿರುವ ವಿಷಯವು ಈಗ ಸ್ಥಳೀಯ ರೈತರಲ್ಲಿ ಚರ್ಚೆಗೆ ಕಾರಣವಾಗಿದ್ದು, ನಮ್ಮ ತಾಲೂಕಿನ ರೈತರ ಸಮಸ್ಯೆಗಳು ಇವರ ಕಣ್ಣಿಗೆ ಕಾಣಿಸುವದಿಲ್ಲವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ರೈತರ ಪ್ರಮುಖ ಬೇಡಿಕೆಗಳು:

1.ಸಂಕೇಶ್ವರ್ ಹಾಗೂ ಹುಕ್ಕೇರಿ ನಗರಗಳಲ್ಲಿ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ 24X7 ಕುಡಿಯುವ ನೀರಿನ ಯೋಜನೆ ಇದ್ದು ಅದು ಇದುವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿರುವುದಿಲ್ಲ, ಎರಡು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು.

2.ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆಯಲ್ಲಿ ಹುಕ್ಕೇರಿ, ಯಾದಗೂಡ ದಿಂದ ಕಣಗಲಾದವರೆಗೆ ಸುಮಾರು 21 ಹಳ್ಳಿಗಳು ಹಾಗೂ 9350 ಹೆಕ್ಟೇರ್ ಕೃಷಿ ಜಮೀನು ಸಂಪೂರ್ಣ ನೀರಾವರಿಯಾಗುತ್ತದೆ. ಸದರಿ ಯೋಜನೆಯ ಅಂದಾಜು ವೆಚ್ಚ 780 ಕೋಟಿ ಇದ್ದು ಸದರಿ ವೆಚ್ಚವನ್ನು ಈ ಕೂಡಲೇ ರಾಜ್ಯ ಸರ್ಕಾರ ಮಂಜೂರು ಮಾಡಬೇಕು.

3.ಶಿಪ್ಪರ ದಿಂದ ಹಡಲಗಾದವರೆಗೆ 12 ಗ್ರಾಮಗಳಿಗೆ ಹೊಸದಾಗಿ ಏತ ನೀರಾವರಿ ಯೋಜನೆ ಪ್ರಾರಂಭ ಮಾಡಬೇಕು.

4.ಕುರಣಿ ಏತ ನೀರಾವರಿ ಯೋಜನೆಯ ಕಾಲುವೆ ಆಧುನೀಕರಣಕ್ಕೆ ಸುಮಾರು 107 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಯೋಜನೆಯಿಂದ ಸುಮಾರು 09 ಹಳ್ಳಿಗಳು ಹಾಗೂ 1610 ಹೆಕ್ಟೇರ್ ಕೃಷಿ ಜಮೀನುಗಳಿಗೆ ಸಂಪೂರ್ಣ ನೀರಾವರಿ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.

5.ಕೋಚರಿ ಏತ ನೀರಾವರಿ ಯೋಜನೆಯ ಕಾಲುವೆ ಆಧುನೀಕರಣಕ್ಕೆ 90.29 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಯೋಜನೆಯಿಂದ ಸುಮಾರು 12 ಹಳ್ಳಿಗಳು ಹಾಗೂ 1712 ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಒದಗುತ್ತದೆ.

6.ರುಸ್ತೂಂಪುರ ಏತ ನೀರಾವರಿ ಯೋಜನೆಯ ಕಾಲುವೆ ಆಧುನೀಕರಣಕ್ಕೆ 15.00 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಯೋಜನೆಯಿಂದ ಸುಮಾರು 10 ಹಳ್ಳಿಗಳು ಹಾಗೂ 2709 ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಿಸಬಹುದು.

7.ದಡ್ಡಿ-ನಾಗನೂರ ಏತ ನೀರಾವರಿ ಯೋಜನೆಯ ಕಾಲುವೆ ಆಧುನೀಕರಣ ಆಗುವುದಾಗಬೇಕು, ಸದರಿ ಯೋಜನೆಯಿಂದ ಸುಮಾರು 14 ಹಳ್ಳಿಗಳು ಹಾಗೂ 1980 ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಯೋಜನೆ ದೊರಕುತ್ತದೆ.

8.ಅರಳಿಕಟ್ಟಿ ಮತ್ತು ಜಾರಕಿಹೊಳಿ ಏತ ನೀರಾವರಿ ಯೋಜನೆ ನಿರ್ಮಾಣ.

9.ಹತ್ತರಗಿ ಮತ್ತು ಗುಡಗನಟ್ಟಿ ಏತ ನೀರಾವರಿ ಯೋಜನೆ ನಿರ್ಮಾಣ.

10.ಉಳ್ಳಾಗಡ್ಡಿ ಖಾನಾಪೂರ ಕೆರೆ ತುಂಬುವ ಯೋಜನೆಯ 06 ಕೋಟಿ ರೂ. ಅಂದಾಜು ವೆಚ್ಚ ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ಚಿಕ್ಕಾಲಗುಡ್ಡ, ಉಳ್ಳಾಗಡ್ಡಿ ಖಾನಾಪೂರ ಗ್ರಾಮಗಳಿಗೆ ಯೋಜನೆಯ ಲಾಭವಾಗಲಿದ್ದು 670 ಹೆಕ್ಟೇರ್ ಜಮೀನು ಸಂಪೂರ್ಣ ನೀರಾವರಿ ಆಗಲಿದೆ.

11.ಅಡವಿ ಸಿದ್ದೇಶ್ವರ & ಶಂಕರಲಿಂಗ ಏತ ನೀರಾವರಿ ಯೋಜನೆಗಳು ಇದುವರೆಗೆ ಕೆಲಸ ಪ್ರಗತಿಯಲ್ಲಿದ್ದು, ಅವುಗಳು ಆದಷ್ಟು ಬೇಗ ರೈತರಿಗೆ ಉಪಯೋಗಿಸಲು ಕ್ರಮಕೈಗೊಳ್ಳಬೇಕು.

12.ಹಿಡಕಲ್ಲ ಡ್ಯಾಮ್ ಹೂಳೆತ್ತಬೇಕು.

13.ಬೈರಾಪುರ ಕೆರೆಯಲ್ಲಿನ ಸಂಪೂರ್ಣ ಹೂಳೆತ್ತಬೇಕು ಬೈರಾಪುರ ಕೆರೆಯಿಂದ ಎರಡು ಕಾಲುವೆಗಳು ಇದ್ದು ಅವು ಸಂಪೂರ್ಣ ಹಾಳಾಗಿದ್ದು ಅವುಗಳನ್ನು ರಿಪೇರಿ ಮಾಡಲೇಬೇಕು ಮತ್ತು ತಾಲೂಕಿನ ಬಹಳಷ್ಟು ಕೆರೆಗಳು ನೀರು ಬಸಿಯುತ್ತಿದ್ದು ನೀರು ಬಸಿಯದಂತೆ ನೋಡಿಕೊಳ್ಳಬೇಕು.

14.ಹುಕ್ಕೇರಿ ತಾಲೂಕಿನ 33 ಕೆರೆಗಳನ್ನು (ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ) ಹಿರಣ್ಯಕೇಶಿ ನದಿಯಿಂದ ನೀರು ತುಂಬುವ ಯೋಜನೆ ಹೆಸರಿಗಷ್ಟೇ ಇದೆ, ಸಂಪೂರ್ಣ ನೀರು ತುಂಬಲು ಪ್ರಾರಂಭ ಮಾಡಬೇಕು ಹುಕ್ಕೇರಿ ತಾಲೂಕಿನಲ್ಲಿ ಒಟ್ಟು 47ಕೆರೆಗಳಿದ್ದು ಆ ಕೆರೆಗಳ ನೀರಿನಿಂದ 4854ಹೆಕ್ಟೇರ್ ಕೃಷಿ ಜಮೀನು ಸಂಪೂರ್ಣ ನೀರಾವರಿ ಆಗುತ್ತದೆ.

ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಶಿವಪ್ಪ, “ನಮ್ಮ ತಾಲೂಕಿನಲ್ಲಿ ಹಿಡಕಲ್‌ ಡ್ಯಾಮ್, ಶಿರೂರು ಜಲಾಶಯ ಹಾಗೂ ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಹರಿಯುತ್ತಿವೆ. ಇಷ್ಟೊಂದು ಜಲಸಂಪನ್ಮೂಲ ಇದ್ದರೂ ನಮ್ಮ ಹೊಲಗಳಿಗೆ ನೀರು ಸಿಗುತ್ತಿಲ್ಲ. ನಾವು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ” ಎಂದು ಸಮಸ್ಯೆ ತೋಡಿಕೊಂಡರು.

ರೈತ ಸಿದ್ದಪ್ಪ ಮಾತನಾಡಿ, “ಶೇಕಡಾ 60 ರಷ್ಟು ಕೃಷಿ ಜಮೀನು ಮಳೆಯನ್ನೇ ಅವಲಂಬಿಸಿದೆ. ಮಳೆ ಕೈಕೊಟ್ಟರೆ ನಮ್ಮ ಬದುಕೇ ಸಂಕಷ್ಟಕ್ಕೆ ಸಿಲುಕುತ್ತದೆ. ಶಾಶ್ವತ ನೀರಾವರಿ ವ್ಯವಸ್ಥೆ ಅಗತ್ಯವಾಗಿದೆ. ಈ ಕುರಿತು ಅಧಿಕಾರಿಗಳು ರಾಜಕಾರಣಿಗಳು ಗಮನ ಹಿಸಬೇಕು” ಎಂದು ಆಗ್ರಹಿಸಿದರು.

ರೈತ ಪ್ರಕಾಶ ಮಾತನಾಡಿ, ” ಪ್ರಭಾವಿ ರಾಜಕಾರಣಿಗಳು ಇದ್ದರೂ ಈ ಊರಿನ ನೀರಾವರಿ ಸಮಸ್ಯೆ ಇನ್ನೂ ಬಗೆಹರಿಯಲಿಲ್ಲ. ನಮ್ಮ ಹೊಲಗಳಿಗೆ ನೀರು ತಲುಪಿಸುವಲ್ಲಿ ನಿರಂತರ ವಿಳಂಬ ನಡೆದಿದೆ. ರೈತರ ಕುರಿತು ಇಲಾಖೆಗೂ, ಅಧಿಕಾರಿಗಳಿಗೂ ಕಾಳಜಿ ಇಲ್ಲದಂತಾಗಿದೆ” ಎಂದು ಆರೋಪಿಸಿದರು.

ರೈತ ಲಕ್ಷ್ಮಣ ಮಾತನಾಡಿ “ನಮ್ಮ ಜಲಾಶಯಗಳ ನೀರು ಬೇರೆಡೆಗೆ ಹರಿಯುತ್ತಿದೆ. ಆದರೆ, ನಮ್ಮ ತಾಲ್ಲೂಕಿನ ರೈತರಿಗೆ ಮಾತ್ರ ನೀರಿಲ್ಲದೆ ಪರದಾಡುವ ಸಂಕಷ್ಟ ಒದಗಿದೆ, ಆದಷ್ಟು ಬೇಗ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.

ಹುಕ್ಕೇರಿ ತಾಲೂಕಿನಲ್ಲಿ ಅಪಾರ ಜಲಸಂಪನ್ಮೂಲಗಳು ಇದ್ದರೂ ರೈತರು ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿರುವುದು ಆಡಳಿತ ವ್ಯವಸ್ಥೆಯ ಗಂಭೀರ ವೈಫಲ್ಯವನ್ನು ಸೂಚಿಸುತ್ತದೆ. ಜಲಾಶಯಗಳು ಹಾಗೂ ನದಿಗಳು ಇದ್ದರೂ ಜನರು ನೀರಿಗಾಗಿ ಪರದಾಡುತ್ತಿರುವುದು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ರಾಜಕಾರಣಿಗಳ ನಿರಾಸಕ್ತಿಯನ್ನು ತೊರಿಸುತ್ತದೆ.

ರೈತರು ನಿರಂತರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರೂ ಶಾಶ್ವತ ಪರಿಹಾರ ದೊರಕದಿರುವುದು ವಿಷಾದನೀಯ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದೆ.

ರೈತರ ಹೊಲಗಳಿಗೆ ನೀರು ತಲುಪಿದಾಗ ಮಾತ್ರ ಗ್ರಾಮೀಣ ರೈತರ ಆರ್ಥಿಕತೆ ಬಲಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ರಾಜಕೀಯ ಚರ್ಚೆಗಳಿಗಿಂತಲೂ ಹೆಚ್ಚಾಗಿ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಈ ಭಾಗದ ಸಚಿವರು, ಶಾಸಕರು ಆದ್ಯತೆ ನೀಡುವುದು ಅವಶ್ಯಕವಾಗಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಲಾಪ್ರತಿಭೋತ್ಸವ: ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

ಮಕ್ಕಳು ಹಾಗೂ ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ...

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆಯಲಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ ಜೇಬಿಗೂ ಕತ್ತರಿ!

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ...

ಬೀದರ್‌ | ಮೊಬೈಲ್‌ಗಿಂತ ಕಲೆಯತ್ತ ಮಕ್ಕಳ ಆಸಕ್ತಿ ಹೆಚ್ಚಲಿ: ಸಿದ್ರಾಮ ಸಿಂಧೆ

ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವುದರಿಂದ ಅವರ ಸೃಜನಶೀಲ...